‘ರೈತರ ಸಮಸ್ಯೆಗೆ ಸರ್ಕಾರ ಸ್ಪಂದಿಸಲಿ’

ಶಿಗ್ಗಾವಿ: ರೈತ ಸಮೂಹ ಪ್ರತಿ ವರ್ಷ ಹಲವು ಕಾರಣಗಳಿಂದ ಸಂಕಷ್ಟಕ್ಕೆ ಸಿಲುಕುತ್ತ ಬರುತ್ತಿದೆ. ಹೀಗಾಗಿ ಆಡಳಿತ ನಡೆಸುವ ಸರ್ಕಾರಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಜತೆಗೆ ಕೃಷಿ ಚಟುವಟಿಕೆಗಳಿಗೆ ಪೂರಕ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಜಿಲ್ಲಾ ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಯೋಗಿ ಹೇಳಿದರು.
ತಾಲ್ಲೂಕಿನ ಧುಂಡಸಿ ಗ್ರಾಮದ ಅರಟಾಳ-ಮಜರೆಕೊಪ್ಪ ಸಭಾಭವನದಲ್ಲಿ ಮಂಗಳವಾರ ರಾಜ್ಯ ರೈತ ಸಂಘ, ಮಾನವಹಕ್ಕು ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಂಘ ತಾಲ್ಲೂಕು ಘಟಕ ಉದ್ಘಾಟಿಸಿ ಅವರು ಮಾತನಾಡಿದರು.
ಮಾರುಕಟ್ಟೆಯಲ್ಲಿ ರೈತನಿಗೆ ಆಗುವ ಅನ್ಯಾಯ ತಡೆಯಬೇಕು. ದಲ್ಲಾಳಿಗಳ ಹಾವಳಿ ನಿಲ್ಲಬೇಕು. ರೈತ ಬೆಳೆದ ಬೆಳೆಗಳಿಗೆ ನಿಗದಿತ ಬೆಲೆ ಸಿಗಬೇಕು. ಅದಕ್ಕಾಗಿ ರೈತರ ಸಂಘಟನೆ ಪ್ರಬಲವಾಗಬೇಕು ಎಂದರು.
ಮಾನವಹಕ್ಕು ಮತ್ತು ಭ್ರಷ್ಟಾಚಾರ ನಿರ್ಮೂನಾ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರಗೌಡ ಮಾತನಾಡಿ, ಕೃಷಿ ಪರಿಕರ, ಬಿತ್ತನೆ ಬೀಜಗಳು, ರಾಸಾಯನಿಕ ಗೊಬ್ಬರ ಸೇರಿದಂತೆ ಹಲವು ಸೌಲಭ್ಯ ಗಳನ್ನು ಸರ್ಕಾರ ರಿಯಾಯಿತಿಯಲ್ಲಿ ವಿತರಣೆ ಮಾಡಬೇಕು. ರೈತರನ್ನು ಸರ್ಕಾರ ಸದಾ ಬೆಂಬಲಿಸಬೇಕು ಎಂದರು.
ರೈತ ಮುಖಂಡರಾದ ನೀಲಕಂಠಗೌಡ ಪಾಟೀಲ, ಶಿವಾನಂದ ಗಾಣಿಗೇರ, ಈರಣ್ಣ ಸಮಗೊಂಡ, ಸಿದ್ದಪ್ಪ ಮೊಸಳಿ, ಧುಂಡಸಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶಿವಾನಂದ ದಾವಣಗೆರೆ, ಜಿಲ್ಲಾ ಮಹಿಳಾ ಘಟಕದ ಉಪಾಧ್ಯಕ್ಷೆ ಪಾರ್ವತಿ, ಮಲ್ಲನಗೌಡ ಹೊಗಿ, ಪ್ರಕಾಶ ಪಾಟೀಲ, ಪ್ರೌಭುಗೌಡ ಪಾಟೀಲ, ಬಾಹುಬಲಿ ಧರೆಣ್ಣಪ್ಪನವರ, ಗಾಯತ್ರಿ ಔಂದಕರ, ಬಸವರಾಜ ಬೂದಿಹಾಳ, ಶ್ರೀಕಾಂತ ಕೋಳೂರ, ಯಲ್ಲಪ್ಪ ಹೊಸಮನಿ, ರುದ್ರಪ್ಪ ಕ್ಷೌರದ, ಗದಿಗೆಮ್ಮ ಹಿರೇಮಠ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.