ಹಾನಗಲ್: 5 ವರ್ಷ ಅವಧಿಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಕಾರ್ಯಕಾರಿ ಸಮಿತಿಗೆ ಏ. 19 ರಂದು ಚುನಾವಣೆ ನಡೆಯಲಿದೆ. 14 ಸ್ಥಾನಗಳಿಗೆ 25 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಚುನಾವಣಾ ಕಣ ರಂಗು ಪಡೆದಿದೆ.

ಕಳೆದ ವರ್ಷ ಅವಿರೋಧವಾಗಿ ಆಯ್ಕೆಗೊಂಡಿದ್ದ ನವಚೇತನ ಶಿಕ್ಷಕ ಬಳಗಕ್ಕೆ ಈ ಬಾರಿ ಸ್ವಾಭಿಮಾನಿ ಬಳಗದ ಶಿಕ್ಷಕರು ಸವಾಲು ಹಾಕಿದ್ದಾರೆ. ಹೀಗಾಗಿ ಶಾಲೆಗಳು ಬಿಡುವ ಇರುವ ಈ ಸಮಯದಲ್ಲಿ ಶಿಕ್ಷಕರ ವಲಯದಲ್ಲಿ ಚುನಾವಣೆ ಚಟುವಟಿಕೆಗಳು ಗರಿಗೆದರಿವೆ. ನಿರಂತರ ಮೂರು ಚುನಾವಣೆಗಳಲ್ಲಿ ಮೇಲುಗೈ ಸಾಧಿಸಿದ್ದ ನವಚೇತನ ಬಳಗದ ಶಿಕ್ಷಕರು ತಮ್ಮ ಹಿಡಿತ ಮುಂದುವriಸುವ ನಿಟ್ಟಿನಲ್ಲಿ ಚುನಾವಣಾ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ.

ಈ ನಡುವೆ ನಾಮಪತ್ರ ಸಲ್ಲಿಸಿ ಅಭ್ಯರ್ಥಿಯಾಗಿರುವ ಶಿಕ್ಷಕ ಬಸವರಾಜ ಬೆಳ್ಳಿಕಟ್ಟಿ ಅವರು, ತಾವು ಕಣದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ. ‘ಯಾವ ಬಣಕ್ಕೂ ಬೆಂಬಲ ನೀಡುವುದಿಲ್ಲ. ತಟಸ್ಥ ನಿಲುವು ತಾಳುತ್ತೇನೆ’ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಏ.19 ರಂದು ಚುನಾವಣೆ ನಡೆಯಲಿದ್ದು, ತಾಲ್ಲೂಕಿನಲ್ಲಿ 664 ಶಿಕ್ಷಕ ಮತದಾರರು ಇದ್ದಾರೆ. 14 ಸ್ಥಾನಗಳ ಪೈಕಿ 5 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ಮಂಗಳವಾರ ನಾಮಪತ್ರ ವಾಪಸ್ ಪಡೆಯುವುದು ಮುಕ್ತಾಯಗೊಂಡಿದೆ. ಇಲ್ಲಿನ ಗುರುಭವನದಲ್ಲಿ ಏ. 11 ಮತ್ತು 12 ರಂದು ನಾಮಪತ್ರ ಸ್ವೀಕಾರ, 13ರಂದು ಪರಿಶೀಲನೆ ನಡೆದಿತ್ತು. ಏ. 19 ರಂದು ಇಲ್ಲಿನ ಶಾಸಕರ ಮಾದರಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬೆಳಿಗ್ಗೆ 8.30 ರಿಂದ ಸಂಜೆ 4.30 ರ ತನಕ ಮತದಾನ ನಡೆಯಲಿದೆ ಎಂದು ಚುನಾವಣಾಧಿಕಾರಿ ಆರ್.ಟಿ. ವೇದಂ ಭಟ್ನವರ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-22-1023337035

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.