ಹಾವೇರಿ: ಇಲ್ಲಿಯ ಕೇಂದ್ರ ನಿಲ್ದಾಣದಲ್ಲಿ ಪ್ಲಾಟ್ಫಾರ್ಮ್ಗೆ ಬಸ್ ನುಗ್ಗಿ ಅವಘಡ ಸಂಭವಿಸಿದ್ದು, ಹಜರತ್ ಅಲಿ ಇಸ್ಮಾಯಿಲ್ ರಾಯಚೂರು ಎಂಬ ಎರಡೂವರೆ ವರ್ಷದ ಮಗು ಮೃತಪಟ್ಟಿದೆ.

‘ಬುಧವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ. ತೀವ್ರ ಗಾಯಗೊಂಡಿದ್ದ ಮಗು ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ಮೃತಪಟ್ಟಿದೆ. ಮೂವರು ಗಾಯಗೊಂಡಿದ್ದು, ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಹಾವೇರಿ ಸಂಚಾರ ಠಾಣೆ ಪೊಲೀಸರು ತಿಳಿಸಿದರು.

‘ಸವಣೂರಿನ ಹಜರತ್ ಅಲಿ ಹಾಗೂ ಪೋಷಕರು, ಹಾವೇರಿಗೆ ಬಂದಿದ್ದರು. ವಾಪಸು ತಮ್ಮೂರಿಗೆ ಹೋಗಲು ಬಸ್ಗಾಗಿ ಕಾಯುತ್ತ ನಿಲ್ದಾಣದ ಪ್ಲಾಟ್ಫಾರ್ಮ್ನಲ್ಲಿ ಕಾಯುತ್ತಿದ್ದರು. ಇದೇ ಸಂದರ್ಭದಲ್ಲಿ ಹಾವೇರಿ–ಲಕ್ಷ್ಮೇಶ್ವರ ಮಾರ್ಗದ ಬಸ್, ಅತೀ ವೇಗದಲ್ಲಿ ಪ್ಲಾಟ್ಫಾರ್ಮ್ಗೆ ನುಗ್ಗಿತ್ತು’ ಎಂದರು.

‘ಹಜರತ್ ಅಲಿ ಸೇರಿದಂತೆ ಬಂಕಾಪುರದ ವಾಸುದೇವ ಗುರುನಾಥಪ್ಪ ಉತಳೇಕರ್ (44), ಅವರ ಮಗಳು ಹರ್ಷಾ ಉತಳೇಕರ್ (6), ಕಾವ್ಯಾಂಜಲಿ ವಿಷ್ಣು ಉತಳೇಕರ್ (39) ಹಾಗೂ ಸವಣೂರಿನ ಆರ್ಬಜಖಾನ್ ಸೌದಾಗರ (13) ಅವರಿಗೂ ಬಸ್ ಡಿಕ್ಕಿ ಹೊಡೆದಿದೆ. ಅಪಘಾತಕ್ಕೆ ಕಾರಣವಾದ ಚಾಲಕ ಕೋಲಾರ ಜಿಲ್ಲೆಯ ಎನ್. ಕೊಟ್ಟೂರು ಗ್ರಾಮದ ಮಂಜುನಾಥ್ ಆರ್. ವಿರುದ್ಧ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.