ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ.ಪಂ ಕಸ ವಿಲೇವಾರಿ ವಾಹನಗಳ ಸೇವೆಗೆ ಚಾಲನೆ

Published : 2 ಅಕ್ಟೋಬರ್ 2024, 16:24 IST
Last Updated : 2 ಅಕ್ಟೋಬರ್ 2024, 16:24 IST
ಫಾಲೋ ಮಾಡಿ
Comments

ರಟ್ಟೀಹಳ್ಳಿ: ಸ್ಥಳೀಯ ಪಟ್ಟಣ ಪಂಚಾಯಿತಿಯ 2021-22ನೇ ಸಾಲಿನ 15ನೇ ಹಣಕಾಸು ಯೋಜನೆಯಲ್ಲಿ ಕಸವಿಲೇವಾರಿ ಮಾಡಲು ನೂತನವಾಗಿ ಖರೀದಿಸಲಾಗಿದ್ದ ₹18 ಲಕ್ಷ ಮೌಲ್ಯದ 3 ಆಟೋ ಟಿಪ್ಪರ್ ವಾಹನ ಸೇವೆಗೆ ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಬುಧವಾರ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಸ್ವಾಮೀಜಿ, ‘ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡುವಲ್ಲಿ ಪಟ್ಟಣ ಪಂಚಾಯಿತಿಯೊಂದಿಗೆ ಸಾರ್ವಜನಿಕರ ಸಹಕಾರವು ಅತೀ ಮುಖ್ಯ’ ಎಂದರು.

ಶಾಸಕ ಯು.ಬಿ. ಬಣಕಾರ, ತಹಶೀಲ್ದಾರ್ ಕೆ.ಗುರುಬಸವರಾಜ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಂತೋಷ ಚಂದ್ರಿಕೇರ, ಹಾಗೂ ಸಿಬ್ಬಂದಿ ಸ್ಥಳೀಯ ಮುಖಂಡರಾದ ಪಿ.ಡಿ. ಬಸನಗೌಡ್ರ, ಪ್ರಕಾಶ ಬನ್ನಿಕೋಡ, ಪರಮೇಶಪ್ಪ ಕಟ್ಟೇಕಾರ, ರವೀಂದ್ರ ಮುದಿಯಪ್ಪನವರ, ವಸಂತ ದ್ಯಾವಕ್ಕಳವರ ರಮೇಶ ಭೀಮಪ್ಪನವರ, ಎಂ.ಪಿ. ಪ್ರಕಾಶ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT