ಹಾನಗಲ್: ಸದ್ಯದ ಸ್ಥಿತಿಯಲ್ಲಿ ವಿಶ್ವದ ಪ್ರತಿಯೊಂದು ದೇಶವೂ ಮತ್ತೊಂದು ದೇಶದೊಂದಿಗೆ ಒಂದಿಲ್ಲೊಂದು ಕಾರಣಕ್ಕಾಗಿ ಅವಲಂಬಿತವಾಗಿದ್ದು, ಯಾವುದೇ ದೇಶಗಳ ನಡುವೆ ಯುದ್ಧ ಸಂಭವಿಸಿದರೂ, ಅದರ ಪರಿಣಾಮವನ್ನು ಎಲ್ಲರೂ ಅನುಭವಿಸಬೇಕಾದ ದುರಂತ ಸ್ಥಿತಿಯಲ್ಲಿ ನಾವಿದ್ದೇವೆ ಎಂದು ಬ್ಯಾಡಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ಪ್ರಾಧ್ಯಾಪಕ ದೇವೆಂದ್ರ ಬಿ.ಎನ್ ಹೇಳಿದರು.

ಇಲ್ಲಿನ ಕುಮಾರೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿಭಾಗದಿಂದ ಬುಧವಾರ ಏರ್ಪಡಿಸಿದ್ದ ‘ಭಾರತದ ಆರ್ಥಿಕತೆಯ ಮೇಲೆ ಯುದ್ಧದ ಪರಿಣಾಮ’ ವಿಷಯದ ಮೇಲೆ ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದರು.

ಭಾರತ ಜಾಗತೀಕರಣಕ್ಕೆ ತೆರೆದುಕೊಂಡ ಬಳಿಕ ಸಾಕಷ್ಟು ದೇಶಗಳೊಂದಿಗೆ ಆರ್ಥಿಕ ಸಂಬಂಧ ಹೊಂದಿದೆ. ಭಾರತವು ಅಮೆರಿಕದ ಪ್ರಮುಖ ವ್ಯಾಪಾರಿ ಪಾಲುದಾರ ರಾಷ್ಟ್ರವಾಗಿದೆ. ಅಗಾಧ ಪ್ರಮಾಣದ ತೈಲ ಬಳಕೆಗಾಗಿ ಮಧ್ಯಪ್ರಾಚ್ಯ ದೇಶಗಳ ಅವಲಂಬನೆ ಇದೆ. ಸದ್ಯ ಅಮೆರಿಕ ಮತ್ತು ಇರಾನ್ ಸಂಘರ್ಷ ಭಾರತದ ಆರ್ಥಿಕತೆಯ ಮೇಲೆ ನೇರ ದುಷ್ಪರಿಣಾಮ ಬೀರುತ್ತಿದೆ ಎಂದರು.

ಕಾಲೇಜು ಪ್ರಾಚಾರ್ಯ ಎಚ್.ಎಂ.ಹೊಳಿಯಣ್ಣನವರ ಮಾತನಾಡಿ, ಆರ್ಥಿಕತೆಯಲ್ಲಿ ಮಹತ್ವದ ಸ್ಥಾನ ಪಡೆದ ದೇಶಗಳ ಪರಸ್ಪರ ಸಮರದಿಂದ ವಿಶ್ವದ ಎಲ್ಲ ರಾಷ್ಟ್ರಗಳ ಆರ್ಥಿಕತೆ ಮತ್ತು ರಾಜಕೀಯ ಸ್ಥಿರತೆ ವಿಚಲಿತವಾಗುತ್ತದೆ ಎಂದು ಹೇಳಿದರು.

ಕಾಲೇಜು ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಸತ್ಯಸಾವಿತ್ರಿ ವಿ.ಬಿ ಮಾತನಾಡಿ, ಯುದ್ಧದಲ್ಲಿ ಪಾಲ್ಗೊಂಡ ದೇಶಗಳ ಆರ್ಥಿಕತೆ ಬಿಗಡಾಯಿಸುವುದು ಸಹಜ. ಇದು ಜಾಗತಿಕ ಆರ್ಥಿಕತೆಯ ಮೇಲೆ ಗಂಭೀರ ಧಕ್ಕೆ ತರುತ್ತಿರುವುದು ದುರಂತ ಎಂದರು.

ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷ ಪ್ರಕಾಶ ಹೊಳೇರ, ಎಐಕ್ಯೂಸಿ ಕೋಶದ ಸಂಚಾಲಕ ಅಶೋಕ ಪಾಗದ, ಉಪನ್ಯಾಸಕರಾದ ಪ್ರಿಯಾ ಮಹರಾಜಪೇಟೆ, ಭೀಮಾವತಿ ಸೋಮನಕಟ್ಟಿ, ಎಂ.ಬಿ.ನಾಯಕ, ಹೊನ್ನಪ್ಪ ಬೋವಿ, ಬಸನಗೌಡ ಲಕ್ಷ್ಮೇಶ್ವರ, ಪೂಜಾ ಅಥಣಿ, ದೀಪಾ ಮಾಂಗ್ಲೇನವರ, ಆರ್ವಾ ಬಿಹಾರಿ, ಹಾಜೀರಾ ಶೇಖ್, ಬಸವರಾಜ ಜವಳಿ, ಉಮೇಶ ವಿ., ಎಸ್.ಬಿ.ಕೂಡಲಮಠ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-22-280641224

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.