ಹಾನಗಲ್: ಭಾರತ ನೆಟ್ ಉದ್ಯಮಿ ಯೋಜನೆಯ ಎರಡನೇ ಭಾಗವಾಗಿ ಗ್ರಾಮೀಣ ಭಾಗದಲ್ಲಿ ಹೈ ಸ್ಪೀಡ್ ಇಂಟರ್ನೆಟ್ ಜಾರಿಗೊಳಿಸಲಾಗುತ್ತಿದ್ದು, ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವಿನ ಡಿಜಿಟಲ್ ಅಂತರ ಕಡಿಮೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಬಿಎಸ್ಎನ್ಎಲ್ ಹುಬ್ಬಳ್ಳಿ ವಲಯ ಉಪ ಮಹಾ ಪ್ರಬಂಧಕ ರಾಜಕುಮಾರ ಆಸಂಗಿ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಉತ್ತೇಜಿಸಲು ಎಲ್ಲ ಗ್ರಾಮಗಳಲ್ಲಿ ತಿದ್ದುಪಡಿ ಮಾಡಿದ ನೆಟ್ ಉದ್ಯಮಿ ಯೋಜನೆ ಕಾರ್ಯಾರಂಭ ಮಾಡಿದೆ ಎಂದರು.

2022ರಲ್ಲಿ ಉದ್ಯಮಿ ಸ್ಕೀಮ್ ಜಾರಿಗೆ ಬಂದಿದೆ. ಇದರ ಮುಂದುವರೆದ ಭಾಗವಾಗಿ ಪೇಜ್-2ನಲ್ಲಿ ಹೈ ಸ್ಪೀಡ್ ಇಂಟರ್ನೆಟ್, ವೈಪೈ ಸಂಪರ್ಕ ಮತ್ತು ಮನೆಗೆ ಟಿ.ವಿ ಜಾನೆಲ್ಗಳು ಲಭ್ಯವಾಗಲಿದೆ ಎಂದರು.

ಗ್ರಾಹಕರು ಆಯ್ಕೆ ಮಾಡುವ ಯೋಜನೆ ಪ್ರಕಾರ ಮಾಸಿಕ ಬಿಲ್ ಪಾವತಿಸಬೇಕು. ₹399 ನಿಂದ ₹ 700 ತನಕ ಮಾಸಿಕ ಯೋಜನೆ ಅಸ್ತಿತ್ವದಲ್ಲಿವೆ ಎಂದರು.

ಹಾನಗಲ್ ತಾಲ್ಲೂಕು ವಲಯದ ಅಧಿಕಾರಿ ಇಂದ್ರಜಿತ್ ಯಾಧವ, ಪ್ರ್ಯಾಂಚಾಯಿಸ್ ಪರವಾಗಿ ರಾಮಣ್ಣ ಯಳ್ಳೂರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-22-1906639264

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.