ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಹಾನಾಗೆ ನಾಲ್ಕು ಚಿನ್ನದ ಪದಕ

Last Updated 4 ಜೂನ್ 2022, 12:46 IST
ಅಕ್ಷರ ಗಾತ್ರ

ಹಾವೇರಿ: ದೇವಿಹೊಸೂರು ತೋಟಗಾರಿಕಾ ಅಭಿಯಾಂತ್ರಿಕ ಮತ್ತು ಆಹಾರ ತಂತ್ರಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿನಿ ಸುಹಾನಾ ಭೀಮಯ್ಯ ಅವರು ಬಿ.ಟೆಕ್. (ಆಹಾರ ತಂತ್ರಜ್ಞಾನ) ಪದವಿಯಲ್ಲಿ ತೋಟಗಾರಿಕಾ ವಿ.ವಿ.ಯಲ್ಲೇ ಅತ್ಯಧಿಕ ಅಂಕ ಪಡೆದು ನಾಲ್ಕು ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ.

ಸುಹಾನಾ ಅವರು ಬಾಗಲಕೋಟೆ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಕೊಡಮಾಡುವ ಎರಡು ಚಿನ್ನದ ಪದಕ, ದೇವಿಹೊಸೂರು ಆವರಣದ ಶಿಕ್ಷಕ ಮತ್ತು ಶಿಕ್ಷಕೇತರ ಹೆಸರಿನಲ್ಲಿರುವ ಚಿನ್ನದ ಪದಕ ಹಾಗೂ ಬೆಂಗಳೂರಿನ ಮೆ.ಇಂಡಸ್ ಮತ್ತು ಬರ್ಫಿ ಪ್ರೈ. ಲಿ. ಕಂಪನಿಯವರು ಕೊಡಮಾಡುವ ದಿವಂಗತ ಸೀತಾ ಭಟ್ ಸ್ಮಾರಕ ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ.

ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಇತ್ತೀಚಿಗೆ ಜರುಗಿದ 11ನೇ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲರು ಹಾಗೂ ವಿ.ವಿ.ಯ ಕುಲಾಧಿಪತಿಗಳೂ ಆದ ಥಾವರ್‌ಚಂದ್‌ ಗೆಹ್ಲೋಟ್ ಅವರಿಂದ ಚಿನ್ನದ ಪದಕಗಳನ್ನು ಸ್ವೀಕರಿಸಿದರು.

ಸುಹಾನ್ ಪ್ರಸ್ತುತ ತಮಿಳುನಾಡಿನ ತಂಜಾವೂರಿನಲ್ಲಿರುವ ಎನ್‌.ಐ.ಎಫ್‌.ಟಿ.ಇ.ಎಂ. ಸಂಸ್ಥೆಯಲ್ಲಿ ಸ್ನಾತ್ತಕೋತ್ತರ (ಎಂ.ಟೆಕ್‌) ಪದವಿಯ ಆಹಾರ ಸಂಸ್ಕರಣಾ ಅಭಿಯಾಂತ್ರಿಕ ವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. 2021ರಲ್ಲಿ ನವದೆಹಲಿಯಲ್ಲಿರುವ ಐ.ಸಿ.ಎ.ಆರ್. ನಡೆಸುವ ರಾಷ್ಟ್ರಮಟ್ಟದ ಸ್ನಾತಕೋತ್ತರ ಪದವಿ ಪ್ರವೇಶದ ಅರ್ಹತಾ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್‌ ಪಡೆದು ದೇವಿಹೊಸೂರಿನ ಆಹಾರ ತಂತ್ರಜ್ಞಾನ ಮಹಾವಿದ್ಯಾಲಯವು ಸತತವಾಗಿ ಎರಡನೇ ಬಾರಿ ಪ್ರಥಮ ಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT