ಹಾನಗಲ್: ಬಹು ದಿನಗಳ ಬೇಡಿಕೆಯ ಪ್ರಕಾರ ಹಾನಗಲ್ ಪಟ್ಟಣದಲ್ಲಿ ವಿದ್ಯುತ್ ಪರಿವರ್ತಕಗಳ ದುರಸ್ತಿ ಕೇಂದ್ರವನ್ನು ಆರಂಭಿಸುಂತೆ ಹೆಸ್ಕಾಂಗೆ ಮನವಿ ಮಾಡಲಾಗಿದೆ. ಬೇಡಿಕೆ ಶೀಘ್ರವಾಗಿ ಈಡೇರುವ ಭರವಸೆ ಇದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

₹2.50 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡ ಇಲ್ಲಿನ ಹೆಸ್ಕಾಂ ಕಚೇರಿ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

ಅಕ್ಕಿಆಲೂರು ಭಾಗಕ್ಕೆ ಹೆಸ್ಕಾಂ ಉಪವಿಭಾಗ ಕಚೇರಿ ತೆರೆಯಲು ಸಹ ಮನವಿ ಮಾಡಲಾಗಿದೆ. ವಸತಿ ಮನೆ, ಅಂಗಡಿಗಳು, ರೈತರ ಪಂಪಸೆಟ್ಗಳ ಸಂಖ್ಯೆ ಹೆಚ್ಚಾತ್ತಿದೆ. ಹೀಗಾಗಿ ವ್ಯವಸ್ಥೆಯನ್ನೂ ಕೂಡ ಹೆಚ್ಚಿಸಬೇಕಾಗಿದೆ ಎಂದರು.

110 ಕೆವಿ ಸಾಮರ್ಥ್ಯದ ಎರಡು ಸ್ಟೆಷನ್ಗಳು ಈಗ ಟೆಂಡರ್ ಹಂತದಲ್ಲಿವೆ. ಲೈನ್ಮನ್ಗಳ ಕೊರತೆ ಇದ್ದು, ಈಗ ತರಬೆತಿಯಲ್ಲಿರುವ ಲೈನ್ಮನ್ ಶೀಘ್ರ ಇಲ್ಲಿ ಕೆಲಸಕ್ಕೆ ಹಾಜರಾಗಲಿದ್ದಾರೆ. ತಿಳವಳ್ಳಿಯಲ್ಲಿ ಅಕೌಂಟಿಂಗ್ ವಿಭಾಗ ತೆರೆಯುವ ಸಿದ್ಧತೆಯೂ ನಡೆದಿದೆ. ಅಲ್ಲದೆ ಗ್ರಾಮಗಳಲ್ಲಿ ಹಗಲು ಹೊತ್ತು ವಿದ್ಯುದ್ದೀಪಗಳು ಉರಿಯವುದನ್ನು ನಿಲ್ಲಿಸಲು ಸಂಬಂಧಿಸಿದ ಗ್ರಾಮ ಪಂಚಾಯ್ತಿ ಹಾಗೂ ಹೆಸ್ಕಾಂ ಸಹಯೋಗದಲ್ಲಿ ಟೈಮರ್ ವಿಶೇಷ ಯೋಜನೆ ರೂಪಿಸಲಾಗಿದೆ. ರೈತರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸಲು ನಾವು ಬದ್ಧ ಎಂದರು.

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ಅಧ್ಯಕ್ಷ ಸೈಯದ್ ಅಜ್ಜಂಪೀರ್ ಖಾದ್ರಿ ಮಾತನಾಡಿ, ರೈತರು, ‘ಸಾರ್ವಜನಿಕರಿಗೆ ಒಳ್ಳೆಯ ಸೇವೆ ಕೊಡುವುದು ನಮ್ಮ ಮೊದಲ ಆದ್ಯತೆ. ಹೆಸ್ಕಾಂನ 7 ಜಿಲ್ಲೆಗಳಲ್ಲಿ 1 ಲಕ್ಷ ರೈತರು ಆಕ್ರಮ ಸಕ್ರಮದಲ್ಲಿ ಸಂಪರ್ಕ ಪಡೆದಿದ್ದಾರೆ. ಹೊಸದಾಗಿ ಕೊಳವೆ ಭಾವಿಗಳಿಗೆ ಶೀಘ್ರ ಸಂಪರ್ಕ ಯೋಜನೆ ಜಾರಿಯಲ್ಲಿದೆ. ಆದಷ್ಟು ಹೆಚ್ಚು ಪಾಲು ರೈತರು ಸೋಲಾರ ವಿದ್ಯುತ್ ಬಳಸುವುದು ಒಳ್ಳೆಯದು’ ಎಂದರು.

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮರಿಗೌಡ ಪಾಟೀಲ ಮಾತನಾಡಿ, ಸೋಲಾರ್ ವಿದ್ಯುತ್ ಈ ಭಾಗದಲ್ಲಿ ಯಶಸ್ವಿ ಆಗುವುದಿಲ್ಲ. ಸರ್ಕಾರ ಶೀಘ್ರ ಸಂಪರ್ಕ ಯೋಜನೆಯನ್ನು ಕೈಬಿಟ್ಟು ಹೊಸ ಪಂಪಸೆಟ್ಗಳಿಗೆ ಮೊದಲಿನಂತೆ ರೈತರಿಗೆ ಆರ್ಆರ್ ನಂಬರ ನೀಡಿ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ಪುರಸಭೆ ಮಾಜಿ ಅಧ್ಯಕ್ಷ ಯಲ್ಲಪ್ಪ ಕಿತ್ತೂರ, ತಾಲ್ಲೂಕ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ, ಹೆಸ್ಕಾಂ ಅಧೀಕ್ಷಕ ಎಂಜನೀಯರ್ ತಿಪ್ಪಣ್ಣ ಹಾಗೂ ನಾರಾಯಣ ಕಳ್ಳಿಮನಿ, ಅಧಿಕಾರಿಗಳಾದ ಸಿ.ಬಿ.ಹೊಸಮನಿ, ಶಿವರಾಜ ಸತ್ತಿಕರ, ವಿ.ಎಸ್.ಮರಿಗೌಡರ, ಸುರೇಶ ಆವಟಿ, ಆನಂದ ಸುಮಾಕರ, ಮಂಜುನಾಥ ಕೆ, ಸಾಗರ ಗಣೇಶಗುಡಿ, ಕೃಷ್ಣ ಕಲ್ಲೇರ, ಎ.ಡಿ.ಸೋಮಾಪುರ, ಪ್ರದೀಪ ಗುಡ್ಡದ, ಎಸ್.ಬಿ.ಮೂಲಿಮನಿ, ಎಂ.ಆರ್.ಸುಂಕದ, ಮಲ್ಲಿಕಾರ್ಜುನ, ಕೆ.ಚಾಮರಾಜ, ಎಚ್.ಡಿ.ಪ್ರಕಾಶ, ಎಂ.ಬಿ.ಕಾಕಸೆ ಮಲ್ಲೇಶ ಒಗ್ಗಣ್ಣನವರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-22-1475811891

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.