ಹಿರೇಕೆರೂರ: ‘ಅಪಘಾತದಿಂದ ಹಾಗೂ ಕಾಯಿಲೆಯಿಂದ ಪ್ರಾಣಾಪಾಯದಲ್ಲಿ ಇರುವವರ ಜೀವ ಉಳಿಸಲು ರಕ್ತದಾನ ಮಹತ್ತರ ಪಾತ್ರ ವಹಿಸುತ್ತದೆ. ರಕ್ತದಾನ ಮಾಡಲು ಜನರು ಮುಂದೆ ಬರಬೇಕು’ ಎಂದು ಹಾವೇರಿ ಜಿಲ್ಲಾ ರಕ್ತ ನಿಧಿಯ ವೈದ್ಯಾಧಿಕಾರಿ ಡಾ.ಬಸವರಾಜ ತಳವಾರ ಹೇಳಿದರು.

ತಾಲ್ಲೂಕಿನ ಚನ್ನಳ್ಳಿ ತಾಂಡದಲ್ಲಿ ತುಳಜಾಭವಾನಿ ಭವಾನಿ ದೇವಿಯ 5ನೇ ವರ್ಷದ ಪ್ರತಿಷ್ಠಾಪನೆ ಮತ್ತು ಅನ್ನ ಸಂತರ್ಪಣೆಯ ಪ್ರಯುಕ್ತ ಈಚೆಗೆ ಹಾವೇರಿ ಜಿಲ್ಲಾ ರಕ್ತ ನಿಧಿಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಮತ್ತು ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಸಂತ ಸೇವಾಲಾಲ್ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಹುತ್ತೇಶ ಲಮಾಣಿ, ‘ಆರೋಗ್ಯ ಕ್ಷೇತ್ರದಲ್ಲಿ ಅಗಾಧವಾದ ಬದಲಾವಣೆಗಳಾಗಿದ್ದರೂ ಸಾಕಷ್ಟು ಜನರಲ್ಲಿ ರಕ್ತದಾನ ಕುರಿತು ಇನ್ನೂ ಮೂಢನಂಬಿಕೆ, ತಪ್ಪು ಕಲ್ಪನೆಗಳಿವೆ’ ಎಂದರು.

ಶಿಬಿರದಲ್ಲಿ 30 ಜನ ರಕ್ತದಾನ ಮಾಡಿದರು. 2 ಮಹಿಳಾ ರಕ್ತದಾನಿ ಗಳು ರಕ್ತದಾನ ಮಾಡುವ ಮೂಲಕ ಮಹಿಳೆಯರಿಗೆ ಮಾದರಿಯಾದರು. ರಕ್ತದಾನಿಗಳಿಗೆ ಜಿಲ್ಲಾ ರಕ್ತ ನಿಧಿಯಿಂದ ಪ್ರಮಾಣ ಪತ್ರ ವಿತರಿಸಲಾಯಿತು.

ಶಿಬಿರದಲ್ಲಿ ‘ಏಡ್ಸ್ ಭಯ ಬೇಡ - ಎಚ್ಚರಿಕೆ ಇರಲಿ’ ಎಂಬ ವಿಷಯದ ಕುರಿತು ಮತ್ತು ರಕ್ತದಾನದ ಬಗ್ಗೆ ತಾಲ್ಲೂಕು ಆಸ್ಪತ್ರೆಯ ಆಪ್ತಸಮಾಲೋಚಕ ಜಯಪ್ಪ ಬಿದರಿ ಉಪನ್ಯಾಸ ನೀಡಿದರು. ಜಿಲ್ಲಾ ರಕ್ತ ನಿಧಿಯ ಸಿಬ್ಬಂದ್ದಿ ಸಿದ್ದು ಹಿರಿಗಣ್ಣವರ, ರೇವಣಸಿದ್ದಪ್ಪ ತೆಂಬದ್ , ಶ್ರೀನಿವಾಸ್ ,ಶೇಖಪ್ಪ ಥಾ ಲಮಾಣಿ,ತಿಪ್ಪವ್ವ ಲಮಾಣಿ, ಚಂಕಾ ಲಮಾಣಿ , ಭರತ್ ಮರಡಿ, ನಂದೇಪ್ಪ ಮಂಗ್ಲೇಪ್ಪ ಲಮಾಣಿ, ಸುನಿಲ್ ಲಮಾಣಿ, ಶೇಖಪ್ಪ ಲಮಾಣಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-22-1863147252

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.