ಹಾನಗಲ್: ಪಾರಂಪರಿಕ ಕಲೆ ಮುಂದುವರಿಸಿಕೊಂಡು ಬಂದಿರುವ ಇಲ್ಲಿನ ಹಗಲು ವೇಷಧಾರಿಗಳು ಬೀದಿಗಳಲ್ಲಿ ಓಡಾಡಿ ಪೌರಾಣಿಕ ಮತ್ತು ಚಾರಿತ್ರಿಕ ಕಥನಗಳನ್ನು ಪ್ರಸ್ತುತಪಡಿಸುವುದು ಗಮನಸೆಳೆಯುತ್ತಿದೆ.

ಪಟ್ಟಣದ ಆನಿಕೆರೆ ಸಮೀಪದಲ್ಲಿ ಇರುವ ಹಗಲು ವೇಷಧಾರಿಗಳ 8 ಕುಟುಂಬಗಳು ಇಂದಿಗೂ ತಮ್ಮ ಕಲೆಯನ್ನು ಜೀವಂತವಾಗಿ ಉಳಿಸಿಕೊಂಡಿದ್ದಾರೆ. ದೇವರು, ರಾಜರು ಮತ್ತು ವೀರ ಪುರುಷರ ವೇಷ ತೊಟ್ಟುಕೊಂಡು ಜನವಸತಿ ಪ್ರದೇಶಗಳಲ್ಲಿ ಓಡಾಡುತ್ತಾರೆ.

ಆಧುನಿಕತೆಯ ಭರಾಟೆಯಲ್ಲಿ ವಂಶ ಪಾರಂಪರಿಕ ಕಲೆಗಾರಿಕೆಗಳು ನಶಿಸುತ್ತಿರುವ ಈ ಸಮಯದಲ್ಲಿ ಇಲ್ಲಿನ ಹಗಲು ವೇಷಧಾರಿ ಕುಟುಂಬ ಗಳು ತಮ್ಮ ಸಾಂಪ್ರದಾಯಿಕ ಕಲೆಯನ್ನು ಗೌರವಯುತವಾಗಿ ಉಳಿಸಿಕೊಂಡಿರುವುದು ವಿಶೇಷ.

ಸಂಭಾಷಣೆ, ಗೀತೆ ಮತ್ತು ಇದಕ್ಕೆ ತಕ್ಕಂತೆ ತಬಲಾ, ಹಾರ್ಮೋನಿಯಂ ಮೂಲಕ ಜನರ ಮೆಚ್ಚುಗೆ ಪಡೆಯುತ್ತಾರೆ. ಇವರ ಕಲೆಯನ್ನು ಮೆಚ್ಚಿ ಜನರು ನೀಡುವ ದೇಣಿಗೆ ರೂಪದ ಹಣದಲ್ಲಿ ತೃಪ್ತಿಯ ಜೀವ ನಡೆಸುತ್ತಾರೆ. ಪೂರ್ವಜರ ಬಳುವಳಿಯ ಕಲೆ ಮುಂದುವರೆಸಿದ ಆತ್ಮಸಂತೋಷ ಅನುಭವಿಸುವುದು ಸೋಜಿಗವೇ ಸರಿ. ಇಲ್ಲಿನ ಹಗಲು ವೇಷಧಾರಿ ಕುಟುಂಬದ ಚಿನ್ನಸ್ವಾಮಿರಾಮಣ್ಣ ಮಹಾಂತ ಅವರು ತಂಡ ಕಟ್ಟಿಕೊಂಡು ಕಲೆಗಾರಿಕೆ ಮುಂದುವರಿಸಿದ್ದಾರೆ. ತಮ್ಮ ಮಕ್ಕಳಿಗೂ ಈ ಕಲೆಯ ಅಭಿರುಚಿ ಹಚ್ಚಿಸಿದ್ದಾರೆ. ಇಲ್ಲಿನ ಚಿದಂಬರ ನಗರ, ವಿವೇಕಾನಂದ ನಗರ ಭಾಗದಲ್ಲಿ ಈಚೆಗೆ ನಾಲ್ಕೈದು ದಿನ ವೇಷಧಾರಿಯಾಗಿ ಓಡಾಡಿದ ಇವರ ತಂಡ ಕೊನೆಯ ದಿನದಂದು ನಿವಾಸಿಗಳಿಂದ ದೇಣಿಗೆ ರೂಪದಲ್ಲಿ ಹಣ ಪಡೆದು ಹಸನ್ಮುಖರಾದರು.

’ಕಲಾವಿದರ ಮಾಸಾಶನ ಸೇರಿದಂತೆ ಸರ್ಕಾರದ ಯಾವುದೇ ಸೌಲಭ್ಯಗಳು ಈತನಕ ನಮಗೆ ಸಿಕ್ಕಿಲ್ಲ. ಇದಕ್ಕೆ ನಮ್ಮಲ್ಲಿರುವ ಮೌಢ್ಯವೂ ಕಾರಣ ಇರಬಹುದು’ ಎನ್ನುತ್ತಾರೆ ಕಲಾವಿದರು.

‘ಇದೇ ಕಾಯಕವನ್ನು ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದೇವೆ. ಅಲ್ಲಲ್ಲಿ ಧಾರ್ಮಿಕ, ಸಾಮಾಜಿಕ ಮತ್ತ ಕೌಟುಂಬಕ ಸಮಾರಂಭಗಳಿಗೆ ಆಹ್ವಾನಿಸುತ್ತಾರೆ. ನಮ್ಮ ಕಲೆಯನ್ನು ಆಸಕ್ತಿಯಿಂದ ಪ್ರದರ್ಶಿಸುತ್ತೇವೆ. ನಮ್ಮ ಕೆಲವು ಮಕ್ಕಳು ಶಿಕ್ಷಣದಲ್ಲಿ ಮುಂದುವರಿದರೆ, ಮತ್ತಷ್ಟು ಮಕ್ಕಳು ಇದೇ ಕಲೆಯನ್ನು ಮೈಗಚ್ಚಿಕೊಳ್ಳುತ್ತಾರೆ’ ಎಂದರು ಚಿನ್ನಸ್ವಾಮಿ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-22-1990948535

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.