ಹಾವೇರಿ: ಬೈಕ್ನಲ್ಲಿ ಡ್ರಾಪ್ ಕೇಳಿ 1 ಕಿ.ಮೀ.ವರೆಗೂ ಪ್ರಯಾಣಿಸಿ ಸವಾರನ ಚಿನ್ನದ ಸರ ಕಳ್ಳತನ ಮಾಡಲಾಗಿದ್ದು, ಈ ಬಗ್ಗೆ ಬ್ಯಾಡಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುವ ಗಿರೀಶ ಎಂಬುವವರು ಕಳ್ಳತನದ ಬಗ್ಗೆ ದೂರು ನೀಡಿದ್ದಾರೆ. 50 ವರ್ಷದ ಅಪರಿಚಿತನ ವಿರುದ್ಧ ಎಫ್ಐ ಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ದೂರುದಾರ ಗಿರೀಶ್, ಮೇ 20ರಂದು ಮೋಟೆಬೆನ್ನೂರಿನಿಂದ ಅರಬಗೊಂಡ ರಸ್ತೆಯಲ್ಲಿ ಬೈಕ್ನಲ್ಲಿ ಹೊರಟಿದ್ದರು. ಮಾರ್ಗಮಧ್ಯೆ ಕೈ ಮಾಡಿದ್ದ ಆರೋಪಿ, ಬೈಕ್ನಲ್ಲಿ ಡ್ರಾಪ್ ಕೇಳಿದ್ದ. ಅದಕ್ಕೆ ಒಪ್ಪಿದ್ದ ದೂರುದಾರ, ಆತನನ್ನು ಹತ್ತಿಸಿಕೊಂಡು ಮುಂದಕ್ಕೆ ಹೊರಟಿದ್ದರು. 1 ಕಿ.ಮೀ.ನಷ್ಟು ದೂರಕ್ಕೆ ಹೋಗುತ್ತಿದ್ದಂತೆ ಆರೋಪಿ ಬೈಕ್ ನಿಲ್ಲಿಸಿದ್ದ. ಅಲ್ಲಿಯೇ ಇಳಿಯುವುದಾಗಿ ಹೇಳಿದ್ದ’ ಎಂದು ತಿಳಿಸಿದರು.

‘ಬೈಕ್ನಿಂದ ಇಳಿಯುವ ಸಂದರ್ಭದಲ್ಲಿ ದೂರುದಾರರ ಕೊರಳಿಗೆ ಕೆಂಪು ಬಣ್ಣದ ಔಷಧಿಯೊಂದನ್ನು ಹಚ್ಚಿದ್ದ ಆರೋಪಿ, ಗಮನ ಬೇರೆಡೆ ಸೆಳೆದು ₹ 1.50 ಲಕ್ಷ ಮೌಲ್ಯದ ಚಿನ್ನದ ಸರವನ್ನು ಕತ್ತರಿಸಿಟ್ಟುಕೊಂಡಿದ್ದ. ನಂತರ, ಸ್ಥಳದಿಂದ ಹೊರಟು ಹೋಗಿದ್ದ. ಕೆಲ ಹೊತ್ತಿನ ನಂತರ, ದೂರುದಾರರಿಗೆ ಕಳ್ಳತನ ವಿಷಯ ಗೊತ್ತಾಗಿದೆ. ಬಳಿಕವೇ ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-22-1981190754

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.