ಹಾವೇರಿ: ಜಿಲ್ಲೆಯ ಬ್ಯಾಡಗಿಯಲ್ಲಿರುವ ಶಿಥಲೀಕರಣ ಗೋದಾಮಿನಲ್ಲಿ ರೈತರೊಬ್ಬರು ಇರಿಸಿದ್ದ ₹ 55 ಲಕ್ಷ ಮೌಲ್ಯದ ಮೆಣಸಿನಕಾಯಿಯನ್ನು ದಲ್ಲಾಳಿಯೊಬ್ಬರು ಅಕ್ರಮವಾಗಿ ಮಾರಾಟ ಮಾಡಿದ್ದು, ಇದರಿಂದ ಕಂಗಾಲಾಗಿರುವ ರೈತ ಕುಟುಂಬದವರು ಠಾಣೆ ಮೆಟ್ಟಿಲೇರಿದ್ದಾರೆ.

ಮೆಣಸಿನಕಾಯಿ ಬೆಳೆದಿದ್ದ ಬಳ್ಳಾರಿ ಜಿಲ್ಲೆಯ ಶಿರಗುಪ್ಪ ತಾಲ್ಲೂಕಿನ ಬಂಡ್ರಾಳ ಗ್ರಾಮದ ಕೆ. ಮಹದೇವ ಅವರು ತಮಗಾದ ವಂಚನೆ ಬಗ್ಗೆ ಬ್ಯಾಡಗಿ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಯಾದ ದಲ್ಲಾಳಿ ನಾಗಪ್ಪ ಸಿದ್ರಾಮಪ್ಪ ಹಡಗಲಿ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.

‘ವಂಚನೆ ಪ್ರಕರಣದಲ್ಲಿ ಪೊಲೀಸರಿಂದಲೂ ನಮಗೆ ಅನ್ಯಾಯವಾಗುತ್ತಿದೆ’ ಎಂದು ದೂರಿರುವ ರೈತ ಮಹದೇವಪ್ಪ, ‘ನಮ್ಮಂಥ ಬಡ ರೈತರಿಗೆ ಪೊಲೀಸರೂ ಸಹಕಾರ ನೀಡುತ್ತಿಲ್ಲ. ದಲ್ಲಾಳಿ ಪರವಾಗಿಯೇ ಮಾತನಾಡುತ್ತಿದ್ದಾರೆ. ಎರಡು ತಿಂಗಳ ಹಿಂದೆ ದೂರು ನೀಡಿದರೂ ಈಗ ಎಫ್ಐಆರ್ ಮಾಡಿಕೊಂಡಿದ್ದಾರೆ. ಜೊತೆಗೆ, ನಮ್ಮ ಮೇಲೆಯೇ ದೂರು ದಾಖಲಿಸುವ ಬೆದರಿಕೆಯೊಡ್ಡುತ್ತಿದ್ದಾರೆ’ ಎಂದು ಆರೋಪಿಸಿದರು.

2023ರ ಮೆಣಸಿನಕಾಯಿ: ‘ನಮ್ಮ ಜಮೀನಿನಲ್ಲಿ 2023ರಲ್ಲಿ ಮೆಣಸಿನಕಾಯಿ ಬೆಳೆದಿದ್ದೆ. ಇಳುವರಿಯೂ ಚೆನ್ನಾಗಿತ್ತು. 2023ರ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಬ್ಯಾಡಗಿ ಮಾರುಕಟ್ಟೆಗೆ ಮೆಣಸಿನಕಾಯಿ ತಂದಿದ್ದೆ. ಅದನ್ನು ಆರೋಪಿ ನಾಗಪ್ಪ ಹಡಗಲಿ ಅವರಿಗೆ ಸೇರಿದ್ದ ತಿಪ್ಪೇಸ್ವಾಮಿ ಕಮಿಷನ್ ಏಜೆನ್ಸಿಅಂಗಡಿಗೆ ನೀಡಿದ್ದೆ’ ಎಂದು ರೈತ ಮಹದೇವಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸದ್ಯ ಉತ್ತಮ ದರವಿಲ್ಲವೆಂದು ಹೇಳಿದ್ದ ನಾಗಪ್ಪ, ಮೆಣಸಿನಕಾಯಿಯನ್ನು ಶಿಥಲೀಕರಣ ಗೋದಾಮಿನಲ್ಲಿ ಇರಿಸುವಂತೆ ತಿಳಿಸಿದ್ದ. ತನಗೆ ಪರಿಚಯವಿದ್ದ ಎಂಟಿಸಿ ಶಿಥಲೀಕರಣ ಗೋದಾಮಿನಲ್ಲಿ ತಲಾ 35 ಕೆ.ಜಿ. ತೂಕದ 363 ಚೀಲಗಳನ್ನು ಇರಿಸಿದ್ದ. ರಶೀದಿಯಲ್ಲಿ ನನ್ನ ಹೆಸರು ಬರೆಸಿದ್ದ ನಾಗಪ್ಪ, ವಿಳಾಸದಲ್ಲಿ ತನ್ನ ವಿವರ ದಾಖಲಿಸಿದ್ದ. ಮೂಲ ರಶೀದಿಯನ್ನು ನನಗೆ ಕೊಡದೇ, ತನ್ನ ಬಳಿಯೇ ಇಟ್ಟುಕೊಂಡಿದ್ದ. ನನಗೆ ಜೆರಾಕ್ಸ್ ಪ್ರತಿ ನೀಡಿದ್ದ’ ಎಂದು ಹೇಳಿದರು.

‘ಮೆಣಸಿನಕಾಯಿಗೆ ಉತ್ತಮ ದರ ಸಿಗಬಹುದೆಂದು 2023ರಿಂದಲೂ ಪ್ರತಿ ವರ್ಷವೂ ಮೂರ್ನಾಲ್ಕು ಬಾರಿ ಬ್ಯಾಡಗಿಗೆ ಬಂದು ವಾಪಸು ಹೋಗುತ್ತಿದ್ದೆ. ದರ ಕಡಿಮೆ ಇದ್ದಿದ್ದರಿಂದ, ಮೆಣಸಿನಕಾಯಿ ಮಾರಲು ಒಪ್ಪಿಗೆ ನೀಡಿರಲಿಲ್ಲ. ಇದರ ನಡುವೆಯೇ, ಜನವರಿ 16ರಂದು ಆರೋಪಿ ನಾಗಪ್ಪನೇ ಗೋದಾಮಿನಿಂದ ಮೆಣಸಿನಕಾಯಿಗಳನ್ನು ಬಿಡಿಸಿಕೊಂಡು ಅಕ್ರಮವಾಗಿ ಮಾರಾಟ ಮಾಡಿದ್ದಾನೆ. ಈ ಬಗ್ಗೆ ನನಗೆ ಯಾವುದೇ ಮಾಹಿತಿ ನೀಡಿರಲಿಲ್ಲ’ ಎಂದು ತಿಳಿಸಿದರು.

‘ಎರಡು ತಿಂಗಳ ಹಿಂದೆಯಷ್ಟೇ ಬ್ಯಾಡಗಿಗೆ ಬಂದಾಗ ವಿಷಯ ಗೊತ್ತಾಗಿತ್ತು. ₹ 55 ಲಕ್ಷ ಮೌಲ್ಯದ ಮೆಣಸಿನಕಾಯಿಯನ್ನು ಅಕ್ರಮವಾಗಿ ಮಾರಾಟ ಮಾಡಿದ್ದನ್ನು ಪ್ರಶ್ನಿಸಿದ್ದೆ. ನನ್ನನ್ನೇ ಬೆದರಿಸಿದ್ದ ನಾಗಪ್ಪ, ‘ಮಾರಿಕೊಂಡಿದ್ದೇನೆ. ಏನು ಬೇಕಾದರೂ ಮಾಡಿಕೊ. ಯಾರಿಗಾದರೂ ದೂರು ಕೊಡು’ ಎಂದಿದ್ದ. ಆತನ ವಿರುದ್ಧ ಬ್ಯಾಡಗಿ ಠಾಣೆಗೆ ದೂರು ನೀಡಿದ್ದೆ. ಆರಂಭದಲ್ಲಿ ದೂರು ದಾಖಲಿಸಿಕೊಳ್ಳಲಿಲ್ಲ. ನಮ್ಮನ್ನೇ ಅನುಮಾನದಿಂದ ನೋಡಿದರು. ಈಗ ಸಮಾಜದ ಮುಖಂಡರು ಹೇಳಿದ್ದಕ್ಕೆ, ದೂರು ದಾಖಲಿಸಿಕೊಂಡಿದ್ದಾರೆ’ ಎಂದು ಹೇಳಿದರು.

ಪರವಾನಗಿ ಅಮಾನತು: ‘ಆರೋಪಿ ನಾಗಪ್ಪ ಹಡಗಲಿ ಹಲವು ಬಾರಿ ರೈತರನ್ನು ವಂಚಿಸಿರುವ ಮಾಹಿತಿ ಇದೆ. ಅದೇ ಕಾರಣಕ್ಕೆ ಆತನ ದಲ್ಲಾಳಿ ಪರವಾನಗಿಯನ್ನು ರದ್ದುಪಡಿಸಲಾಗಿದೆ. ಅಷ್ಟಾದರೂ ಆತ, ಬೇರೆಯವರ ಹೆಸರಿನಲ್ಲಿ ಅಕ್ರಮವಾಗಿ ವ್ಯವಹಾರ ಮಾಡುತ್ತಿದ್ದಾನೆ. ಅಮಾಯಕ ರೈತರನ್ನು ವಂಚಿಸುತ್ತಿದ್ದಾನೆ’ ಎಂದು ರೈತ ಕುಟುಂಬದವರು ದೂರಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-22-1800765625

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.