ಹಾನಗಲ್: ಇಲ್ಲಿನ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಶುಕ್ರವಾರ ಮಹಿಳಾ ದಿನಾಚರಣೆ ನಡೆಯಿತು. ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಸಂಘದ ಮಹಿಳಾ ನೌಕರರು ಆಯೋಜಿಸಿದ್ದ ಈ ಆರೋಗ್ಯ ತಪಾಸಣಾ ಶಿಬಿರದಲ್ಲಿ 150 ಮಹಿಳೆಯರು ತಪಾಸಣೆಗೆ ಒಳಗಾದರು. ಹುಬ್ಬಳ್ಳಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯವರು ಆರೋಗ್ಯ ತಪಾಸಣೆ ಕೈಗೊಂಡರು. ಡಾ.ಮಂಜುನಾಥ, ಜಗದೀಶ ಇದ್ದರು.

ಈ ವೇಳೆ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲೇಶ ಕರಿಗಾರ, ಸರ್ಕಾರಿ ನೌಕರರ ಹಿತ ಕಾಪಾಡುವಲ್ಲಿ ನೌಕರರ ಸಂಘ ಅತ್ಯಂತ ಕಾಳಜಿಯಿಂದ ಕೆಲಸ ಮಾಡುತ್ತಿದ್ದು, ಎಲ್ಲರ ಸಹಕಾರ ಅಗತ್ಯ ಎಂದರು.

ಮಹಿಳಾ ನೌಕರರು ಸಂಘಟಿತರಾಗಿ ಆರೋಗ್ಯ ಶಿಬಿರನ್ನು ನಡೆಸುತ್ತಿರುವುದು ನಿಜಕ್ಕೂ ಮಾದರಿ. ಸರ್ಕಾರಿ ನೌಕರರು ಒಟ್ಟಾಗಿ ನಮ್ಮ ಪಾಲಿನ ಸೇವೆ ಮಾಡುವುದರ ಜೊತೆಗೆ ಸರ್ಕಾದಿಂದ ನಮ್ಮ ಹಕ್ಕುಗಳನ್ನು ಪಡೆಯಲು ಮುಂದಾಗೋಣ. ನೌಕರರ ಹಿತವೇ ಸಂಘದ ಮೂಲ ಉದ್ದೇಶ ಎಂದರು.

ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಗುರುನಾಥ ಗವಾಣಿಕರ ಮಾತನಾಡಿ, ಸರ್ಕಾರಿ ನೌಕರರೆಂದರೆ ಕೇವಲ ತಮ್ಮ ಪಾಲಿನ ಕೆಲಸಕ್ಕೆ ಸೀಮಿತರಲ್ಲ. ಸಕಾಲಿಕವಾಗಿ ಮತ್ತು ಸಮಯ ಸಂದರ್ಭಕ್ಕೆ ಇತರ ಸೇವಾ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಅಗತ್ಯವೂ ಇದೆ. ಈ ನಿಟ್ಟಿನಲ್ಲಿ ಆರೋಗ್ಯ ಶಿಬಿರದ ಮೂಲಕ ತಾಲ್ಲೂಕಿನಲ್ಲಿ ಮಹಿಳಾ ನೌಕರರು ಉತ್ತಮ ಸೇವಾ ಕಾರ್ಯ ಕೈಗೊಂಡಿದ್ದಾರೆ ಎಂದರು.

ಪ್ರಾಧ್ಯಾಪಕಿ ಯಮುನಾ ಕೋಣೆಸರ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗಂಗಮ್ಮ ಹಿರೇಮಠ, ಕೆ.ಆರ್.ಪಾಟೀಲ, ವೈದ್ಯಾಧಿಕಾರಿ ಡಾ.ಅನ್ನಪೂರ್ಣ ಮುಂದಿನಮನಿ, ಶಿಕ್ಷಕಿ ಅನಿತಾ ಕಿತ್ತೂರ, ಆರೋಗ್ಯ ಸಂರಕ್ಷಣಾಧಿಕಾರಿ ಮಿನಾಕ್ಷಿ ಪಾಟೀಲ, ಪ್ರಮುಖರಾದ ಶ್ವೇತಾ ಜಗ್ಗಲ, ಸಾವಿತ್ರಿ ಉಪಾಧ್ಯಾ, ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-22-467802318

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.