ಮಂಗಳವಾರ, ಮಾರ್ಚ್ 21, 2023
29 °C

ಮಳೆ ಸಂಪ್ ಆದಿತಲೇ ಪರಾಕ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುತ್ತಲ (ಹಾವೇರಿ): ಇಲ್ಲಿಗೆ ಸಮೀಪದ ಹಾವನೂರ ಗ್ರಾಮದ ಮೈಲಾರಲಿಂಗೇಶ್ವರನ ಕಾರ್ಣಿಕೋತ್ಸವವು ಸೋಮವಾರ ಸಂಜೆ ಕಾರ್ಣಿಕದ ಗೊರವಯ್ಯ ಆನಂದ ಬಿಲ್ಲರ ‘ಮಳೆ ಸಂಪ್ ಆದಿತಲೇ ಪರಾಕ್’ ಎಂದು ನುಡಿದರು.

ತಂದೆ ಹೊನ್ನಪ್ಪ ಬಿಲ್ಲರ ಅವರಿಗೆ ವಯಸ್ಸಾದ ಹಿನ್ನೆಲೆಯಲ್ಲಿ ಈ ಬಾರಿ ಮಗ ಆನಂದ ಬಿಲ್ಲರ ಅವರಿಗೆ ಪ್ರಧಾನ ಅರ್ಚಕ ಕೃಷ್ಣಭಟ್ಟ ಪೂಜಾರ ಅವರು ಕಾರ್ಣಿಕದ ಗೊರವಯ್ಯ ದೀಕ್ಷೆ ನೀಡಿದ್ದರು. ಹೀಗಾಗಿ ಗೊರವಯ್ಯ ಆನಂದ ಕಾರ್ಣಿಕ ನುಡಿದರು.

‘ಮಳೆ ಸಂಪ್ ಆದಿತಲೇ ಪರಾಕ್’ ಎಂದ ತಕ್ಷಣ ಎಲ್ಲರೂ ಅರೆ ಕ್ಷಣ ಮೌನವಾದರು. ಗೊರವಯ್ಯ ನುಡಿದ ಕಾರ್ಣಿಕ ಎಂದೂ ಸುಳ್ಳಾಗದು, ಈ ಬಾರಿ ಉತ್ತಮ ಮಳೆ ಆಗುವ ಲಕ್ಷಣ ಇದೆ’ ಎಂದು ಸಂತೋಷದಿಂದ ಮನೆಯತ್ತ ಹೆಜ್ಜೆ ಹಾಕಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು