ಹಾನಗಲ್: ಇಲ್ಲಿನ ಕುರುಬಗೇರಿ ಭಾಗದ ಲಕ್ಷ್ಮೀ ನಾರಾಯಣ ಗುಡಿಯಲ್ಲಿ ಮೂರು ದಿನಗಳ 40ನೇ ದಿಂಡಿ ಮಹೋತ್ಸವ ಸೋಮವಾರ ಸಂಪನ್ನಗೊಂಡಿತು. ವಾರ್ಕರಿ ಪಂಥದ ಸಂತರು ವಿವಿಧ ಧಾರ್ಮಿಕ ವಿಧಾನಗಳ ಮೂಲಕ ಸಂಪ್ರದಾಯಗಳನ್ನು ಆಚರಿಸಿದರು.

ಕಾಕಡಾರತಿ, ಜ್ಞಾನೇಶ್ವರಿ ಪಾರಾಯಣ, ಗಾಥಾ ಭಜನೆ, ಪ್ರವಚನ, ನಾಮಜಪ, ಕೀರ್ತನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಪೂಜಾ ವಿಧಿವಿಧಾನಗಳು ಶ್ರದ್ಧೆ, ಭಕ್ತಿಯಿಂದ ನೆರವೇರಿದವು. ಕೊಪ್ಪಳ, ಧಾರವಾಡ ಸೇರಿದಂತೆ ಹಲವೆಡೆಯಿಂದ ಆಗಮಿಸಿದ್ದ ಸಂತ ಸಮೂಹ ಕೀರ್ತನ, ಭಜನೆಯಲ್ಲಿ ಪಾಲ್ಗೊಂಡಿದ್ದರು. ವಿವಿಧ ಭಜನಾ ಮಂಡಳಿಗಳು ಭಕ್ತಿ ಗೀತೆಗಳನ್ನು ಪ್ರಸ್ತುತ ಪಡಿಸಿದವು.

ಸೋಮವಾರ ನಡೆದ ಕೊನೆಯ ದಿನದ ಕಾರ್ಯಕ್ರಮದಲ್ಲಿ ಶಾಸಕ ಶ್ರೀನಿವಾಸ ಮಾನೆ ಪಾಲ್ಗೊಂಡಿದ್ದರು.

‘ನಮ್ಮ ಸಂಸ್ಕೃತಿ ಮತ್ತು ಭಕ್ತಿಯ ಪರಂಪರೆಗಳನ್ನು ಮುಂದಿನ ತಲೆಮಾರಿನವರೆಗೆ ಕೊಂಡೊಯ್ಯುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ದಿಂಡಿ ಮಹೋತ್ಸವಗಳು ಸಮಾಜದಲ್ಲಿ ಏಕತೆ ಮತ್ತು ಆತ್ಮೀಯತೆ ಬೆಳೆಸುತ್ತವೆ. ಧರ್ಮ, ಸಂಸ್ಕೃತಿ ಮತ್ತು ನೈತಿಕ ಮೌಲ್ಯಗಳ ಮಹತ್ವವನ್ನು ಅರಿತು ಮುನ್ನಡೆಯಬೇಕಿದೆ’ ಎಂದು ತಿಳಿಸಿದರು.

ಪ್ರಮುಖರಾದ ಬಾಲಕೃಷ್ಣ ಸುಗಂಧಿ, ಮಹೇಶ ಕೊಲ್ಲಾಪುರ, ಚಂದ್ರಕಾಂತ ಗುಮಕರ, ರಾಜೂ ಕಾಟೇಕರ, ಮಂಜುನಾಥ ಬಸವಂತಕರ, ಮಾರುತಿ ಕೊಲ್ಲಾಪುರ, ಮಾಲತೇಶ ಕೊಲ್ಲಾಪುರ, ದುರ್ಗಾರಾಮ್ ಮಾನೆ, ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ಮುಖಂಡರಾದ ಮಹೇಶ ಪವಾಡಿ, ಆದರ್ಶ ಶೆಟ್ಟಿ, ರವಿ ದೇಶಪಾಂಡೆ, ರಾಜಕುಮಾರ ಶಿರಪಂಥಿ, ಖುರ್ಷಿದ್ ಹುಲ್ಲತ್ತಿ, ಮತೀನ್ ಶಿರಬಡಗಿ, ವಿನಯ ಬಂಕನಾಳ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-22-1016565550

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.