ಹಾನಗಲ್: ದೇಶದ ಪ್ರಗತಿಯಲ್ಲಿ ಜನಗಣತಿ ಪ್ರಮುಖ ಪಾತ್ರ ವಹಿಸಿದೆ. ಸಾರ್ವಜನಿಕರು ಯಾವುದೇ ಆತಂಕ್ಕೆ ಒಳಗಾಗದೇ ತಮ್ಮ ಮಾಹಿತಿಯನ್ನು ಜನಗಣತಿ ವೇಳೆ ನೀಡಬೇಕು. ಗಣತಿದಾರರು ಕೂಡ ಸಾರ್ವಜನಿಕರಿಂದ ಮುಕ್ತ ಹಾಗೂ ಲೋಪವಿಲ್ಲದ ಮಾಹಿತಿ ಸಂಗ್ರಹಿಸಬೇಕು ಎಂದು ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಮನವಿ ಮಾಡಿದರು.

ಇಲ್ಲಿನ ಎನ್ಸಿಜೆಸಿ ಕಾಲೇಜಿನಲ್ಲಿ ಭಾನುವಾರ ತಾಲ್ಲೂಕು ಆಡಳಿತ ಆಯೋಜಿಸಿದ್ದ ಗಣತಿದಾರರ ತರಬೇತಿ ಶಿಬಿರಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.

ಜನಗಣತಿ ಸರ್ಕಾರದ ಅತ್ಯಂತ ಮಹತ್ವದ ಕಾರ್ಯ. ಎಲ್ಲ ನೌಕರರು ಅದರಲ್ಲೂ ಶಾಲೆಗಳ ಶಿಕ್ಷಕರು ಅತ್ಯಂತ ಕಾಳಜಿಯಿಯಿಂದ ಈ ಕೆಲಸವನ್ನು ನಿರ್ವಹಿಬೇಕು ಎಂದರು.

ಸರ್ಕಾರದ ವಿವಿಧ ಯೋಜನೆಗಳಿಗಾಗಿ ಒಟ್ಟು ಜನಸಂಖ್ಯೆಯನ್ನು ಕಲೆ ಹಾಕುವುದು ಹಾಗೂ ಸಮುದಾಯಗಳಿಗೆ ಸೌಲಭ್ಯಗಳನ್ನು ನೀಡುವಲ್ಲಿ ಜನಗಣತಿ ಹೆಚ್ಚು ಸಹಕಾರಿ. ಎಲ್ಲಿಯೂ ಲೋಪಕ್ಕೆ ಅವಕಾಶ ಇಲ್ಲದಂತೆ ಗಣತಿದಾರರು ಮಾಹಿತಿ ಕಲೆಹಾಕಬೇಕು. ಗಣತಿಗಾಗಿ ಯಾವುದೇ ಮಾಹಿತಿ ಕೊರತೆ ಬಂದಲ್ಲಿ ತಕ್ಷಣ ತಾಲ್ಲೂಕು ಆಡಳಿತವನ್ನು ಸಂಪರ್ಕಿಸಿ ಪರಿಹರಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ತಹಶೀಲ್ದಾರ್ ರೇಣುಕಾ ಎಸ್. ತಾಲ್ಲೂಕಿನ 164 ಗ್ರಾಮಗಳು ಹಾಗೂ ಹಾನಗಲ್ ಪುರಸಭೆಯನ್ನು ಒಳಗೊಂಡು 70 ಸಾವಿರ ಕುಟುಂಬಗಳು ತಾಲ್ಲೂಕಿನಲ್ಲಿವೆ. 575 ಶಿಕ್ಷಕರು ಗಣತಿದಾರರಾಗಿ ಹಾಗೂ ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗಣತಿಗಾಗಿ ಒಟ್ಟು 469 ಭಾಗಗಳನ್ನು ಮಾಡಲಾಗಿದೆ. ಪ್ರತಿ ಮನೆಯ 33 ಸಂಗತಿಗಳನ್ನು ಗಣತಿಯಲ್ಲಿ ದಾಖಲಿಸಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.

ಶಿಕ್ಷಕ ನಿಂಗಪ್ಪ ಸಾಳುಂಕೆ ಅವರು ರಚಿಸಿ ಹಾಡಿದ ಜನಗಣತಿ ಗೀತೆಯನ್ನು ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಬಿಡುಗಡೆಗೊಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ.ಚಿನ್ನೀಕಟ್ಟಿ, ಗ್ರೇಡ್-2 ತಹಶೀಲ್ದಾರ್ ವಿಠ್ಠಲ ಚೌಗುಲಾ, ನಿಂಗಪ್ಪ ಸಾಳುಂಕೆ, ಮಹೇಶ ನಾಯ್ಕ, ಬಿ.ಎನ್.ಸಂಗೂರ, ವಿ.ಟಿ.ಪಾಟೀಲ, ಸಿಬ್ಬಂದಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-22-1449235888

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.