ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮ್ಮೇಳನದಲ್ಲಿ ಗಳಗನಾಥರ ಗೋಷ್ಠಿ: ಮಹೇಶ ಜೋಶಿ ಭರವಸೆ

Last Updated 9 ಡಿಸೆಂಬರ್ 2021, 15:30 IST
ಅಕ್ಷರ ಗಾತ್ರ

ಹಾವೇರಿ: ‘ಗಳಗನಾಥರ ಕೃತಿಗಳು ಕನ್ನಡಿಗರ ಮನೆ–ಮನೆಗಳಿಗೆ ತಲುಪಬೇಕು. ಹಾವೇರಿಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗಳಗನಾಥರ ಬದುಕು ಬರಹ ಕುರಿತು ಗೋಷ್ಠಿಯೊಂದನ್ನು ಆಯೋಜಿಸಲಾಗುವುದು’ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಮಹೇಶ ಜೋಶಿ ಭರವಸೆ ನೀಡಿದರು.

ಸ್ಥಳೀಯ ರಾಜೇಂದ್ರನಗರದ ವೆಂಕಟೇಶ ಗಳಗನಾಥರ ‘ಮಾಧವ ಕರುಣಾ ವಿಲಾಸ’ ನಿವಾಸದಲ್ಲಿ ಕನ್ನಡ ಕಾದಂಬರಿ ಪಿತಾಮಹ ಗಳಗನಾಥ ಪ್ರತಿಷ್ಠಾನದ ಗೌರವ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಗಳಗನಾಥರಿಗೆ ಸಲ್ಲಬೇಕಾದ ಗೌರವ ಸಿಕ್ಕಿಲ್ಲದಿರುವುದು ಕಳವಳಕಾರಿ. ಗಳಗನಾಥ ಗ್ರಾಮದಲ್ಲಿ ಗಳಗನಾಥರ ಮನೆ ಜೀರ್ಣೊದ್ಧಾರ, ಸ್ಮಾರಕ ನಿರ್ಮಾಣ ಕುರಿತು ಪ್ರಾಚ್ಯ ಸಂಶೋಧನಾ ಇಲಾಖೆಯೊಡನೆ ಸಂಪರ್ಕಿಸುವುದಾಗಿ ತಿಳಿಸಿದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಎರಡನೇ ಬಾರಿಗೆ ಆಯ್ಕೆಯಾದ ಲಿಂಗಯ್ಯ ಹಿರೇಮಠ ಅವರನ್ನು ವೆಂಕಟೇಶ ಗಳಗನಾಥ ಮತ್ತು ಅಶ್ವಿನಿ ದಂಪತಿ ಗೌರವಿಸಿದರು. ಪ್ರಭಾಕರರಾವ್ ಮಂಗಳೂರ, ಹನುಮಂತಗೌಡ ಗೊಲ್ಲರ, ನಿಜಲಿಂಗಪ್ಪ ಚನ್ನಪ್ಪ ಕಾಸಂಬಿ, ಕೆ.ಸಿ ಕೋರಿ, ರಾಜೇಂದ್ರ ರಿತ್ತಿ, ಫಕ್ಕೀರಗೌಡ ಮಂಟಗಣಿ ಹಾಗೂ ಶ್ರೀನಿವಾಸಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT