ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಮಠದಿಂದ ಉಪಾಹಾರ ವಿತರಣೆ

Last Updated 9 ಏಪ್ರಿಲ್ 2020, 9:59 IST
ಅಕ್ಷರ ಗಾತ್ರ

ಹಾವೇರಿ: ಲಾಕ್‌ಡೌನ್‌ ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರು, ಪೊಲೀಸ್‌ ಸಿಬ್ಬಂದಿ, ಪತ್ರಿಕಾ ಏಜೆಂಟರು ಮತ್ತು ವಿತರಕರಿಗೆ ಹಾವೇರಿ ಬಸವಕೇಂದ್ರ ಹೊಸಮಠದ ವತಿಯಿಂದ ಬಸವಶಾಂತಲಿಂಗ ಶ್ರೀಗಳು ಗುರುವಾರ ಉಪಾಹಾರ ಹಾಗೂ ಮಾಸ್ಕ್ ವಿತರಿಸಿದರು.

ಕೊರೊನಾ ಸೋಂಕು ತಡೆಗಟ್ಟುವಲ್ಲಿ ಶ್ರಮಿಸುತ್ತಿರುವ ಪೌರಕಾರ್ಮಿಕರು ಮತ್ತು ಪೊಲೀಸ್‌ ಸಿಬ್ಬಂದಿಗೆ ಮಠದ ವತಿಯಿಂದ ಕೃತಜ್ಞತೆ ಸಲ್ಲಿಸುವ ಸಲುವಾಗಿ ಉಪಾಹಾರ ವಿತರಿಸಿದ್ದೇವೆ. ಕೋವಿಡ್‌–19 ಅತ್ಯಗತ್ಯ ಸೇವೆಯಲ್ಲಿ ತೊಡಗಿರುವ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಎಲ್ಲರಿಗೂ ಶ್ರೀಮಠ ಅಭಿನಂದನೆ ತಿಳಿಸುತ್ತದೆ ಎಂದು ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು.

ನಾಗೇಂದ್ರ ಕಟಕೋಳ, ದಯಾನಂದ ಯಡ್ರಾಮಿ, ಎಸ್ಎಫ್ಎನ್ ಗಾಜಿ ಗೌಡ್ರು, ನಗರಸಭೆ ಸದಸ್ಯ ಸಂಜೀವಕುಮಾರ ನಿರಲಗಿ, ಡಾ.ಬಸವರಾಜ್ ವೀರಾಪುರ್, ಪ್ರಕಾಶ್ ಶೆಟ್ಟರ್, ಇಂದೂಧರ ಯರೇಶಿಮಿ, ಮುರಿಗೆಪ್ಪ ಕಡೆಕೊಪ್ಪ, ಕಬ್ಬಿಣಕಂತಿಮಠ, ಲಾಲುಸಾಬ್ ಚೌಪದಾರ, ಜಯದೇವ ಕೆರೋಡಿ, ಜಿ.ಪಂ. ಮಾಜಿ ಅಧ್ಯಕ್ಷ ಪರಮೇಶ್ವರಪ್ಪ ಮೇಗಳಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT