ಗುಡಗೇರಿ: ಸ್ವಾತಂತ್ರ್ಯ ದೊರಕಿ 7 ದಶಕ ಕಳೆದರೂ ರೈತರು ಸಂಪರ್ಕಿಸುವ ಹೊಲದ ರಸ್ತೆಗಳು ಇದುವರೆಗೂ ಸುಧಾರಣೆಗೊಳ್ಳದೆ ಇರುವುದರಿಂದ ಮಳೆಗಾಲದಲ್ಲಿ ರೈತರು ಪಡುವ ಕಷ್ಟ ಅಪಾರ.

ಗುಡಗೇರಿ-ಹರಕುಣಿ ರಸ್ತೆ ಇದುವರಿಗೆ ಸುಧಾರಣೆಗೊಳ್ಳದೆ ಇರುವುದರಿಂದ ಈ ಭಾಗದ ರೈತರು ಜನಪ್ರತಿನಿಧಿಗಳಿಗೆ, ಅಧಿಕಾರಿ ವರ್ಗಕ್ಕೆ ಮನವಿ ಸಲ್ಲಿಸಿದರೂ ರಸ್ತೆ ಸುಧಾರಣೆಗೆ ಕ್ರಮ ಕೈಗೊಳ್ಳದೆ ಇರುವುದರಿಂದ ಮಳೆಗಾಲದಲ್ಲಿ ರೈತರು ತಮ್ಮ ಕೃಷಿ ಬದುಕಿಗಾಗಿ ಕೆಸರಿನಲ್ಲಿ ಸಾಗಿ ಕೃಷಿ ಚಟುವಟಿಕೆ ಮಾಡುವಂತಾಗಿದೆ.

ರಸ್ತೆ ಮಧ್ಯೆ ಸರವುಗಳು ಸಹ ಇರುವುದರಿಂದ ಆ ಭಾಗದಲ್ಲಿ ಚಕ್ಕಡಿ, ಟ್ರ್ಯಾಕ್ಟರ್ಗಳು ಕೆಸರಲ್ಲಿ ಸಿಲುಕಿ ದಾಟಲು ಪರಿದಾಡುವ ಸ್ಥಿತಿ ನೋಡಿದರೆ ಅಂತವರ ಕಣ್ಣಲ್ಲಿ ನೀರು ಬರುವಂತಾಗುತ್ತದೆ.

ಈ ರಸ್ತೆ ಮಧ್ಯೆ ದ್ಯಾವನಗೌಡ್ರ ಸರವು ಕೆಸರಿನ ಗದ್ದೆ ಆಗಿದ್ದರಿಂದ ಇದನ್ನು ಸುಧಾರಣೆ ಮಾಡಲು ಅನೇಕ ಬಾರಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನ ಆಗದೇ ಇರುವುದರಿಂದ ರೈತರು ₹ 50 ಸಾವಿರ ವಂತಿಕೆ ಸಂಗ್ರಹಿಸಿ ದ್ಯಾವನಗೌಡ್ರ ಸರವು ಬಳಿ ರಸ್ತೆ ಸುಧಾರಣೆ ಕೈಗೊಂಡಿದ್ದಾರೆ.

ಸುಮಾರು 800 ಎಕರೆ ಗುಡಗೇರಿ ಗ್ರಾಮದ ರೈತರ ಹೊಲಗಳಿದ್ದು, ಮುಂಗಾರು ಬಿತ್ತನೆಗೆ ಬೀಜ, ಗೊಬ್ಬರ ತೆಗೆದುಕೊಂಡು ಹೋಗಲು ಸಹ ಆಗದಂತೆ ಇರುವುದರಿಂದ ಸುಧಾರಣೆಗೆ ಮುಂದಾಗಿದ್ದೇವೆ ಎಂದು ರೈತರಾದ ಬಸವರಾಜ ಶಿರಬಡಗಿ, ಮಂಜುನಾಥ ರಟ್ಟಿಗೇರಮಠ, ಬಸನಗೌಡ ಆರ ಕರೆಹೂಳಪ್ಪನವರ, ಬಾಪನಗೌಡ ಯತ್ನಳ್ಳಿ, ಜಗದೀಶ ಮಳಲಿ, ಯಲ್ಲಪ್ಪ ಮಲ್ಲಾಡದ ತಮ್ಮ ಅಳಲು ತೋಡಿಕೊಂಡರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-24-696562464

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.