ಎಪಿಎಂಸಿ ಅಧ್ಯಕ್ಷರಾಗಿ ಗೌಡಪ್ಪ ಗೌಡ ಪಾಟೀಲ

7

ಎಪಿಎಂಸಿ ಅಧ್ಯಕ್ಷರಾಗಿ ಗೌಡಪ್ಪ ಗೌಡ ಪಾಟೀಲ

Published:
Updated:

ಹಾವೇರಿ :  ಹಾವೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಅಧ್ಯಕ್ಷರಾಗಿ ಬಿಜೆಪಿಯ ಗೌಡಪ್ಪ ಗೌಡ ಪಾಟೀಲ ಆಯ್ಕೆಯಾದರು. 

ಇಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕೃಷ್ಣ ರೆಡ್ಡಿ ಮೈದೂರ ವಿರುದ್ಧ 9–6 ಮತಗಳ ಅಂತರದಲ್ಲಿ ಜಯ ಗಳಿಸಿದರು. ಒಟ್ಟು 16 ಸದಸ್ಯ ಬಲದ ಎಪಿಎಂಸಿಯಲ್ಲಿ ಬಿಜೆಪಿ  8 ಹಾಗೂ ಕಾಂಗ್ರೆಸ್ನ 8 ಸದಸ್ಯರಿದ್ದಾರೆ. ಹೀಗಾಗಿ  ಹಿಂದಿನ ಬಾರಿ ಸಮಬಲಗೊಂಡಿದ್ದು, ಚೀಟಿ ಮೂಲಕ ಅಭ್ಯರ್ಥಿ ಆಯ್ಕೆ ನಡೆದಿತ್ತು.
ಆದರೆ, ಈ ಬಾರಿ ಕಾಂಗ್ರೆಸ್ ಸದಸ್ಯರೊಬ್ಬರ ಮತ ತಿರಸ್ಕೃತಗೊಂಡಿದ್ದರೆ, ಒಬ್ಬರು ಬಿಜೆಪಿಗೆ ಮತ ಚಲಾಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನೂತನ ಅಧ್ಯಕ್ಷರನ್ನು ಅಭಿನಂದಿಸಿದ ಶಾಸಕ ನೆಹರು ಓಲೇಕಾರ ಮಾತನಾಡಿ, ‘ಜಾನುವಾರು ಮಾರುಕಟ್ಟೆ, ತರಕಾರಿ ಮಾರುಕಟ್ಟೆ, ಹೂವು ಮಾರುಕಟ್ಟೆಗಳಿಗೆ ಅಗತ್ಯ ಸೌಲಭ್ಯಗಳು ಕಲ್ಪಿಸಬೇಕು. ರೈತ ಸಂತೆಗಳ ಅಭಿವೃದ್ಧಿಗೆ ಹಾಗೂ ಎಪಿಎಂಸಿಯಿಂದ ರೈತರಿಗೆ ಇರುವ ವಿಮಾ ಸೌಲಭ್ಯ ಸೇರಿದಂತೆ ಇತರ ಸೌಕರ್ಯಗಳನ್ನು ಒದಗಿಸಬೇಕು. ಈ ನಿಟ್ಟಿನಲ್ಲಿ ಎಪಿಎಂಸಿ ಸದಸ್ಯರ ಜೊತೆ ವಿಶ್ವಾಸದಿಂದ ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ವಿರೂಪಾಕ್ಷಪ್ಪ ಕಡ್ಲಿ, ಎಪಿಎಂಸಿ ಕಾರ್ಯದರ್ಶಿ ಪರಮೇಶ್ವರ ನಾಯಕ ಮತ್ತು ಸದಸ್ಯರು ಇದ್ದರು. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !