ಹಾನಗಲ್: ಹಾನಗಲ್ ಪಟ್ಟಣ ವ್ಯಾಪ್ತಿಯ ಆಕಾಶದ ಮೇಲೆ ಭಾನುವಾರ ಕೆಳಮಟ್ಟದಲ್ಲಿ ಸಣ್ಣ ಗಾತ್ರದ ವಿಮಾನ ಹಾರಾಟ ನಡೆಸಿ ಜನರ ಅಚ್ಚರಿಗೆ ಕಾರಣವಾಯಿತು.

ಬೆಳಿಗ್ಗೆಯಿಂದಲೇ ಪಟ್ಟಣದಲ್ಲಿ ವಿಮಾನ ಹಾರಾಟದ ಸದ್ದು ಕೇಳುತ್ತಿತ್ತು. ಮಧ್ಯಾಹ್ನದ ಹೊತ್ತಿಗೆ ಆಕಾಶದಲ್ಲಿ ಸಣ್ಣ ಗಾತ್ರದ ವಿಮಾನ ಪ್ರತ್ಯಕ್ಷವಾಗಿ ಈ ಭಾಗದ ಜನರಲ್ಲಿ ಆತಂಕ ಮೂಡಿಸಿತು.

ಎರಡ್ಮೂರು ಬಾರಿ ವಿಮಾನ ಅತ್ಯಂತ ಕೆಳಮಟ್ಟದಲ್ಲಿ ಸಂಚಾರ ನಡೆಸಿತು. ಅತೀ ಕಡಿಮೆ ಅಂತರದಲ್ಲಿ ವಿಮಾನವನ್ನು ಕಂಡ ಮಕ್ಕಳು ಕೇಕೆ ಹಾಕಿ ಖುಷಿಪಟ್ಟರು. ಅನಿರೀಕ್ಷಿತವಾಗಿ ವಿಮಾನ ಹಾರುತ್ತಿರುವುದು ಗಮನಿಸಿದ ಜನರು ವಿಚಲಿತರಾದರು.

ಕಳೆದೆರಡು ದಿನಗಳಿಂದ ಮುಂಡಗೋಡ ಮತ್ತು ಶಿರಸಿ ಹದ್ದಿಗೆ ಹೊಂದಿಕೊಂಡ ತಾಲ್ಲೂಕಿನ ಗಡಿ ಗ್ರಾಮಗಳ ವ್ಯಾಪ್ತಿಯ ಆಕಾಶದಲ್ಲಿ ಸಣ್ಣ ಗಾತ್ರದ ವಿಶೇಷ ವಿಮಾನವೊಂದು ಕೆಳಮಟ್ಟದಲ್ಲಿ ಸಂಚಾರ ನಡೆಸುತ್ತಿದೆ. ಹಗಲು ಹೊತ್ತಿನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದೆ ಎಂಬ ಸುದ್ದಿಗಳು ಹರಿದಾಡಿದ್ದವು.

ಇರಾನ್ ಮತ್ತು ಅಮೇರಿಕಾ ಸಂಘರ್ಷದಲ್ಲಿ ಯುದ್ಧ ವಿಮಾನಗಳ ದಾಳಿಯನ್ನು ಮೊಬೈಲ್ನಲ್ಲಿ ವೀಕ್ಷಿಸುವ ಜನರಿಗೆ ತಮ್ಮ ತಲೆ ಮೇಲೆ ಪೈಟರ್ಜೆಟ್ ಮಾದರಿಯ ವಿಮಾನ ಹಾರಿಕೊಂಡು ಹೋಗುತ್ತಿರುವ ದೃಶ್ಯ ಗಾಬರಿಗೆ ಒಳಗಾಗುವಂತೆ ಮಾಡಿತ್ತು. ವರದಾ–ಬೇಡ್ತಿ ನದಿ ಜೋಡಣೆಯ ಅನುಷ್ಠಾನದ ಸ್ಥಳ ಸರ್ವೆ ಕಾರ್ಯ ವೈಮಾನಿಕ ಸಮೀಕ್ಷೆ ಮೂಲಕ ನಡೆಯುತ್ತಿದೆ ಎಂದು ಕೆಲವು ಜನರು ಮಾತನಾಡಿಕೊಂಡರು.

ಪೊಲೀಸ್ ಇಲಾಖೆ ಸ್ಪಷ್ಟನೆ: ಖನಿಜ ಸಂಪನ್ಮೂಲಗಳ ಸರ್ವೆ ಕಾರ್ಯಕ್ಕಾಗಿ ಈ ವಿಮಾನದ ಸಂಚಾರ ನಡೆಯುತ್ತಿದೆ. ಭೂಗರ್ಭದಲ್ಲಿರುವ ಖನಿಜ ಸಂಪತ್ತಿನ ಗುರುತು ಹಿಡಿಯುವುದು ಇದರ ಉದ್ದೇಶವಾಗಿದೆ. ಸಂಬಂಧಿಸಿದ ಇಲಾಖೆಗಳ ಅನುಮತಿ ಪಡೆದು, ವಿಜ್ಞಾನಾಧಾರಿತ ಸಮೀಕ್ಷೆ ನಡೆಯುತ್ತಿದೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.

ಸಮೀಕ್ಷೆಗಾಗಿ ಎರಡು ‘ಸೆಸ್ನಾ ಕ್ಯಾರವಾನ್ 208ಬಿ’ ಮಾದರಿ ವಿಮಾನಗಳನ್ನು ಬಳಸಲಾಗಿದೆ. 80 ಮೀಟರ್ ಎತ್ತರದಲ್ಲಿ ವಿಮಾನ ಹಾರಾಟ ಮಾಡಿ ಸಮೀಕ್ಷೆ ನಡೆಸುತ್ತದೆ. ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ಸಮೀಕ್ಷೆ ನಡೆಯುತ್ತದೆ. ಮಂಗಳೂರು ಮತ್ತು ಶಿವಮೊಗ್ಗ ವಿಮಾನ ನಿಲ್ದಾಣದಿಂದ ಸಮೀಕ್ಷೆಗಾಗಿ ವಿಮಾನಗಳು ಉಡಾವಣೆ ಮಾಡುತ್ತವೆ.

ಹಿಮಾಲಯನ್ ಹೆಲಿ ಸರ್ವಿಸಸ್ ಲಿಮಿಟೆಡ್ ಸಂಸ್ಥೆ ಮತ್ತು ಆಸ್ಟ್ರೇಲಿಯಾದ ಎಕ್ಸ್ಕ್ಯಾಲಿಬರ್ ಏವಿಯೇಷನ್ ಕಂಪನಿ ಸಮಯೋಗದಲ್ಲಿ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಿವಿಧ ಜಿಲ್ಲೆಗಳ ಮೇಲ್ಮೈಯಲ್ಲಿ ಕಡಿಮೆ ಎತ್ತರದಲ್ಲಿ ವಿಮಾನ ಸಂಚಾರ ನಡೆಯುತ್ತಿದೆ. ಇದರಿಂದ ಸಾರ್ವಜನಿಕರಲ್ಲಿ ಆತಂಕ ಬೇಡ. ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ (ಜಿಎಸ್ಐ) ವತಿಯಿಂದ ನಡೆಯುತ್ತಿರುವ ಏರೊ ಜಿಯೋಫಿಸಿಕಲ್ ಸಮೀಕ್ಷೆ ಭಾಗವಾಗಿ ಈ ವಿಮಾನ ಸಂಚಾರ ಜುಲೈ 31 ತನಕ ನಡೆಯುತ್ತದೆ ಎಂದು ಹಾನಗಲ್ ಪಿಎಸ್ಐ ಸಂಪತ್ ಆನಿಕಿವಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-22-785726585

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.