ಹಾನಗಲ್: ಪಟ್ಟಣದಲ್ಲಿ ಭಾನುವಾರ ಹೋಳಿ ಆಚರಣೆ ಸಂಭ್ರಮದಿಂದ ನಡೆಯಿತು. ಇಲ್ಲಿನ ಚೌಡಿ ಕ್ರಾಸ್ನ ದೈವದ ಕಾಮನ ದಹನ ಮೂಲಕ ಬಣ್ಣದಾಟ ಚಾಲನೆ ಪಡೆದುಕೊಂಡಿತು.

ಯುವಕರು ಬೈಕ್ಗಳಲ್ಲಿ ಓಡಾಡಿ ಹೋಳಿ ಶುಭಾಷಯ ಹೇಳಿದರು. ಪರಸ್ಪರರಿಗೆ ಬಣ್ಣ ಹಚ್ಚಿ ಖುಷಿಪಟ್ಟರು. ಚಿಣ್ಣರು ಪಿಚಕಾರಿ ಹಿಡಿದುಕೊಂಡು ಬಣ್ಣ ಎರಚಿ ಬಣ್ಣದಾಟದಲ್ಲಿ ಸಂತೋಷಪಟ್ಟರು. ಈ ಬಾರಿ ಮಹಿಳೆಯರು ಅಲ್ಲಲ್ಲಿ ಗುಂಪಾಗಿ ಓಡಾಡಿ ಹೋಳಿ ಆಚರಣೆಯಲ್ಲಿ ತೊಡಗಿದ್ದರು.

ಇಲ್ಲಿನ ಗಾಂಧಿ ವೃತ್ತದಲ್ಲಿ ರೇನ್ ಡ್ಯಾನ್ಸ್ ಆಯೋಜನೆ ಮಾಡಲಾಗಿತ್ತು. ಯುವಕರು ಹೆಚ್ಚು ಸಂಖ್ಯೆಯಲ್ಲಿ ಸೇರಿ ಡಿಜೆ ಹಾಡಿಗೆ ನೃತ್ಯ ಮಾಡಿದರು. ಮಧ್ಯಾಹ್ನದ ಬಿಸಿಲ ಧಗೆ ತಣಿಸಲು ರೇನ್ ಡ್ಯಾನ್ಸ್ ಸಾಥ್ ನೀಡಿತ್ತು. 23 ಸ್ಥಳಗಳಲ್ಲಿ ಪ್ರತಿಷ್ಠಾಪಿಸಿದ್ದ ಕಾಮನ ದಹನ ಸಂಜೆ ತನಕ ನಡೆಯಿತು. ಕೊನೆಯದಾಗಿ ಚಪ್ಪರದೇವರ ಗುಡಿ ಮುಂಭಾಗದಲ್ಲಿ ಕಾಮ ದಹನ ಮೂಲಕ ಹಾನಗಲ್ ಸಂಭ್ರಮದ ಹೋಳಿಗೆ ತೆರೆ ಬಿದ್ದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.