ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಟ್ಟೀಹಳ್ಳಿ: ಆ.5ರಂದು ರೈತ ಸಂಘದಿಂದ ಪ್ರತಿಭಟನೆ

Published 3 ಆಗಸ್ಟ್ 2024, 16:24 IST
Last Updated 3 ಆಗಸ್ಟ್ 2024, 16:24 IST
ಅಕ್ಷರ ಗಾತ್ರ

ರಟ್ಟೀಹಳ್ಳಿ: ‘ರೈತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ತಾಲ್ಲೂಕು ರೈತ ಸಂಘದಿಂದ ಆ.5ರಂದು ಹಿರೇಕೆರೂರ ತಹಶೀಲ್ದಾರ್‌ ಕಚೇರಿ ಎದುರು ಬೃಹತ್ ಪ್ರತಿಭಟನೆ ಮಾಡಲಾಗುವುದು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಹೇಳಿದರು.

ರಟ್ಟೀಹಳ್ಳಿ ನಡೆದ ಸಂಘಟನೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ತುಂಗಾ ಮೇಲ್ದಂಡೆ ಯೋಜನೆಯ ಅನುಷ್ಠಾನಕ್ಕೆ ಹೋರಾಟ ನಡೆಸಿದವರು, ಭೂಮಿ ಕಳೆದುಕೊಂಡ ರೈತರಿಗೆ ಇನ್ನೂ ಏಕೆ ಪರಿಹಾರ ಕೊಡಿಸಿಲ್ಲ.ರೈತರು ಕೋರ್ಟಿಗೆ ಅಲೆದಾಡುವುದು ಇನ್ನೂ ತಪ್ಪಿಲ್ಲ. ಸರ್ಕಾರಗಳು ಬೆಳೆ ಪರಿಹಾರ, ಬೆಳೆ ವಿಮೆ ನೀಡುವಲ್ಲಿ ಮೋಸ ಮಾಡುತ್ತಿವೆ’ ಎಂದು ದೂರಿದರು.

ತಾಲ್ಲೂಕು ರೈತ ಸಂಘಟನೆಯ ಅಧ್ಯಕ್ಷ ಶಂಕರಗೌಡ ಶಿರಗಂಬಿ ಮಾತನಾಡಿ, ‘ಬೆಳೆವಿಮೆ ತುಂಬಲು ವಿಮಾ ಕಂಪನಿಗಳು ರೈತರಿಗೆ ಅಂತಿಮ ದಿನಾಂಕದ ಗಡುವು ನೀಡುತ್ತವೆ. ಆದರೆ ವಿಮೆ ಬಿಡುಗಡೆಗೆ ವಿಳಂಬ ಧೋರಣೆ ಅನುಸರಿಸುತ್ತವೆ. ಇದು ರೈತರಿಗೆ ಮಾಡುತ್ತಿರುವ ಅನ್ಯಾಯ’ ಎಂದರು.

ಸಂಘಟನೆಯ ತಾಲ್ಲೂಕು ಘಟಕದ ಗೌರವಾಧ್ಯಕ್ಷ ಬಸನಗೌಡ ಗಂಗಪ್ಪನವರ ಮಾತನಾಡಿದರು.

 ಈ ವೇಳೆ  ಕೋಡಮಗ್ಗಿ ಹಾಗೂ ರಟ್ಟೀಹಳ್ಳಿ ಘಟಕದ ರೈತ ಸಂಘಟನೆಯ ಪದಾಧಿಕಾರಿಗಳಿಗೆ ಗುರುತಿನ ಚೀಟಿ ವಿತರಿಸಲಾಯಿತು.

ಸಭೆಯಲ್ಲಿ ರೈತ ಸಂಘಟನೆಯ ಶಂಭು ಮುತ್ತಗಿ, ರಾಜು ಮುತ್ತಗಿ, ಎಚ್.ಎಚ್.ಮುಲ್ಲಾ, ಎ.ಆರ್.ಮಣಕೂರು, ಯಶವಂತ ಯಡಗೋಡ, ಉಜಿನೆಪ್ಪ ಕೋಡಿಹಳ್ಳಿ, ರಾಜು ಮಳಗೊಂಡರ, ಫೈಯಾಜಸಾಬ ದೊಡ್ಡಮನಿ, ಪ್ರಭು ಮುದಿವೀರಣ್ಣನವರ, ನಾಗಪ್ಪ ನಿಂಬೆಗೊಂದಿ, ಪ್ರಭುಗೌಡ ಯಡಚಿ, ಸುರೇಶ ನಾಯ್ಕ್, ಮಲ್ಲನಗೌಡ ಮಾಳಗಿ, ಸೇರಿದಂತೆ ಹಲವು ರೈತರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT