ಹಾವೇರಿ: ವಿಶ್ವಗುರು ಬಸವಣ್ಣನವರ 893ನೇ ಜಯಂತ್ಯುತ್ಸವ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಇದರ ಪ್ರಯುಕ್ತ ‘ಬಸವ ಸಂದೇಶ ಯಾತ್ರೆ’ಗೆ ಮಂಗಳವಾರ ಚಾಲನೆ ನೀಡಲಾಯಿತು.

ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಹುಕ್ಕೇರಿಮಠದ ಮೂಲಕ ಆರಂಭವಾದ ಬಸವ ಸಂದೇಶ ಯಾತ್ರೆಗೆ ಪೂಜೆ ಸಲ್ಲಿಸುವ ಮೂಲಕ ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿಯವರು ಚಾಲನೆ ನೀಡಿದರು.

ನಂತರ ಮಾತನಾಡಿದ ಸ್ವಾಮೀಜಿ, ‘ಮನೆ ಮನೆಗೂ ಬಸವ ತತ್ವಗಳನ್ನು ತಲುಪಿಸಲು ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಬಸವಣ್ಣನವರ ಭಕ್ತರು ಹಾಗೂ ಶರಣರು, ಯಾತ್ರೆಯ ಮೂಲಕ ನಗರದ ಬೀದಿಗಳಲ್ಲಿ ಹಾಗೂ ಓಣಿಗಳಲ್ಲಿ ವಚನಗಳನ್ನು ಹೇಳುತ್ತ ಸಾಗಬೇಕು. ಪ್ರತಿಯೊಬ್ಬರಿಗೂ ಬಸವಣ್ಣನವರ ತತ್ವಗಳನ್ನು ಸಾರಿ ಹೇಳಬೇಕು’ ಎಂದರು.

‘ಸಮಾಜದಲ್ಲಿ ಬಸವ ಸಂದೇಶ ಹಾಗೂ ಬಸವಣ್ಣನವರ ಹಾಕಿಕೊಟ್ಟ ತತ್ವಾದರ್ಶಗಳನ್ನು ಬಿತ್ತುವ ಮೂಲಕ ಸಮಾಜದ ಒಳಿತಿಗಾಗಿ ಶ್ರಮಿಸಬೇಕು. ಇಂತಹ ಕಾರ್ಯಕ್ರಮಗಳಿಂದ ಬಸವಣ್ಣನವರ ಹಾಗೂ ಶರಣರ ವಿಚಾರಧಾರೆಗಳು ಜನರಿಗೆ ಮುಟ್ಟುತ್ತಿವೆ. ಶರಣರ ವಚನಗಳು ದಾರಿ ದೀಪವಾಗಿವೆ. ಇಂದಿನ ಸಮಸ್ಯೆಗಳಿಗೆ ಪರಿಹಾರ ಮಾರ್ಗಗಳೂ ಆಗಿವೆ’ ಎಂದು ಹೇಳಿದರು.

ಬಸವ ಬಳಗದ ಅಧ್ಯಕ್ಷ ವಿ.ಜಿ. ಯಳಗೇರಿ, ಮಹೇಶ್ ಚಿನ್ನಿಕಟ್ಟಿ, ಮಹಾಂತಣ್ಣ ಹಲಗಣ್ಣನವರ, ಗಂಗಣ್ಣ ಮಾಸೂರ, ಮುರಿಗೆಪ್ಪ ಕಡೆಕೊಪ್ಪ, ಉಳಿವೆಪ್ಪ ಪಂಪಣ್ಣನವರ, ಕೆ.ಎಂ. ಬಿಜಾಪುರ, ಗಿರೀಶ ಶೆಟ್ಟರ, ಸಿದ್ದಲಿಂಗಪ್ಪ ಮಹಾರಾಜಪೇಟೆ, ಶಿವಾನಂದ ಹೊಸಮನಿ, ಶಿವಾನಂದ ಅಂಗಡಿ, ಮಾಲತೇಶ ಕರೆಮಣ್ಣನವರ, ಹನುಮಂತಪ್ಪ ಮಡಿವಾಳರ, ಶಿವಯೋಗಿ ಬೆನ್ನೂರು, ಶಿವರಾಜ ಕಾಯಕದ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-22-708978841

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.