ಹಾನಗಲ್: ತಾಲ್ಲೂಕಿನ ನಾಲ್ಕರ್ಕ್ರಾಸ್ ಸಮೀಪದ ರೋಶನಿ ಸಮಾಜ ಸೇವಾ ಸಂಸ್ಥೆಯ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ‘ರೈತರು ಮತ್ತು ಕೃಷಿ ಪರಿಕರಗಳ ಮಾರಾಟಗಾರರ ಸಭೆ’ಯು ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಗೆ ಸಾಕ್ಷಿಯಾಯಿತು. ಮಾರಾಟಗಾರರು ಗೈರಾಗಿದ್ದರೂ ಸಭೆ ಮಾಡಲು ಮುಂದಾಗಿದ್ದ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಮುಂಗಾರು ಹಂಗಾಮಿನ ಸಿದ್ಧತೆಗಾಗಿ ಕೃಷಿ ಇಲಾಖೆಯಿಂದ ಸಭೆ ಆಯೋಜಿಸಲಾಗಿತ್ತು. ರಸಗೊಬ್ಬರ, ಬಿತ್ತನೆ ಬೀಜ, ಕೀಟನಾಶಕಗಳ ಪೂರೈಕೆ, ವಿತರಣೆ, ಕೃಷಿ ಪರಿಕರಗಳ ಕುರಿತು ಚರ್ಚಿಸಲು ತೀರ್ಮಾನಿಸಲಾಗಿತ್ತು.

ತಾಲ್ಲೂಕಿನ ಎಲ್ಲ ಕೃಷಿ ಪರಿಕರಗಳ ಮಾರಾಟಗಾರರು ಸಭೆಗೆ ಹಾಜರಾಗಿರಲಿಲ್ಲ. ನೋಟಿಸ್ ನೀಡಿದರೂ ಸಭೆಗೆ ಗೈರಾಗಿದ್ದರು. ಅಧಿಕಾರಿಗಳು ಸಹ ಮಾರಾಟಗಾರರನ್ನು ಸಭೆಗೆ ಕರೆಸುವಲ್ಲಿ ವಿಫಲರಾಗಿದ್ದರು.

ಮಾರಾಟಗಾರರು ಇಲ್ಲದಿದ್ದರೂ, ಸಭೆ ನಡೆಸಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ವರದಿ ನೀಡಲು ಸ್ಥಳೀಯ ಅಧಿಕಾರಿಗಳು ಮುಂದಾಗಿದ್ದರು.

ಅವಾಗಲೇ ಗರಂ ಆದ ರೈತರು, ಸಭೆಯನ್ನು ನಡೆಸದಂತೆ ಪಟ್ಟು ಹಿಡಿದರು. ಮಾರಾಟಗಾರರು ಇಲ್ಲದಿದ್ದರೆ, ರೈತರ ಕಷ್ಟ ಕೇಳುವವರು ಯಾರು ? ಎಂದು ಪ್ರಶ್ನಿಸಿದರು.

ಮಾರಾಟಗಾರರು ಹಾಗೂ ಅಧಿಕಾರಿಗಳ ವರ್ತನೆಗೆ ಬೇಸರ ಹೊರಹಾಕಿದ ರೈತರು, ‘ಸಭಾಂಗಣದಲ್ಲಿ ನಡೆಯುವ ಚರ್ಚೆಗಳು ಸರಿಯಾಗಿ ಆಗುವುದಿಲ್ಲ. ಸಭೆಯು ಗೊಂದಲದ ಗೂಡಾಗಿದೆ. ಈ ಹಿಂದಿನ ವರ್ಷವೂ ಸಭೆಯನ್ನು ಎರಡು ಬಾರಿ ಕರೆದು ಮುಂದೂಡಲಾಗಿತ್ತು. ಅಧಿಕಾರಿ ಹಾಗೂ ಮಾರಾಟಗಾರರ ಬೇಜವಾಬ್ದಾರಿಯಿಂದ ರೈತರು ಕಂಗಾಲಾಗುತ್ತಿದ್ದಾರೆ’ ಎಂದು ಅಳಲು ತೋಡಿಕೊಂಡರು.

‘ಪ್ರತಿ ವರ್ಷವೂ ಕೃಷಿ ಪರಿಕರಗಳ ಮಾರಾಟಗಾರರು ಸಭೆಗೆ ಕಡ್ಡಾಯವಾಗಿ ಹಾಜರಾಗುತ್ತಿಲ್ಲ. ಇದು ಕೃಷಿ ಇಲಾಖೆಯ ನಿಷ್ಕಾಳಜಿ. ಕಾಟಾಚಾರದ ಸಭೆ ನಮಗೆ ಬೇಡ. ಕೃಷಿ ಇಲಾಖೆ ಸೂಚನೆಗಳನ್ನು ಕೃಷಿ ಪರಿಕರ ಮಾರಾಟಗಾರರು ಪಾಲಿಸುತ್ತಿಲ್ಲ. ಮಾರಾಟಗಾರರ ಮೇಲೆ ಇಲಾಖೆಯ ಹಿಡಿತ ತಪ್ಪಿದೆ. ರೈತರು ಶೋಷಣೆಗೆ ಒಳಗಾಗುತ್ತಿದ್ದಾರೆ’ ಎಂದು ರೈತರು ದೂರಿದರು,

ಮಾರಾಟಗಾರರು ಗೈರಾಗಿದ್ದನ್ನು ರೈತರು ವಿರೋಧಿಸುತ್ತಿದ್ದಂತೆ, ಸಹಾಯಕ ಕೃಷಿ ನಿರ್ದೇಶಕ ಸಿ.ಟಿ.ಸುರೇಶ ಅವರು ಸಭೆಯನ್ನು ತಾತ್ಕಾಲಿಕವಾಗಿ ಮುಂದೂಡಿರುವುದಾಗಿ ಘೋಷಿಸಿದರು.

ಕೃಷಿ ಅಧಿಕಾರಿ ಸಂಗಮೇಶ ಹಕ್ಲಪ್ಪನವರ, ಕೃಷಿ ಪರಿಕರಗಳ ಮಾರಾಗಾರರ ಸಂಘದ ತಾಲ್ಲೂಕು ಅಧ್ಯಕ್ಷ ಸುರೇಶಗೌಡ ಪಾಟೀಲ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ, ಸದಸ್ಯ ಮಹ್ಮದ್ಹನೀಫ್ ಬಂಕಾಪೂರ, ರಾಜು ಜೋಗಪ್ಪನವರ, ಕೃಷಿಕ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಟಿ.ಕಲ್ಲಗೌಡ್ರ ಸಭೆಯಲ್ಲಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-22-1581583976

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.