ಹಿರೇಕೆರೂರ: ಜೈ ಜವಾನ್ ಜೈ ಕಿಸಾನ್ ಎಂಬ ಉಕ್ತಿಯಂತೆ ದೇಶ ಕಾಯುವ ಯೋಧ, ದೇಶಕ್ಕೆ ಅನ್ನ ನೀಡುವ ರೈತ ಈ ಮಣ್ಣಿನ ಉಸಿರು ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.

42 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಪಡೆದು ಸ್ವ–ಗ್ರಾಮವಾದ ತಾಲ್ಲೂಕಿನ ಆಲದಗೇರಿ ಗ್ರಾಮದಲ್ಲಿ ಈಚೆಗೆ ಗ್ರಾಮಕ್ಕೆ ಆಗಮಿಸಿದ ರೇವಣಪ್ಪ ದ್ಯಾಮಕ್ಕನವರ ಅವರ ಸ್ವಾಗತ ಹಾಗೂ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಭಾರತವು ಜಗತ್ತಿನ ಬಲಿಷ್ಠ ರಾಷ್ಟ್ರವಾಗಿ ರೂಪುಗೊಳ್ಳಲು ಯೋಧರ ಪರಿಶ್ರಮವಿದೆ. ಯುವಜನರು ದುಃಶ್ಚಟಗಳಿಗೆ ದಾಸರಾಗದೆ ದೇಶ, ಸಮಾಜ ಸೇವೆಯಲ್ಲಿ ನಿರತರಾಗಬೇಕು ಎಂದು ಹೇಳಿದರು .

‘ಈ ನಿಟ್ಟಿನಲ್ಲಿ ಆಲದಗೇರಿ ಗ್ರಾಮದ ನಮ್ಮ ಮನೆ ಮಗ ರೇವಣಪ್ಪ ದ್ಯಾಮಕ್ಕನವರ ಸುದೀರ್ಘ 42 ವರ್ಷಗಳ ಕಾಲ ದೇಶದ ಗಡಿಭಾಗಗಳನ್ನು ಕಾಯ್ದು ನಿವೃತ್ತರಾಗಿ ಹುಟ್ಟೂರಿನಲ್ಲಿ ಅದ್ದೂರಿಯಾಗಿ ಸನ್ಮಾನಿತರಾಗಿರುವುದು ಎಲ್ಲಾ ಪದವಿಗಿಂತ ದೊಡ್ಡದು. ಅವರ ಈ ಸೇವೆ ಇಂದಿನ ಯುವಕರಿಗೆ ಪ್ರೇರಣೆಯಾಗಬೇಕು’ ಎಂದರು.

ಇಂದಿನ ಮಕ್ಕಳಿಗೆ ವಾಘಾ ಗಡಿ ಪ್ರದೇಶದಲ್ಲಿ ನಡೆಯುವ ಖವಾಯಿತ ಪ್ರದರ್ಶನ ತೋರಿಸುವ ಮೂಲಕ ದೇಶಭಕ್ತಿ ಪ್ರೇಮವನ್ನು ಹೆಚ್ಚಿಸಬೇಕು. ಈ ದೇಶ ಸೇವೆಗೆ ತನ್ನ ಪತಿ ಮಕ್ಕಳನ್ನು ಕಳಿಸಿ ಒಂಟಿ ಜೀವನ ನಡೆಸಿದ ರೇಣುಕವ್ವ ರೇವಣಪ್ಪ ದ್ಯಾಮಕ್ಕನವರ ಧೈರ್ಯವನ್ನು ನಾವೆಲ್ಲರೂ ಮೆಚ್ಚಿಕೊಳ್ಳಬೇಕು . ಈ ನಿಟ್ಟಿನಲ್ಲಿ ಎಲ್ಲ ತಾಯಂದಿರು ತಮ್ಮ ಮಕ್ಕಳನ್ನು ದೇಶ ಸೇವೆಗೆ ಕಳಿಸಲು ಯಾವತ್ತು ಹಿಂದೇಟು ಹಾಕದೆ ದೇಶ ಪ್ರೇಮವನ್ನು ತುಂಬಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಉಪನ್ಯಾಸಕ ಮಂಜುನಾಥ ಚಲವಾದಿ , ಭಾರತ ದೇಶ ನೌಕಾಪಡೆ , ವಾಯುಸೇನೆ, ಭೂಸೇನೆ ಮೂರು ಪ್ರಮುಖ ಅಂಗಗಳು ದೇಶವನ್ನು ರಕ್ಷಿಸುವಲ್ಲಿ ಸಮರ್ಥವಾಗಿವೆ. ಈ ನಿಟ್ಟಿನಲ್ಲಿ ಈ ಗ್ರಾಮದ ಮಣ್ಣಿನ ಮಗ 42 ವರ್ಷ ದೇಶ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಕಾರಣ ಹಬ್ಬದ ರೀತಿಯಲ್ಲಿ ಗ್ರಾಮಸ್ಥರು ಸೇರಿ ಸನ್ಮಾನಿಸಿದ ಹಿರಿಮೆ ದೊಡ್ಡದು ಅವರ ದೇಶಭಕ್ತಿಯನ್ನು ನಾವೆಲ್ಲರೂ ಮೆಚ್ಚಿ ಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೇಣುಕವ್ವ ರೇವಣೇಪ್ಪ ದ್ಯಾಮಕ್ಕನವರ ವಹಿಸಿದ್ದರು.

ತಾಲ್ಲೂಕು ಬಿಜೆಪಿ ಮಂಡಲದ ಅಧ್ಯಕ್ಷ ಸಂಜೀವಯ್ಯ ಕಬ್ಬಿಣಕಂತಿಮಠ, ಪ್ರಕಾಶ ಗೌಡರ, ರವಿ ಬಾಳಿಕಾಯಿ, ಸೈನಿಕರಾದ ರಾಘು ದ್ಯಾಮಕ್ಕನವರ , ಮಹೇಶ ಕರಬುಳ್ಳವರ , ಚೌಡಪ್ಪ ದ್ಯಾಮಕ್ಕಳವರ , ಮಂಜುನಾಥ ದ್ಯಾಮಕ್ಕನವರ, ವಿನಾಯಕ ಗೌಡರ, ಚಂದ್ರಪ್ಪ ಬೂತನವರ, ಶಿವರಾಜಕುಮಾರ ಯಡಚಿ, ಕುಬೇರಪ್ಪ ಗೌಡರ, ಕುಮಾರ ಮಾಸಣಗಿ, ಬಸನಗೌಡ ಗೌಡರ, ಕರಿಯಪ್ಪ ಚಲವಾದಿ, ರಾಜು ಹುಬ್ಬಳ್ಳಿ ಮತ್ತು ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-22-1299144822

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.