ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ: ಪ್ಲೈಯಿಂಗ್ ಸ್ಕ್ವಾಡ್ ರಚನೆ

Last Updated 31 ಮಾರ್ಚ್ 2020, 10:50 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯಲ್ಲಿ ಕೊರೊನಾವೈರಸ್ ಸೋಂಕು ಹರಡದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಹಾವೇರಿ ಉಪವಿಭಾಗದ ಹಾವೇರಿ, ರಾಣೇಬೆನ್ನೂರು, ಬ್ಯಾಡಗಿ, ಹಿರೇಕೆರೂರು ಹಾಗೂ ರಟ್ಟೀಹಳ್ಳಿ ತಾಲ್ಲೂಕುಗಳಲ್ಲಿ ಫ್ಲೈಯಿಂಗ್‌ ಸ್ಕ್ವಾಡ್‍ಗಳನ್ನು ರಚಿಸಿ ಉಪವಿಭಾಗಾಧಿಕಾರಿ ಡಾ.ದಿಲೀಷ್ ಶಶಿ ಆದೇಶ ಹೊರಡಿಸಿದ್ದಾರೆ.

ಹಾವೇರಿ ತಾಲ್ಲೂಕಿನ ಹಾವೇರಿ ಹೋಬಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ಪಾಟೀಲ (94806 95248), ಕರ್ಜಗಿ ಹೋಬಳಿಗೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಡಕಲಿ (82779 31812), ಗುತ್ತಲ ಹೋಬಳಿಗೆ ಬಿ.ಸಿ.ಎಂ. ವಿಸ್ತರಣಾಧಿಕಾರಿ ವಾಲ್ಮೀಕಿ ನಾಯಕ್ (63610 08343) ಅವರನ್ನು ನೇಮಕ ಮಾಡಲಾಗಿದೆ.

ಬ್ಯಾಡಗಿ ತಾಲ್ಲೂಕಿನ ಬ್ಯಾಡಗಿ ಹೋಬಳಿಗೆ ಬ್ಯಾಡಗಿ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಪರಶುರಾಮ ಪೂಜಾರ (97400 90877), ಕಾಗಿನೆಲೆ ಹೋಬಳಿಗೆ ದೈಹಿಕ ಶಿಕ್ಷಣಾಧಿಕಾರಿಗಳಾದ ಬಿ.ಎಚ್.ಎನ್. ರಾವಳ (99866 30697) ಅವರನ್ನು ನೇಮಕ ಮಾಡಲಾಗಿದೆ.

ರಾಣೆಬೆನ್ನೂರು ತಾಲ್ಲೂಕಿನ ರಾಣೆಬೆನ್ನೂರು ಹೋಬಳಿಗೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ರಾಮಕೃಷ್ಣ (97389 68309), ಮೆಡ್ಲೇರಿ ಹೋಬಳಿಗೆ ವನ್ಯ ಜೀವಿ ವಿಭಾಗ ವಲಯ ಅರಣ್ಯಾಧಿಕಾರಿಗಳಾದ ಎಂ.ಎಸ್. ನ್ಯಾಮತಿ (96113 41933), ಕುಪ್ಪೆಲೂರು ಹೋಬಳಿಗೆ ವಲಯ ಅರಣ್ಯಾಧಿಕಾರಿಗಳು ರೆಗ್ಯುಲರ್ ವಿಭಾಗದ ರವಿ ಹುಲಕೋಟಿ (70192 20876) ಅವರನ್ನು ನೇಮಕ ಮಾಡಲಾಗಿದೆ.

ಹಿರೇಕೆರೂರು ತಾಲ್ಲೂಕಿನ ಹಿರೇಕೆರೂರು ಹೋಬಳಿಗೆ ಬಿ.ಸಿ.ಎಂ ತಾಲ್ಲೂಕು ವಿಸ್ತರಣಾಧಿಕಾರಿ ಕೆ. ಶಿವಮೂರ್ತಿ (98451 85717), ಹಂಸಭಾವಿ ಹೋಬಳಿಗೆ ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿಗಳಾದ ಪಿ.ಬಿ. ನಿಂಗನಗೌಡ್ರ (9980087150) ಅವರನ್ನು ನೇಮಕ ಮಾಡಲಾಗಿದೆ.

ರಟ್ಟಿಹಳ್ಳಿ ತಾಲ್ಲೂಕಿನ ಇಂಗಳಗೊಂದಿ, ಚಿಕ್ಕಯಡಚಿ, ಹುಲ್ಲತ್ತಿ, ನೇಸ್ವಿ, ಕುಂಚೂರು, ಮಕರಿ, ಕುಡಪಲಿ, ಕಡೂರು, ಕಣ್ವಿಸಿದ್ಧಗೇರಿ ಹೋಬಳಿಗಳಿಗೆ ತಾಲೂಕಾ ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳು (99168 63256), ಶಿರಂಬಿ, ಮಾಸೂರು, ಅಣಜಿ, ಹಿರೇಮೊರಬ, ಕೋಡಮಗ್ಗಿ, ಮೇದೂರು, ನಾಗವಂದ, ತಡಕನಹಳ್ಳಿ, ಹಳ್ಳುರು, ಹಿರೇಕಬ್ಬಾರ ಹೋಬಳಿಗಳಿಗೆ ರಟ್ಟಿಹಳ್ಳಿಯ ತುಂಗಾ ಮೇಲ್ದಂಡೆ ಯೋಜನೆಯ ಎ.ಇ.ಇ. ಮುಕುಂದರಾಜ (94499 35139) ಅವರನ್ನು ನೇಮಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಖಾಸಗಿ ಆಸ್ಪತ್ರೆ ತೆರೆಯಲು ಸೂಚನೆ:

ಹಾವೇರಿ: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಜಿಲ್ಲಾಡಳಿತವು ವ್ಯಾಪಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಹಾವೇರಿ ಉಪವಿಭಾಗದ ಎಲ್ಲಾ ಖಾಸಗಿ ಆಸ್ಪತ್ರೆಗಳು, ನರ್ಸಿಂಗ್ ಹೋಮ್‍ಗಳು ಹಾಗೂ ಲ್ಯಾಬ್‍ಗಳು ಎಂದಿನಂತೆ ಕಾರ್ಯನಿರ್ವಹಿಸಬೇಕು ಎಂದು ಉಪವಿಭಾಗಾಧಿಕಾರಿ ಡಾ.ದಿಲೀಷ್ ಶಶಿ ಸೂಚನೆ ನೀಡಿದ್ದಾರೆ.

ಸಾರ್ವಜನಿಕರು ಅನಾರೋಗ್ಯದ ನಿಮಿತ್ತ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಿದ್ದು, ಕೆಲವೊಂದು ಖಾಸಗಿ ಆಸ್ಪತ್ರೆಗಳು ಬಂದ್ ಮಾಡಿರುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಎಲ್ಲಾ ಖಾಸಗಿ ಆಸ್ಪತ್ರೆಗಳು, ನರ್ಸಿಂಗ್ ಹೋಮ್‍ಗಳು ಹಾಗೂ ಲ್ಯಾಬ್‍ಗಳು ಎಂದಿನಂತೆ ಕಾರ್ಯನಿರ್ವಹಿಸಬೇಕು. ಒಂದೊಮ್ಮೆ ಸಾರ್ವಜನಿಕರಿಗೆ ವೈದ್ಯಕೀಯ ಸೇವೆ ಒದಗಿಸದೇ ಅನಿರ್ದಿಷ್ಟಾವಧಿ ಕಾಲ ಬಂದ್ ಮಾಡಿರುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ನಿಯಮಾನುಸಾರ ಕ್ರಮವಹಿಸಲಾಗುವುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT