ಹಾವೇರಿ: ‘ಕಮ್ಯೂನಿಸ್ಟ್ ನಾಯಕ ನಿತ್ಯಾನಂದಸ್ವಾಮಿ ಅವರ ಅಗಲಿಕೆಯಿಂದ, ಜನಪರ ಚಳವಳಿಗಳಿಗೆ ದೊಡ್ಡ ಪೆಟ್ಟು ಬಿದ್ದಿದೆ. ಅದನ್ನು ಭರಿಸಲು ನಾವೆಲ್ಲರೂ ಚಳವಳಿ ಕೆಲಸ ಮಾಡಬೇಕು’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಬಿ.ಎಸ್. ಸೊಪ್ಪಿನ್ ಹೇಳಿದರು.

ನಗರದಲ್ಲಿರುವ ಭಗತ್ ಅಕಾಡೆಮಿಯಲ್ಲಿ ಎಸ್ಎಫ್ಐ, ಡಿವೈಎಫ್ಐ, ಸಿಐಟಿಯು, ಎಐಎಡಬ್ಲ್ಯು, ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ–ಕಾಲೇಜ್ ಹೊರಗುತ್ತಿಗೆ ನೌಕರರ ಸಂಘಟನೆಗಳಿಂದ ಭಾನುವಾರ ಆಯೋಜಿಸಿದ್ದ ‘ನಿತ್ಯಾನಂದ ಸ್ವಾಮೀಜಿ ಹಾಗೂ ಕೆ.ವಿ.ರಾಯಚೂರು ಅವರ ಶ್ರದ್ಧಾಂಜಲಿ - ನುಡಿನಮನ ಕಾರ್ಯಕ್ರಮ’ದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

‘ನಿತ್ಯಾನಂದಸ್ವಾಮಿ ಅವರು ಕಾವಿದಾರಿಯಾಗಿದ್ದರು. ಸವದತ್ತಿ ಮಠದಿಂದ ಬಂದಿದ್ದರು. ಮಾರ್ಕ್ಸ್ವಾದಿ ಸಾಹಿತ್ಯ ಓದಿ ಮಾರ್ಕ್ಸ್ವಾದಿ ಸಿದ್ಧಾಂತವಾಗಿ ರೂಪಗೂಂಡರು. ಅವರು ಹೋದ ಕಡೆಯೆಲ್ಲ ಹೋರಾಟ ಮಾಡಿ ದೇವಸ್ಥಾನ ಹಾಗೂ ಚರ್ಚ್ ಮಸೀದಿ ಮುಂತಾದ ನಿಲಯಗಳಲ್ಲಿ ವಾಸವಾಗುತ್ತಿದ್ದರು. ಸಾಕಷ್ಟು ಕೂಲಿ ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ, ಉಪನ್ಯಾಸಕರಿಗೆ, ಅಸ್ಪೃಶ್ಯತೆಗೊಳಗಾದ ವ್ಯಕ್ತಿಗಳಿಗೆ, ರೈತ ಪರ ಜನರಿಗೆ ಹಾಗೂ ಬಡವರಿಗೆ ನ್ಯಾಯ ಕೊಡಿಸುವ ಚಳವಳಿ ಮಾಡಿದ್ದರು. ಅನ್ಯಾಯದ ವಿರುದ್ದ ಗಟ್ಟಿಯಾಗಿ ನಿಲ್ಲುತ್ತಿದ್ದರು’ ಎಂದರು.

ಮುಖಂಡ ವಿಜಯಕುಮಾರ ದೊಡ್ಡಮನಿ ಮಾತನಾಡಿ, ‘ನಿತ್ಯಾನಂದ ಸ್ವಾಮಿ ಅವರು, ನನ್ನನ್ನು ಸಣ್ಣವಯಸ್ಸಿನಲ್ಲಿ ಕೂಲಿಕಾರ ಸಂಘಟನೆಯ ಹೋರಾಟದಲ್ಲಿ ತೊಡಗಿಸಿದರು. ಅವರು ಮಾರ್ಗದರ್ಶಕರಾಗಿ, ಗುರುಗಳಾಗಿ, ಪೋಷಕರಾಗಿ, ಬುದ್ದಿ ಹೇಳುವಂತಹ ಸ್ಥಾನದಲ್ಲಿದ್ದರು. ಬಡವರ ಜೀವನದಲ್ಲಿ ಆಗುವ ಅನ್ಯಾಯದ ವಿರುದ್ಧವಾಗಿ ಹೋರಾಟ ಮಾಡುತ್ತಿದ್ದರು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ‘ನಿತ್ಯಾನಂದಸ್ವಾಮಿ ಹೋರಾಟದ ಮೂಲಕ ಚಳವಳಿ ಕಟ್ಟುತ್ತಿದ್ದರು. ಅವರ ಜೀವನದ ಸಂಗತಿಗಳನ್ನು ಓದಿ ತಿಳಿದುಕೊಂಡು, ನಾವು ದೊಡ್ಡ ಮಟ್ಟದ ಸಂಘಟನೆ ಕಟ್ಟಬೇಕು. ಅವರ ಹೋರಾಟದ ಹಾದಿಯಲ್ಲಿ ನಡೆಯಬೇಕು’ ಎಂದರು.

ಮುಖಂಡರಾದ ರುದ್ರಪ್ಪ ಜಾಬಿನ್, ಎ.ಕೆ. ಹೆಬಸೂರು, ಅಣ್ಣಪ್ಪ ಚಿಕ್ಕಣ್ಣನವರ, ರೇಣುಕಾ ಕಹಾರ, ಬಸವರಾಜ ಎಸ್., ಎಂ.ಕೆ. ಮಕ್ಬುಲ್, ಗಂಗಯ್ಯ ಕುಲಕರ್ಣಿ, ಶಾಂತಕ್ಕ ಗಡ್ಡಿಯವರ, ಜಗದೀಶ ಕೋಟಿ, ವೀರಣ್ಣ ಗಡ್ಡಿಯವರ, ಹುಸೇನ್ ಸಾಬ್, ಚೈತ್ರಾ ಕೊರವರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-22-186885604

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.