ಪಿಯು: ಶೇ 1.1 ಫಲಿತಾಂಶ ಏರಿಕೆ

ಶನಿವಾರ, ಏಪ್ರಿಲ್ 20, 2019
29 °C
ಹಾವೇರಿಗೆ 16ನೇ ಸ್ಥಾನ: ಹೆಚ್ಚಿದ ಫಲಿತಾಂಶ–ಕುಸಿದ ಸ್ಥಾನ

ಪಿಯು: ಶೇ 1.1 ಫಲಿತಾಂಶ ಏರಿಕೆ

Published:
Updated:

ಹಾವೇರಿ: ದ್ವಿತೀಯ ಪಿಯು ಫಲಿತಾಂಶ ಪ್ರಕಟಗೊಂಡಿದ್ದು, ಜಿಲ್ಲೆಯು ಕಳೆದ ಬಾರಿಗಿಂತ ಶೇ 1.1 ಹೆಚ್ಚಿನ ಫಲಿತಾಂಶ ಪಡೆದಿದ್ದು, ಆದರೆ, 1 ಸ್ಥಾನ ಕುಸಿತ ಕಂಡಿದೆ.

ಕಳೆದ ಬಾರಿ ಶೇ 67.3 ಫಲಿತಾಂಶ ಪಡೆದು, 15ನೇ ಸ್ಥಾನ ಪಡೆದಿದ್ದರೆ, ಈ ಬಾರಿ ಶೇ 68.4 ಸ್ಥಾನ ಪಡೆದು 16ನೇ ಸ್ಥಾನ ಪಡೆದಿದೆ.
ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ಮಾ.1ರಿಂದ 18ರ ತನಕ ನಡೆದಿದ್ದು, ಜಿಲ್ಲೆಯ 23 ಕೇಂದ್ರಗಳಲ್ಲಿ 13,724 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 11,654 ಸಾಮಾನ್ಯ (ರೆಗ್ಯೂಲರ್) ವಿದ್ಯಾರ್ಥಿಗಳು, 1,481 ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ 589 ಖಾಸಗಿ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ ಕಲಾ ವಿಭಾಗದಲ್ಲಿ 6,233, ವಾಣಿಜ್ಯದಲ್ಲಿ 4,735, ವಿಜ್ಞಾನದಲ್ಲಿ 2,756 ವಿಭಾಗದ ವಿದ್ಯಾರ್ಥಿಗಳಿದ್ದರು.

ಜಿಲ್ಲೆಯು 2014–15ರಲ್ಲಿ 71. 58 ಫಲಿತಾಂಶ ಪಡೆದಿತ್ತು, ಆ ಬಳಿಕದ ಅತಿ ಹೆಚ್ಚಿನ ಫಲಿತಾಂಶ ಇದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !