ಸೋಮವಾರ, ನವೆಂಬರ್ 30, 2020
21 °C

ಪ್ರಬಂಧ ಸ್ಪರ್ಧೆ: ಬಹುಮಾನ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಕನ್ನಡ ನಾಡು ನುಡಿ ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸುವ ಮೂಲಕ ಕನ್ನಡ ರಾಜ್ಯೋತ್ಸವವನ್ನು ಗೆಳೆಯರ ಬಳಗದ ಆಶ್ರಯದಲ್ಲಿ ಭಾನುವಾರ ಆಚರಿಸಲಾಯಿತು.

ತಾಯಿ ಭುವನೇಶ್ವರಿಗೆ ಪುಷ್ಪ ಅರ್ಪಿಸುವ ಮೂಲಕ ಸಮಾರಂಭವನ್ನು ಜ್ಞಾನಗಂಗಾ ಶಿಕ್ಷಣ ಸಮಿತಿಯ ಅಧ್ಯಕ್ಷ ಸಿ.ಎಂ. ಪಟ್ಟಣಶೆಟ್ಟಿ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆಯ ಜಾಗೃತಿ ಮೂಡಿಸುವಲ್ಲಿ ಜಿಲ್ಲೆಯ ಕನ್ನಡ ಕಟ್ಟಾಳುಗಳ ಕಾಣಿಕೆ ಬಹಳ ದೊಡ್ಡದು. ಗಳಗನಾಥ, ಶಾಂತಕವಿಗಳು, ಮಹಾದೇವ ಬಣಕಾರ, ಪಾಟೀಲ ಪುಟ್ಟಪ್ಪ, ಚಂಪಾ ಅವರಂಥವರು ಈ ನೆಲದವರು ಎಂಬುದು ಈ ಮಕ್ಕಳಿಗೆ ತಿಳಿಯಬೇಕು ಎಂದರು.

ಗೆಳೆಯರ ಬಳಗದ ಅಧ್ಯಕ್ಷ ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಸರ್ವಶ್ರೀ ವಿ.ಎಂ ಪತ್ರಿ, ಶಿವಕುಮಾರ ಹತ್ತಿ, ಮುಖ್ಯಶಿಕ್ಷಕ ವಿ.ವಿ. ಉಜ್ಜಯಿನಿಮಠ, ಎಸ್.ಬಿ. ನೀರಲಗಿ, ಉಮಾ ಹೊರಡಿ ಭಾಗವಹಿಸಿದ್ದರು.

ಪ್ರಬಂಧ ಸ್ಪರ್ಧೆಯ ವಿಜೇತರು: ಜ್ಞಾನಗಂಗಾ ಶಿಕ್ಷಣ ಸಮಿತಿಯ ಹಿರಿಯ ಪ್ರಾಥಮಿಕ ಶಾಲೆ: ಸಹನಾ ಮತ್ತೀಹಳ್ಳಿ (ಪ್ರಥಮ), ಲತಾ ಸುರಪುರಮಠ (ದ್ವಿತೀಯ),  ಆಶಾ ಪಟ್ಟಣಶೆಟ್ಟಿ (ತೃತೀಯ), ಕುಮಾರ ವಿನಾಯಕ ಸ್ಥಾವರಮಠ, ಭಾವನಾ ಚೌಟಗಿ ಹಾಗೂ ದಿಗಂತ ಚೌಟಗಿ (ಸಮಾಧಾನಕರ)

ಮಾಗಾವಿ ಚನಬಸಪ್ಪ ಪ್ರೌಢಶಾಲೆ: ಸುಮಾ ಸ್ಥಾವರಮಠ  (ಪ್ರಥಮ) ಮಲ್ಲಿಕಾರ್ಜುನ ನಾಡಗೌಡ (ದ್ವಿತೀಯ) ಹಾಗೂ ತೇಜಶ್ವಿನಿ ಪಟ್ಟಣಶೆಟ್ಟಿ (ತೃತೀಯ). 

ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ: ಪ್ರಿಯಾಂಕಾ ಅಂಬಲಿ (ಪ್ರಥಮ) ಚಂದನಾ ಎಸ್.ಎಸ್. (ದ್ವಿತೀಯ) ಹಾಗೂ ಕಿಶನ್ ಹೆಬ್ಬಾರೆ (ತೃತೀಯ).

ಆಂಗ್ಲ ಮಾಧ್ಯಮ ಪ್ರೌಢಶಾಲೆ: ಮನು ದೊಡ್ಡಮನಿ (ಪ್ರಥಮ) ಅನುಷಾ ದೊಡ್ಡಮನಿ (ದ್ವಿತೀಯ) ಹಾಗೂ ಅಶ್ವಿನಿ ಹೊಸಮನಿ (ತೃತೀಯ). ಒಟ್ಟು 50 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.