ಮಹಾತ್ಮರನ್ನು ದೇವರು ಮಾಡಬೇಡಿ: ಡಾ.ಮಹಾದೇವಿ ಕಣವಿ

7
ಗಾಂಧೀಜಿ 150ನೇ ಜನ್ಮ ವರ್ಷಾಚರಣೆ ಹಾಗೂ ಲಾಲ್‌ಬಹದ್ದೂರ ಶಾಸ್ತ್ರಿ ಜಯಂತಿ

ಮಹಾತ್ಮರನ್ನು ದೇವರು ಮಾಡಬೇಡಿ: ಡಾ.ಮಹಾದೇವಿ ಕಣವಿ

Published:
Updated:
Deccan Herald

ಹಾವೇರಿ: ಮಹಾತ್ಮ ಗಾಂಧಿಯನ್ನು ದೇವರು ಮಾಡಬೇಡಿ. ಅವರ ತತ್ವಗಳನ್ನು ಬಳಕೆ ಮಾಡುವ ಬದಲಾಗಿ, ಬದುಕಿನಲ್ಲಿ ಅನುಸರಿಸಬೇಕಾಗಿದೆ ಎಂದು ಲೇಖಕಿ ಡಾ.ಮಹಾದೇವಿ ಕಣವಿ ಹೇಳಿದರು.

ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಸಹಯೋಗದಲ್ಲಿ ಇಲ್ಲಿ ಮಂಗಳವಾರ ನಡೆದ ‘ಗಾಂಧೀಜಿ 150ನೇ ಜನ್ಮ ವರ್ಷಾಚರಣೆ ಹಾಗೂ ಲಾಲ್‌ ಬಹದ್ದೂರ ಶಾಸ್ತ್ರಿ ಜಯಂತಿ’ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಮಹಾವೀರ, ಬಸವಣ್ಣ, ಗಾಂಧೀಜಿ ಸೇರಿದಂತೆ ಮಹಾತ್ಮರನ್ನು ದೇವರು ಮಾಡಿ ದೂರ ಮಾಡುತ್ತೇವೆ. ಇನ್ನೂ ಕೆಲವರು ಅವರನ್ನು ಬಳಸಿಕೊಳ್ಳುತ್ತಾರೆಯೇ ವಿನಾಃ ಅನುಸರಿಸುವುದಿಲ್ಲ. ಮತ್ತೆ ಕೆಲವರು ಬಹುಮುಖಿ ವ್ಯಕ್ತಿತ್ವವನ್ನು ಒಂದು ದೃಷ್ಟಿಕೋನದಿಂದ ನೋಡುತ್ತಾರೆ. ಇದರಿಂದ ಮಹಾತ್ಮರು ನಿರೀಕ್ಷಿಸಿದ ಪರಿವರ್ತನೆ ಸಾಧ್ಯವಿಲ್ಲ ಎಂದರು.

ಗಾಂಧೀಜಿ ಮನುಜ ಧರ್ಮಕ್ಕೆ ಸೇರಿದ್ದರು. ದೇಶ ವಿಭಜನೆಯು ಅವರ ಕಣ್ಣೆದುರೇ ನಡೆದ ದುರಂತವಾಗಿತ್ತು. ಇಂತಹ ಹಲವು ನೋವು ಅನುಭವಿಸಿದರೂ, ‘ನನ್ನ ಜೀವನವೇ ಸಂದೇಶ’ ಎಂಬಂತೆ ಬದುಕಿದ್ದರು ಎಂದರು.

‘ಮಾರೋ ನಹೀ ಮರೋ’ (ಕೊಲ್ಲಬೇಡ, ಕೊಲ್ಲು) ಎಂದು ದುಶ್ಚಟಗಳ ಬಗ್ಗೆ ಶಾಸ್ತ್ರಿ ಹೇಳಿದ್ದರು ಎಂದರು.

ಶ್ರೀಮಂತ, ನಗರ ಕೇಂದ್ರಿಂತ ಹೋರಾಟದಿಂದ ಪರಿವರ್ತನೆ ಅಸಾಧ್ಯ ಎಂದು ಮನಗಂಡ ಗಾಂಧಿ, ರೈಲಿನ ಮೂರನೇ ದರ್ಜೆ ಬೋಗಿಯಲ್ಲಿ ದೇಶದೆಲ್ಲೆಡೆ ಸಂಚರಿಸುವ ಮೂಲಕ ಎಲ್ಲರನ್ನು ಮುಖ್ಯವಾಹಿನಿಗೆ ತಂದರು. ‘ಸತ್ಯಾಗ್ರಹ’ ಎಂದರೆ ದೇಹ ಮತ್ತು ಮನಸ್ಸಿನ ನಿಗ್ರಹವೇ ಹೊರತು, ಯಾರನ್ನೋ ನಿಯಂತ್ರಿಸುವುದಲ್ಲ ಎಂದು ಹೇಳಿದರು. ಆದರೆ, ಈಗ ‘ಸತ್ಯಾಗ್ರಹ’ದ ಹೆಸರಿನಲ್ಲಿ ನಡೆಯುತ್ತಿರುವುದೇ ಬೇರೆ ಎಂದರು.

ಜಿಲ್ಲೆಯಲ್ಲಿ ಗಾಂಧಿ ಕುರಿತ ಇತಿಹಾಸದ ಹೆಜ್ಜೆಗಳನ್ನು ದಾಖಲಿಸಿ, ಯುವ ಪೀಳಿಗೆಗೆ ಅವರ ಸಂದೇಶ ತಲುಪಿಸಬೇಕು ಎಂದರು.

ಶಾಸಕ ನೆಹರು ಓಲೇಕಾರ ಮಾತನಾಡಿ, ಜಿಲ್ಲೆಯಲ್ಲಿ ಗಾಂಧೀಜಿ ಸಂಚರಿಸಿದ ಹಾಗೂ ಅವರಿಗೆ ಸಂಬಂಧಿಸಿದ ಎಲ್ಲ ಐತಿಹಾಸಿಕ ಘಟನೆ, ಪ್ರದೇಶಗಳನ್ನು ನೆನಪಿನಲ್ಲಿ ಉಳಿಯುವಂತೆ ಮಾಡಬೇಕು. ಅದಕ್ಕಾಗಿ ಸಂಸದರ ನಿಧಿಯಿಂದ ₹20 ಲಕ್ಷ ಹಾಗೂ ಶಾಸಕರ ನಿಧಿಯಿಂದ ₹10 ಲಕ್ಷ ಕೊಡುತ್ತೇವೆ. ಜಿಲ್ಲಾಧಿಕಾರಿಗಳು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ, ಉಪಾಧ್ಯಕ್ಷೆ ದೀಪಾ ಅತ್ತಿಗೇರಿ, ಸದಸ್ಯ ಕೊಟ್ರೇಶಪ್ಪ ಬಸೇಗಣ್ಣಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಕರಿಯಲ್ಲಪ್ಪ ಉಂಡಿ, ನಗರಸಭೆ ಸದಸ್ಯರಾದ ಗಿರೀಶ ತುಪ್ಪದ, ಲಲಿತಾ ಎನ್‌. ಮಲಗೋಡ, ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಟಿ. ಶಿಲ್ಪಾನಾಗ್, ಹೆಚ್ಚುವರಿ ಜಿಲ್ಲಾಧಿಕಾರಿ ವಿನೋದ ಹೆಗ್ಗಳಗಿ, ಉಪವಿಭಾಗಾಧಿಕಾರಿ ತಿಪ್ಪೇಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಂದಾನಪ್ಪ ವಡಗೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ.ಚಿನ್ನಿಕಟ್ಟಿ, ವಾರ್ತಾಧಿಕಾರಿ ಡಾ.ಬಿ.ಆರ್.ರಂಗನಾಥ್, ಶಿಕ್ಷಕ ನಾಗರಾಜ ನಡುವಿನಮಠ, ಪೌರಾಯುಕ್ತ ಆರ್.ಪ್ರಕಾಶ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !