ಹಾನಗಲ್: ಜೇನು ಹುಳುಗಳ ದಾಳಿಗೆ ಹಲವರು ಗಾಯಗೊಂಡ ಘಟನೆ ಬುಧವಾರ ಮಧ್ಯಾಹ್ನ ಇಲ್ಲಿನ ನ್ಯಾಯಾಲಯ ಮುಂಭಾಗದ ಮುಖ್ಯರಸ್ತೆಯಲ್ಲಿ ನಡೆದಿದೆ.

ಈ ಭಾಗದ ಬಹುಮಹಡಿ ಕಟ್ಟಡ ದಲ್ಲಿ ಗೂಡು ಕಟ್ಟಿದ್ದ ಜೇನು ಹುಳು ಗಳು ಒಮ್ಮೆಲೇ ಹಾರಾಡಿ ಕೊಂಡು ಬಂದು ಸಿಕ್ಕವರ ಮೇಲೆ ದಾಳಿ ಮಾಡಿ ಕಚ್ಚಿವೆ ಎಂದು ಜನರು ಹೇಳಿದ್ದಾರೆ.

ಮುಖ್ಯರಸ್ತೆಯಲ್ಲಿ ಪಾದಚಾರಿಗಳು, ವಾಹನ ಸವಾರರ ಮೇಲೆ ಮುಗಿಬಿದ್ದು ಕಂಡಲ್ಲೆಲ್ಲ ಜೇನು ಹುಳುಗಳು ಕಚ್ಚಿವೆ. ಕೆಲವು ವಕೀಲರು ಜೇನು ಹುಳುಗಳ ದಾಳಿಗೆ ಒಳಗಾಗಿದ್ದಾರೆ.

ಬಹಳಷ್ಟು ಸಂಖ್ಯೆಯಲ್ಲಿದ್ದ ಜೇನು ಹುಳುಗಳು ಏಕಾಎಕಿ ದಾಳಿ ಮಾಡಿವೆ. ಜೇನು ಹುಳುಗಳ ದಾಳಿ ಮಧ್ಯಾಹ್ನದಿಂದ ಸಂಜೆ ತನಕ ಮುಂದು ವರೆದಿತ್ತು.

ಮುಖ್ಯರಸ್ತೆ ಮತ್ತು ನ್ಯಾಯಾಲಯ ಆವರಣದಲ್ಲಿಯೂ ಜೇನು ಹುಳುಗಳು ಜನರ ಮೇಲೆ ದಾಳಿ ಮಾಡಿವೆ. ಇಲ್ಲಿನ ಸರ್ಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಜೇನು ಹುಳು ಕಚ್ಚಿಸಿಕೊಂಡವರು ಚಿಕಿತ್ಸೆ ಪಡೆದಿದ್ದಾರೆ.

ಈ ಕುರಿತು ತಾಲ್ಲೂಕು ಸರ್ಕಾರಿ ಆಸ್ಪತ್ರೆ ವೈದ್ಯ ಡಾ.ಅಖಿಲೇಶ ಮಾತನಾಡಿ, ‘ಜೇನು ಹುಳು ದಾಳಿಯಿಂದ 23 ಜನರು ಗಾಯಗೊಂಡಿದ್ದಾರೆ. 16 ಜನರಿಗೆ ಹೆಚ್ಚಿನ ಪ್ರಮಾಣದಲ್ಲಿ ಜೇನು ನೊಣ ಕಚ್ಚದ್ದರಿಂದ ಅವರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗಿದೆ’ ಎಂದು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-22-13553724

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.