ಹಾನಗಲ್: ತಾಲ್ಲೂಕಿನ 3,310 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, ಈ ಪೈಕಿ ಹಲವು ಕಡೆಗಳಲ್ಲಿ ಮಾವಿನ ಗಿಡಗಳಲ್ಲಿ ಹೂವು ಒಣಗುವ ರೋಗ ಕಾಣಿಸಿಕೊಂಡಿರುವುದು ರೈತರನ್ನು ಆತಂಕಗೊಳಿಸಿದೆ.

ಹಾನಗಲ್ ತಾಲ್ಲೂಕಿನ ಮಾವಿಗೆ ರಾಜ್ಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆಯಿದೆ. ಇದೇ ಮೊದಲ ಬಾರಿಗೆ ಹೂವು ಒಣಗುವ ರೋಗ ಕಾಣಿಸಿಕೊಂಡಿರುವುದರಿಂದ, ಬಹುತೇಕ ಗಿಡಗಳಲ್ಲಿರುವ ಹೂವುಗಳು ಉದುರಿ ಬಿದ್ದಿವೆ. ಈ ವರ್ಷ ನಷ್ಟ ಅನುಭವಿಸುವ ಭೀತಿ ರೈತರನ್ನು ಕಾಡುತ್ತಿದೆ.

ಹವಾಮಾನ ಬದಲಾವಣೆಯಿಂದಾಗಿ ಹಲವು ಮಾವಿನ ಗಿಡಗಳಲ್ಲಿದ್ದ ಹೂವುಗಳು ಉದುರಿ ನೆಲಕ್ಕೆ ಬಿದ್ದಿದ್ದವು. ಕೆಲ ಗಿಡಗಳ ಹೂವುಗಳು ಕಪ್ಪಾಗಿದ್ದವು. ಈ ಬಗ್ಗೆ ರೈತರು, ತೋಟಗಾರಿಕೆ ಇಲಾಖೆ ಅಧಿಕಾರಿಗಳ ಎದುರು ಅಳಲು ತೋಡಿಕೊಂಡಿದ್ದರು.

ಧಾರವಾಡ ತೋಟಗಾರಿಕೆ ಸಂಶೋಧನಾ ಕೇಂದ್ರದ ತಂಡದವರು, ಹಾನಗಲ್ ತಾಲ್ಲೂಕಿನ ಬೈಚವಳ್ಳಿ, ಚೀರನಹಳ್ಳಿ, ಹನುಮನಕೊಪ್ಪ, ವಂಶಿ ತೋಟಗಳಿಗೆ ಬುಧವಾರ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ಗಿಡಗಳಿಗೆ ಹೂವು ಒಣಗುವ ರೋಗ ಬಾಧೆ ಆವರಿಸಿರುವುದನ್ನು ಪತ್ತೆ ಮಾಡಿದ್ದಾರೆ. ‘ಮುಂಜಾಗ್ರತಾ ಕ್ರಮವೇ ಇದಕ್ಕೆ ಪರಿಹಾರ. ರೋಗ ಬಾಧಿಸಿದ ನಂತರ ಇದಕ್ಕೆ ಯಾವುದೇ ಪರಿಹಾರವಿಲ್ಲ’ ಎಂದು ತಂಡದವರು ಹೇಳಿರುವುದು, ರೈತರನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ. ಹಣ್ಣು ವಿಜ್ಞಾನಿ ಜೆ.ಬಿ. ಗೋಪಾಲಿ ಮಾತನಾಡಿ, ‘ಧಾರವಾಡ ಜಿಲ್ಲೆಯಲ್ಲಿ ವ್ಯಾಪಕವಾಗಿರುವ ಹೂವು ಒಣಗುವ ರೋಗವು ಹಾನಗಲ್ಗೂ ವ್ಯಾಪಿಸಿದೆ. ಇದೇ ಮೊದಲ ಬಾರಿಗೆ ಈ ರೋಗ ಕಾಣಿಸಿದೆ. ಇದು ಬೆಳೆಗಾರರಿಗೆ ಹೊಸತು. ನಿರ್ವಹಣಾ ಕ್ರಮಗಳನ್ನು ಪಾಲಿಸಲು ಸಾಧ್ಯವಾಗಿಲ್ಲ’ ಎಂದರು.

‘ಮಾವಿನ ಗಿಡದಲ್ಲಿ ಡಿಸೆಂಬರ್ನಲ್ಲಿ ಎಲೆಗಳು ಕಾಣದಷ್ಟು ಪ್ರಮಾಣದಲ್ಲಿ ಹೂವು ಬಿಟ್ಟಿದ್ದವು. ಜನವರಿ ಹೊತ್ತಿಗೆ ಇಬ್ಬನಿ ಹೊಡೆತ ಹೆಚ್ಚಾಯಿತು. ಆದ್ರತೆ ಹೆಚ್ಚಾಗಿ ರೋಗ ಆವರಿಸಿದೆ. ರೋಗ ಕಾಣಿಸಿಕೊಂಡ ನಾಲ್ಕೈದು ದಿನಗಳಲ್ಲಿ ಗಿಡದಲ್ಲಿನ ಹೂವು ಒಣಗಿ ಕೆಳಗೆ ಬೀಳುತ್ತವೆ’ ಎಂದರು.

ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಸಿದ್ದರಾಮಯ್ಯ ಬರಗಿಮಠ ಮಾತನಾಡಿ, ‘ಜಿಲ್ಲೆಯಲ್ಲಿ 5,300 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಿದೆ. ಹಾನಗಲ್ ತಾಲ್ಲೂಕಿನಲ್ಲಿ 3,310 ಹೆಕ್ಟರ್ ಪ್ರದೇಶದಲ್ಲಿ ಮಾವು ಬೆಳೆಯಿದೆ. ಮಾವು ಹಾನಿಯಾಗಿದ್ದರಿಂದ, ವಿಜ್ಞಾನಿಗಳಿಂದ ಸಮೀಕ್ಷೆ ಮಾಡಿಸಲಾಗಿದೆ. ಈ ಬಗ್ಗೆ ಸರ್ಕಾರಕ್ಕೂ ಮಾಹಿತಿ ನೀಡಲಾಗುವುದು’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-22-519790222

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.