ಗುರುವಾರ , ನವೆಂಬರ್ 14, 2019
19 °C

ಕೋಳಿಫಾರಂಗೆ ನುಗ್ಗಿದ ಮಳೆ ನೀರು; ಸಾವಿರಾರು ಕೋಳಿಗಳ ದಾರುಣ ಸಾವು

Published:
Updated:

ಹಾವೇರಿ: ಹಾವೇರಿ ಜಿಲ್ಲೆಯ ಹಿರೆಕೇರೂರು ತಾಲೂಕಿನ ಬಾಳಂಬೀಡ ಗ್ರಾಮದಲ್ಲಿ ಸಾವಿರಾರು ಕೋಳಿಗಳು ನೀರಲ್ಲಿ ಮುಳುಗಿ ಸಾವನ್ನಪ್ಪಿವೆ.

ಈ ಕೋಳಿ ಫಾರಂ ರಾಜು ಭರಮಗೌಡ್ರ ಎಂಬುವವರಿಗೆ ಸೇರಿದ್ದು, ಸುಮಾರು ಲಕ್ಷಾಂತರ ಮೌಲ್ಯದ ಕೋಳಿಗಳು ನೀರುಪಾಲಾಗಿದೆ.

ಅಧಿಕ ಪ್ರಮಾಣದಲ್ಲಿ ಮಳೆಯಿಂದಾಗಿ ಕೋಳಿ ಫಾರಂಗೆ ನೀರು ನುಗ್ಗಿದ ಪರಿಣಾಮ ಈ ಅನಾಹುತ ಸಂಭವಿಸಿದ್ದು,  

ಸ್ಥಳಕ್ಕೆ ಪಶು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಿರೆಕೇರೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. 

ಪ್ರತಿಕ್ರಿಯಿಸಿ (+)