ಹಾವೇರಿ: ಜಿಲ್ಲೆಯ ಬಂಕಾಪುರ– ಹಾನಗಲ್ ರಸ್ತೆಯಲ್ಲಿರುವ ಮಾಸನಕಟ್ಟಿ ಸಮೀಪದಲ್ಲಿ ಮಂಗಳವಾರ ಮಧ್ಯಾಹ್ನ ಕಾರೊಂದು ಡಿಕ್ಕಿ ಹೊಡೆದು ಕೃಷ್ಣಮೃಗ ಮೃತಪಟ್ಟಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ಹಾನಗಲ್ ತಾಲ್ಲೂಕಿನ ಮಾಸನಕಟ್ಟಿ ಹೊರವಲಯದ ಕೆರೆಯ ಸಮೀಪದಲ್ಲಿಯೇ ರಸ್ತೆ ದಾಟುತ್ತಿದ್ದ ಕೃಷ್ಣಮೃಗಕ್ಕೆ ಕಾರೊಂದು ಡಿಕ್ಕಿ ಹೊಡೆದಿತ್ತು. ಆಕಸ್ಮಿಕವಾಗಿ ನಡೆದ ಈ ಅವಘಡದಿಂದಾಗಿ ಕೃಷ್ಣಮೃಗ ಸ್ಥಳದಲ್ಲೇ ಮೃತಪಟ್ಟಿದೆ. ಕಾರಿನ ಮುಂಭಾಗದ ಗಾಜು ಸಹ ಒಡೆದಿದೆ’ ಎಂದು ಹಾನಗಲ್ ಆರ್ಎಫ್ಒ ಗಣೇಶ ಶೆಟ್ಟರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹುಬ್ಬಳ್ಳಿಯ ನಿವಾಸಿಗಳು, ಹಾನಗಲ್ನಲ್ಲಿದ್ದ ಮದುವೆಯಲ್ಲಿ ಭಾಗವಹಿಸಲು ಕಾರಿನಲ್ಲಿ (ಕೆಎ 63 ಎನ್ 8313) ಹೊರಟಿದ್ದರು. ಅತೀ ವೇಗದಲ್ಲಿ ಜಿಗಿಯುತ್ತ ರಸ್ತೆ ದಾಟುತ್ತಿದ್ದ ಕೃಷ್ಣಮೃಗ, ಕಾರಿನ ಮುಂಭಾಗಕ್ಕೆ ಅಪ್ಪಳಿಸಿತ್ತು. ಡಿಕ್ಕಿಯ ರಭಸದಿಂದಾಗಿ ಬೆನ್ನು ಹಾಗೂ ಕತ್ತು ಭಾಗದಲ್ಲಿ ಗಾಯವಾಗಿ, ತೀವ್ರ ರಕ್ತಸ್ರಾವವಾಗಿತ್ತು. ಹೀಗಾಗಿ, ಕೃಷ್ಣಮೃಗವೂ ತೀರಿಕೊಂಡಿದೆ’ ಎಂದರು.

‘ಘಟನೆಯು ಆಕಸ್ಮಿಕವಾಗಿ ನಡೆದಿದೆ. ಹೀಗಾಗಿ, ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ. ಮಾಹಿತಿ ಬರುತ್ತಿದ್ದಂತೆ ಸ್ಥಳಕ್ಕೆ ಹೋಗಿ, ಕೃಷ್ಣಮೃಗದ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಅವಘಡದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ನೀಡಲಾಗುವುದು’ ಎಂದು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-22-557684020

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.