ಹಾನಗಲ್: ಮಠಗಳ ಅಭಿವೃದ್ಧಿಗೆ ಸರ್ಕಾರದ ಅನುದಾನ ಸಿಗಬಹುದು, ಆದರೆ ಭಕ್ತರ ನಂಬಿಕೆ, ಗೌರವ ಮತ್ತು ಸಹಕಾರದಿಂದ ಮಠಗಳು ಧಾರ್ಮಿಕ ಹಾಗೂ ಸಾಂಸ್ಕೃತಿಕವಾಗಿ ಶ್ರೀಮಂತಗೊಳ್ಳುತ್ತವೆ ಎಂದು ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಅಕ್ಕಿಆಲೂರ ಮುತ್ತಿನಕಂತಿಮಠದ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ಭ್ರಮರಾಂಭ ಮತ್ತು ಮಲ್ಲಿಕಾರ್ಜುನ ದೇವಸ್ಥಾನ, ಪಂಡಿತಾರಾಧ್ಯ ಮಂಗಲ ಭವನದ ಉದ್ಘಾಟನೆಯ ಕುರಿತು ಶನಿವಾರ ಮಠದ ಆವರಣದಲ್ಲಿ ನಡೆದ ಭಕ್ತರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಮಠಗಳು ಸಂಕಷ್ಟದಲ್ಲಿದ್ದಾಗ ಭಕ್ತರೇ ಮಠದ ಉದ್ಧಾರಕ್ಕೆ ನಿಂತ ಸಾಕಷ್ಟು ಪ್ರಸಂಗಗಳು ಈ ನಾಡಿನಲ್ಲಿವೆ. ನಶಿಸುವ ಹಂತದಲ್ಲಿದ್ದ ಮುತ್ತಿನಕಂತಿಮಠದ ಜವಾಬ್ದಾರಿ ವಹಿಸಿಕೊಂಡು ಚಂದ್ರಶೇಖರ ಶಿವಾಚಾರ್ಯರು ಉತ್ತಮ ಕೆಲಸ ಮಾಡಿದ್ದಾರೆ. ಮಠದ ಆವರಣದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳಿಗೆ ಈಗ ಭಕ್ತರ ಸಹಾಯದ ಅಗತ್ಯವಿದೆ ಎಂದರು.

ಮುತ್ತಿನಕಂತಿಮಠದ ಪೀಠಾಧಿಪತಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಇಲ್ಲಿ ನಿರ್ಮಾಣ ಹಂತದಲ್ಲಿರುವ ದೇವಸ್ಥಾನಗಳು ಮತ್ತು ಮಂಗಲ ಭವನಕ್ಕೆ ಈತನಕ ಸುಮಾರು ₹18 ಕೋಟಿ ವೆಚ್ಚ ತಗುಲಿದೆ. ಕೆಲಸ ಸಂಪೂರ್ಣಗೊಳ್ಳಲು ಇನ್ನೂ ₹ 2 ಕೋಟಿ ಅಗತ್ಯವಾಗಿದೆ ಎಂದರು.

2027 ರ ಫೆಬ್ರವರಿ ತಿಂಗಳಲ್ಲಿ ದೇವಸ್ಥಾನ ಮತ್ತು ಮಂಗಲ ಭವನ ಉದ್ಘಾಟನೆಯ ಸಮಯ ನಿಗದಿ ಮಾಡುವ ಉದ್ದೇಶವಿದ್ದು, ಮಠದ ಅಭಿವೃದ್ಧಿಗೆ ಭಕ್ತರು ಕೈಜೋಡಿಸಬೇಕು ಎಂದರು.

ಮಠದ ಭಕ್ತರಾದ ರಾಜಣ್ಣ ಗೌಳಿ, ಸಂಜೀವಕುಮಾರ ನೀರಲಗಿ, ಪ್ರಕಾಶಗೌಡ ಪಾಟೀಲ, ರಾಜಶೇಖರ ಕಟ್ಟೆಗೌಡ್ರ, ಸಿದ್ಧಲಿಂಗಪ್ಪ ಕಮಡೊಳ್ಳಿ, ಸಂದೀಪ ಪಾಟೀಲ ಮಾತನಾಡಿದರು.

ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಅಕ್ಕಿಆಲೂರ ವಿರಕ್ತಮಠದ ಶಿವಬಸವ ಸ್ವಾಮೀಜಿ, ಕೂಡಲ ಗುರುಮಹೇಶ್ವರ ಸ್ವಾಮೀಜಿ, ವಿಜಯಪುರದ ಅಭಿನವ ಸಿದ್ಧಾರೂಢ ಸ್ವಾಮೀಜಿ, ತುಪ್ಪದ ಕುರಹಟ್ಟಿಯ ವಾಗೀಶ ಪಂಡಿತಾರಾಧ್ಯ ಸ್ವಾಮೀಜಿ, ಹೇರೂರ ನಂಜುಂಡ ಪಂಡಿತಾರಾಧ್ಯ ಸ್ವಾಮೀಜಿ, ಶಿರಶ್ಯಾಡ ಅಭಿನವ ಮುರುಘೇಂದ್ರ ಸ್ವಾಮೀಜಿ, ನರಗುಂದ ಪಂಚಗೃಹ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಶನಿವಾರಸಂತೆಯ ಅಭಿನವ ಸಿದ್ಧಲಿಂಗ ಸ್ವಾಮೀಜಿ, ಧಾರವಾಡ ಹಿರೇಮಠದ ಶಶಾಂಕ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಪ್ರಮುಖರಾದ ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ಷಣ್ಮುಖಪ್ಪ ಮುಚ್ಚಂಡಿ, ಎಸ್.ಅಮರೇಂದ್ರ, ರಾಮನಗೌಡ ಪಾಟೀಲ, ಕೃಷ್ಣಾ ಈಳಿಗೇರ, ಅಶೋಕ ಗದ್ದಿಗೌಡ್ರ, ಉದಯ ವಿರುಪಣ್ಣನವರ, ಶೇಖಪ್ಪ ಗೌಳಿ, ಕಲ್ಯಾಣಕುಮಾರ ಶೆಟ್ಟರ, ವಿ.ವಿ.ಹಿರೇಮಠ, ಮಹೇಶ ಹಾವೇರಿ, ಎಂ.ಎಂ.ಹಿರೇಮಠ, ಶಿವಯೋಗಿ ಹಿರೇಮಠ, ಎಸ್.ಎಸ್.ಹಿರೇಮಠ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-22-1199527306

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.