ಹಾನಗಲ್: ಮುಸ್ಲಿಂ ಸಮುದಾಯದಿಂದ ಬುಧವಾರ ಪಟ್ಟಣದಲ್ಲಿ ನಡೆಯಬೇಕಿದ್ದ ಮೌನ ಮೆರವಣಿಗೆಯನ್ನು ಮುಂದೂಡಲಾಗಿದೆ ಎಂದು ಅಂಜುಮನ್ ಇಸ್ಲಾಂ ಹಾನಗಲ್ ಕಮೀಟಿ ಅಧ್ಯಕ್ಷ ನಜೀರ್ಅಹ್ಮದ್ ಸವಣೂರ ಹೇಳಿದರು.

ಗೋವು ರಾಷ್ಟ್ರೀಯ ಪ್ರಾಣಿ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಬೇಕು ಎಂಬ ಬೇಡಿಕೆಯನ್ನು ಇಟ್ಟುಕೊಂಡು ಮೌನ ಮೆರವಣಿಗೆ ಮೂಲಕ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲು ಉದ್ದೇಶಿಸಿದ್ದ ಮೆರವಣಿಗೆಯನ್ನು ಜೂನ್ 6 ರಂದು ಶನಿವಾರ ನಿಗದಿ ಮಾಡಲಾಗಿದೆ ಎಂದು ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.

ಜೂನ್ 3ರಂದು ಬುಧವಾರ ರಾಜ್ಯದ ನೂತನ ಮುಖ್ಯಮಂತ್ರಿಗಳ ಪ್ರಮಾಣವಚನ ಸ್ವೀಕಾರ ಸಮಾರಂಭ ಇದೆ. ಹೀಗಾಗಿ ಪೊಲೀಸ್ ಇಲಾಖೆ ಸೂಚನೆ ಮೇರೆಗೆ ಮೌನ ಮೆರವಣಿಗೆಯ ದಿನವನ್ನು ಮುಂದೂಡಲಾಗಿದೆ ಎಂದರು.

ಮಂಗಳವಾರ ತಾಲ್ಲೂಕಿನ ಎಲ್ಲ ಅಂಜುಮನ್ ಕಮೀಟಿ ಪದಾಧಿಕಾರಿಗಳು ಸಭೆ ಸೇರಿ ಈ ನಿರ್ಣಯ ಕೈಗೊಂಡಿದ್ಧೇವೆ. ಜೂ 6 ರಂದು ಶನಿವಾರ ಬೆಳಿಗ್ಗೆ ಕಾಶ್ಮೀರಿ ದರ್ಗಾ ಆವರಣದಿಂದ ಮುಖ್ಯ ರಸ್ತೆಯ ಮೂಲಕ ತಹಶೀಲ್ದಾರ್ ಕಚೇರಿ ತನಕ ಮೌನ ಮೆರವಣಿಗೆ ನಡೆಯಲಿದೆ. ಮುಸ್ಲಿಂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ನಜೀರ್ಅಹ್ಮದ್ ಸವಣೂರ ಹೇಳಿದರು.

ಅಕ್ಕಿಆಲೂರ ಅಂಜುಮನ್ ಕಮೀಟಿ ಕಾರ್ಯದರ್ಶಿ ಯಾಸೀರ್ಅರಾಫತ್ ಮಕಾಂದಾರ್, ಹಾನಗಲ್ ಕಮೀಟಿಯ ನೀಸಾರ್ಅಹ್ಮದ್ ಗೌಂಡಿ, ನೀಸಾರ್ ಖಾಜಿ, ಅಬ್ದುಲ್ರೆಹಮಾನ್ ನರೇಗಲ್, ಖುರ್ಷಿದ್ ಹುಲ್ಲತ್ತಿ, ಮುನೀರ್ಅಹ್ಮದ್ ಪಾಳಾ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-22-1709036436

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.