ಹಾನಗಲ್: ಬಾಳೂರು ಅಡವಿಸ್ವಾಮಿಮಠದ 12ನೇ ಪೀಠಾಧಿಕಾರಿಯಾಗಿ ಶ್ರೀಗುರುಪ್ರಸಾದ ದೇವರ ನಿರಂಜನ ಚರ ಪಟ್ಟಾಧಿಕಾರ ಹಾಗೂ ಅಡವಿ ಮಹಾಸ್ವಾಮಿಗಳ ಜಾತ್ರೆ ಮಹೋತ್ಸವ ಏ.23ರಿಂದ 30ರ ವರೆಗೆ ನಡೆಯಲಿದೆ’ ಎಂದು ಅಕ್ಕಿಆಲೂರು ಚನ್ನವೀರೇಶ್ವರ ವಿರಕ್ತಮಠದ ಶಿವಬಸವ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಬಾಳೂರು ಅಡವಿಸ್ವಾಮಿ ಮಠದಲ್ಲಿ ಮಂಗಳವಾರ ಕಾರ್ಯಕ್ರಮದ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ‘ಏ.23 ರಂದು ಹುಬ್ಬಳ್ಳಿ ಮೂರುಸಾವಿರಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ, ಶಿವಮೊಗ್ಗ ಜಿಲ್ಲೆ ಆನಂದಪುರ ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಂಜೆ 7ಕ್ಕೆ ಅಧ್ಯಾತ್ಮ ಪ್ರವಚನ ಆರಂಭವಾಗುವುದು. ಚನ್ನರುದ್ರಮುನಿ ಶಿವಾಚಾರ್ಯರು ಪ್ರವಚನ ನೀಡುವರು ಎಂದು ತಿಳಿಸಿದರು.

ಏ.27ರಂದು ಬೆಳಿಗ್ಗೆ 8ಕ್ಕೆ ಲಿಂಗದೀಕ್ಷೆ ಅಯ್ಯಾಚಾರ ಆಚರಣೆ ಕೂಡಲದ ಗುರುನಂಜೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿದೆ. ಏ.29ರಂದು ಬೆಳಿಗ್ಗೆ 8ಕ್ಕೆ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ಸಂಜೆ 6ಕ್ಕೆ ಪ್ರವಚನ ಮಂಗಲ ನಡೆಯಲಿದ್ದು, ಶಿರಹಟ್ಟಿಯ ಫಕ್ಕೀರ ದಿಂಗಾಲೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಪಟ್ಟಾಧಿಕಾರ ಮಹೋತ್ಸವ ಸಮಿತಿ ಅಧ್ಯಕ್ಷ ರಾಜಣ್ಣ ಅಂಕಸಖಾನಿ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು ಎಂದು ತಿಳಿಸಿದರು.

ಏ.30ರಂದು ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಗುರುಪ್ರಸಾದ ದೇವರಿಗೆ ಷಟಸ್ಥಲ ಭ್ರಹ್ಮೋಪದೇಶ, ಚಿನ್ಮಯಾನುಗ್ರಹ ಹಾಗೂ ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಪ್ರಸಾದಿ ಸ್ಥಳ ದೀಕ್ಷೆ ನೀಡುವರು. ಬೆಳಿಗ್ಗೆ 10ಕ್ಕೆ ಶೂನ್ಯ ಸಂಹಾಸನಾರೋಹಣ, ಸಮಾಜ ಸೇವಾ ದೀಕ್ಷೆ ನಡೆಯಲಿದ್ದು, ಸವಣೂರಿನ ಕುಮಾರ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಸಂಜೆ 4ಕ್ಕೆ ಅಡವಿಸ್ವಾಮಿಗಳ ಮಹಾರಥೋತ್ಸವ ಸಲಕ ವಾದ್ಯ ವೈಭವಗಳಿಂದ ನಡೆಯುವುದು ಎಂದು ತಿಳಿಸಿದರು.

ಸವಣೂರು ಬಾಳೂರು ಮಠದ ಪೀಠಾಧಿಪತಿ ಕುಮಾರ ಸ್ವಾಮೀಜಿ, ಪಟ್ಟಾಧಿಕಾರ ಸಮಿತಿ ಅಧ್ಯಕ್ಷ ರಾಜಣ್ಣ ಅಂಕಸಖಾನಿ, ಕಾರ್ಯದರ್ಶಿ ಶಿವಕುಮಾರ ದೇಶಮುಖ, ಪದಾಧಿಕಾರಿಗಳಾದ ರಾಜಪ್ಪ ಮಳಗಿ, ಸದಾನಂದ ಮೆಳ್ಳಳ್ಳಿ, ದೇವೇಂದ್ರಪ್ಪ ಬಕ್ಕಣ್ಣನವರ, ಉದಯ ವಿರುಪಣ್ಣನವರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-22-991674891

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.