ಹಾನಗಲ್: ತಾಲ್ಲೂಕಿನ ಕಂಚಿನೆಗಳೂರ ಗ್ರಾಮದ ಈಟಗಿನ ಕೆರೆಯಲ್ಲಿ ಈಜಾಡಲು ಹೋಗಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.

ಸಚಿನ್ ಮಾರುತೆಪ್ಪ ಬ್ಯಾತನಾಳ (12) ಮತ್ತು ಸೃಜನ್ ಮಾರುತೆಪ್ಪ ಬ್ಯಾತನಾಳ (10) ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ಇಬ್ಬರು ಸಹೋದರರು ತಾಲ್ಲೂಕಿನ ಸಮ್ಮಸಗಿ ಸಮೀಪದ ನೀರಲಗಿ ಗ್ರಾಮದವರು.

ಅಜ್ಜಿ ಮನೆ ಕಂಚಿನೆಗಳೂರ ಗ್ರಾಮಕ್ಕೆ ಬೇಸಿಗೆ ರಜೆಗಾಗಿ ಬಂದಿದ್ದರು ಎಂದು ತಿಳಿದು ಬಂದಿದೆ.

ಕಾಲುವೆಯಲ್ಲಿ ಮಳುಗಿ ಸಾವು: ತಾಲ್ಲೂಕಿನ ಶ್ರೀಂಗೇರಿ ಗ್ರಾಮ ಸಮೀಪದ ಧರ್ಮಾ ಕಾಲುವೆಯಲ್ಲಿ ಈಜಲು ಹೋಗಿದ್ದ ಫೈಜಾನ್ (20) ಮೃತಪಟ್ಟಿದ್ದಾನೆ. ಉತ್ತರ ಪ್ರದೇಶ ಮೂಲದ ಫೈಜಾನ್, ತಾಲ್ಲೂಕಿನ ಸಮ್ಮಸಗಿ ಗ್ರಾಮದಲ್ಲಿ ಕಟಿಂಗ್ ಶಾಪ್ ಇಟ್ಟುಕೊಂಡಿದ್ದನು. ಮಂಗಳವಾರ ಮಧ್ಯಾಹ್ನ ಈ ಘಟನೆ ಸಂಭವಿಸಿದೆ.

ಜಾಗೃತಿ ಅವಶ್ಯಕ: ಬೇಸಿಗೆಯಲ್ಲಿ ಮಕ್ಕಳು ಗುಂಪು ಕಟ್ಟಿಕೊಂಡು ನೀರು ಅರಸಿಕೊಂಡು ಕೆರೆ, ಕಟ್ಟೆಗಳಲ್ಲಿ ಈಜಾಡುವ ಆಸಕ್ತಿಯನ್ನು ಪಾಲಕರು ತಡೆಯಬೇಕು. ಈ ಬಗ್ಗೆ ಕೆಲವು ದಿನಗಳ ಹಿಂದೆ ಗ್ರಾಮ ಲೆಕ್ಕಾಧಿಕಾರಿಗಳ ಸಭೆ ಕೈಗೊಂಡು ಜನಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗಿತ್ತು ಎಂದು ತಹಶೀಲ್ದಾರ್ ರೇಣುಕಾ ಎಸ್ ತಿಳಿಸಿದ್ದಾರೆ.

ವಿವಿಧ ಏತ ನೀರಾವರಿ ಯೋಜನೆಗಳು ಮತ್ತು ಧರ್ಮಾ ಜಲಾಯಶದ ಮೂಲಕ ತಾಲ್ಲೂಕಿನಲ್ಲಿ ಕೆರೆಗಳನ್ನು ತುಂಬಿಸುವ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ. ಹೀಗಾಗಿ ಕೆರೆಯಲ್ಲಿ ಎಷ್ಟು ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ ಎಂಬ ಅಂದಾಜು ಸಿಗುವುದಿಲ್ಲ. ಇದು ಮಕ್ಕಳ ಜೀವಕ್ಕೆ ಅಪಾಯ ತರುತ್ತದೆ. ಮಕ್ಕಳನ್ನು ಈ ಬಗ್ಗೆ ಎಚ್ಚರಿಸಿ ಜೋಪಾನ ಮಾಡಿಕೊಳ್ಳಬೇಕು. ನೀರಿನಲ್ಲಿ ಮುಳುಗುವ ದುರ್ಘಟನೆಗಳನ್ನು ತಪ್ಪಿಸಬೇಕು ಎಂದು ರೇಣುಕಾ ಎಸ್ ಮನವಿ ಮಾಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-22-1946140633

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.