ಹಾವೇರಿ: ಅಕ್ಕಿಆಲೂರಿನ ಮನೆಗಳಿಗೆ ಪ್ಲೇಟ್ ಅಂಟಿಸಲು ಅಕ್ರಮವಾಗಿ ತಲಾ ₹ 100 ವಸೂಲಿ ಮಾಡಲು ಸಹಕರಿಸಿದ್ದ ಆರೋಪದಡಿ ಪಿಡಿಒ ಅಮಾನತಾಗಿದ್ದ ಪ್ರಕರಣ ಮಾಸುವ ಮುನ್ನವೇ, ಈಗ ಅದೇ ಪ್ಲೇಟ್ ಹೆಸರಿನಲ್ಲಿ ಜನರಿಂದ ₹ 100 ವಸೂಲಿ ಮಾಡಲು ಬ್ಯಾಡಗಿ ಪುರಸಭೆ ಒಪ್ಪಿಗೆ ನೀಡಿರುವುದು ಅನುಮಾನಕ್ಕೆ ಕಾರಣವಾಗಿದೆ.

‘ಬೆಂಗಳೂರಿನ ಅಖಿಲ ಕರ್ನಾಟಕ ಗ್ರಾಮ ಪಂಚಾಯಿತಿ ಹಿತರಕ್ಷಣಾ ಸಮಿತಿಯವರು ಆಸ್ತಿ ನಂಬರ್ ಪ್ಲೇಟ್ ಅಳವಡಿಸಲಿದ್ದಾರೆ. ಆಸ್ತಿ ಮಾಲೀಕರು, ಸಮಿತಿಯವರಿಗೆ ತಲಾ ₹ 100 ನೀಡಿ ಸಹಕರಿಸಬೇಕು’ ಎಂದು ಉಪವಿಭಾಗಾಧಿಕಾರಿಯೂ ಆಗಿರುವ ಬ್ಯಾಡಗಿ ಪುರಸಭೆಯ ಆಡಳಿತಾಧಿಕಾರಿ ಕಲ್ಯಾಣಿ ಕಾಂಬಳೆ ಹಾಗೂ ಮುಖ್ಯಾಧಿಕಾರಿ ವಿನಯಕುಮಾರ ಅವರು ಸೋಮವಾರ ಜಂಟಿ ಪ್ರಕಟಣೆ ಹೊರಡಿಸಿದ್ದಾರೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹೊರಡಿಸಿದ್ದ ಆದೇಶ ಉಲ್ಲಂಘಿಸಿ ಸಮಿತಿಯಿಂದ ಅಕ್ಕಿಆಲೂರಿನ 64 ಮನೆಗಳಿಗೆ ಪ್ಲೇಟ್ ಅಳವಡಿಸಿ ತಲಾ ₹ 100 ಸಂಗ್ರಹಿಸಲಾಗಿತ್ತು. ಇದೇ ಪ್ರಕರಣದಲ್ಲಿ ಪಿಡಿಒ ಅಮಾನತಾಗಿತ್ತು. ಅದೇ ಸಮಿತಿಗೆ ಪ್ಲೇಟ್ ಅಳವಡಿಸಲು ಆಡಳಿತಾಧಿಕಾರಿ ಕಲ್ಯಾಣಿ ಕಾಂಬಳೆ ಹಾಗೂ ಮುಖ್ಯಾಧಿಕಾರಿ ವಿನಯಕುಮಾರ ಒಪ್ಪಿಗೆ ನೀಡಿರುವುದಕ್ಕೆ ಜನರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ.

‘ಈ ವಿಷಯದಲ್ಲಿ ಪಿಡಿಒ ಅಮಾನತಾದ ಪ್ರಕರಣ ನನ್ನ ಗಮನದಲ್ಲಿಲ್ಲ’ ಎಂದು ಮುಖ್ಯಾಧಿಕಾರಿ ವಿನಯ್ಕುಮಾರ್ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-22-717301223

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.