ಹಾವೇರಿ: ಇಲ್ಲಿಯ ಹಾನಗಲ್ ರಸ್ತೆಯಲ್ಲಿರುವ ವೀರಭದ್ರೇಶ್ವರ ಎಲೆಕ್ಟ್ರಾನಿಕ್ಸ್ ಅಂಗಡಿ ಎದುರು ನಿಲ್ಲಿಸಿದ್ದ ಬೈಕ್ನ ಬ್ಯಾಗ್ನಲ್ಲಿದ್ದ ₹ 3 ಲಕ್ಷ ನಗದು ಕಳ್ಳತನವಾಗಿದ್ದು, ಈ ಬಗ್ಗೆ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಏಪ್ರಿಲ್ 16ರಂದು ನಡೆದಿರುವ ಕಳ್ಳತನ ಬಗ್ಗೆ ಹಿರೇಲಿಂಗದಹಳ್ಳಿ ನಿವಾಸಿ ಕುಮಾರ ಸಿದ್ದಪ್ಪ ಕಾಶಂಬಿ ಅವರು ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ದೂರುದಾರರು ಕೆನರಾ ಬ್ಯಾಂಕ್ಗೆ ಹೋಗಿ ಚೆಕ್ ಮೂಲಕ ₹ 3 ಲಕ್ಷ ನಗದು ಪಡೆದುಕೊಂಡಿದ್ದರು. ಅದನ್ನು ತಮ್ಮ ಬೈಕ್ನ ಬ್ಯಾಗ್ನಲ್ಲಿ ಇಟ್ಟುಕೊಂಡಿದ್ದರು. ವೀರಭದ್ರೇಶ್ವರ ಎಲೆಕ್ಟ್ರಾನಿಕ್ಸ್ ಅಂಗಡಿ ಎದುರು ಹೋಗಿ ಬೈಕ್ ನಿಲ್ಲಿಸಿ, ಅಂಗಡಿಗೆ ಹೋಗಿದ್ದರು. ಅವರು ವಾಪಸು ಬರುವಷ್ಟರಲ್ಲಿ ನಗದು ಕಳ್ಳತನವಾಗಿದೆ. ಆರೋಪಿಗಳು ಹಿಂಬಾಲಿಸಿ ಕೃತ್ಯ ಎಸಗಿರುವ ಅನುಮಾನವಿದೆ’ ಎಂದು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-22-1582775362

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.