ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ | ದೀಪಾವಳಿ: ಪಟಾಕಿ ಮಾರಾಟಕ್ಕೆ ಸ್ಥಳ ನಿಗದಿ

Published : 9 ನವೆಂಬರ್ 2023, 15:48 IST
Last Updated : 9 ನವೆಂಬರ್ 2023, 15:48 IST
ಫಾಲೋ ಮಾಡಿ
Comments

ಹಾವೇರಿ: ದೀಪಾವಳಿ ಹಬ್ಬದ ಅಂಗವಾಗಿ ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ಹಾಗೂ ಅಹಿತಕರ ಘಟನೆಗಳನ್ನು ತಪ್ಪಿಸಲು ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ನ.6ರಿಂದ ನ.20ರವರೆಗೆ ಪಟಾಕಿ ಮಾರಾಟ ಮಾಡಲು ಸ್ಥಳ ನಿಗದಿಗೊಳಿಸಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಆದೇಶ ಹೊರಡಿಸಿದ್ದಾರೆ.

ಅಧಿಕೃತವಾಗಿ ಪರವಾನಗಿ ಪಡೆದ ಮಾರಾಟಗಾರರು ಮಾತ್ರ ಕೇವಲ ಹಸಿರು ಪಟಾಕಿಗಳನ್ನಷ್ಟೇ ತಾತ್ಕಾಲಿಕ ಶೆಡ್‌ಗಳನ್ನು ಅಗ್ನಿಶಾಮಕ ಇಲಾಖೆಯ ನಿರ್ದೇಶನದಂತೆ ನಿರ್ಮಿಸಿಕೊಂಡು, ಎಲ್ಲ ಸುರಕ್ಷತಾ ವ್ಯವಸ್ಥೆಗಳನ್ನು ಅಳವಡಿಸಿಕೊಂಡು, ಆಯಾ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಯವರಿಂದ ಪ್ರತ್ಯೇಕ ಅನುಮತಿ, ನಿರಾಕ್ಷೇಪಣಾ ಪತ್ರ ಪಡೆದುಕೊಂಡು ಮಾರಾಟ ಮಾಡಲು ಆದೇಶಿಸಲಾಗಿದೆ.

ಮದ್ದು ಮಾರಾಟ ಸ್ಥಳ: ಹಾವೇರಿ ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನ, ಹೊಸರಿತ್ತಿ ಗ್ರಾಮದ ಶಿರಡಿ ನಗರದ ಆಸ್ತಿ ನಂ.1066 ಪ್ಲಾಟ್, ಬ್ಯಾಡಗಿ ಹಾಗೂ ರಾಣೆಬೆನ್ನೂರು ತಾಲ್ಲೂಕು ಕ್ರೀಡಾಂಗಣ, ಹಿರೇಕೆರೂರು ಪೊಲೀಸ್ ಮೈದಾನದ ಬಯಲು ಪ್ರದೇಶ, ಚಿಕ್ಕೇರೂರು ಗ್ರಾಮ ಪಂಚಾಯಿತಿ ಆಸ್ತಿ ನಂ.1086/21ರ ಖುಲ್ಲಾ ಜಾಗ, ಹಂಸಭಾವಿ ಗ್ರಾಮ ಸರ್ವೆ ನಂ.147/4 ಆಸ್ತಿ ನಂ.1075/ಎ ಖುಲ್ಲಾ ಜಾಗ, ಶಿಗ್ಗಾವಿ ಪುರಸಭೆ ವ್ಯಾಪ್ತಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಬಯಲು ಜಾಗ, ಬಂಕಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಯಲು ಪ್ರದೇಶ, ಸವಣೂರು ಹಾಗೂ ಹಾನಗಲ್ ತಾಲ್ಲೂಕು ಕ್ರೀಡಾಂಗಣ, ಆಕ್ಕಿಆಲೂರು ಗ್ರಾಮ ಪಂಚಾಯಿತಿ ಆಸ್ತಿ ನಂ.161ರ ಖುಲ್ಲಾ ಜಾಗ, ರಟ್ಟಿಹಳ್ಳಿ ಪಟ್ಟಣದ ರಿ.ಸ.ನಂ.87,88 ಖುಲ್ಲಾ ಜಾಗ, ಮಾಸೂರ ಗ್ರಾಮದ ರಿ.ಸ.ನಂ. 982/ಎ ಖುಲ್ಲಾ ಜಾಗ ಹಾಗೂ ಹಿರೇಮೊರಬ ಗ್ರಾಮದ ರಿ.ಸ.ನಂ.147/2 ಖುಲ್ಲಾ ಜಾಗ ನಿಗದಿಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT