ಹಾವೇರಿ: ಜಿಲ್ಲೆಯ ಗ್ರಾಮೀಣ ಪ್ರದೇಶದ ಬಂಕ್ಗಳಲ್ಲಿ ಡೀಸೆಲ್ ಅಭಾವ ಕಾಡು ತ್ತಿದ್ದು, ಇದು ಕೃಷಿ ಚಟುವಟಿಕೆಗೆ ಹಿನ್ನಡೆ ಉಂಟು ಮಾಡಿದೆ. ಡೀಸೆಲ್ಗಾಗಿ ಕ್ಯಾನ್ ಹಿಡಿದು, ರೈತರು ಊರಿನಿಂದ ಊರಿಗೆ ತೆರಳಿ ಬಂಕ್ಗಳಲ್ಲಿ ಸರದಿಯಲ್ಲಿ ನಿಲ್ಲುವಂತಾಗಿದೆ.

ಜಿಲ್ಲೆಯಲ್ಲಿ 246 ಬಂಕ್ಗಳಿವೆ. ಈ ಪೈಕಿ ಹಾವೇರಿ, ಬ್ಯಾಡಗಿ, ಹಾನಗಲ್ ತಾಲ್ಲೂಕಿನ ಹಲವು ಗ್ರಾಮಗಳ 50ಕ್ಕೂ ಹೆಚ್ಚು ಬಂಕ್ಗಳಲ್ಲಿ ಡೀಸೆಲ್ ಸಂಪೂರ್ಣ ಖಾಲಿಯಾಗಿದೆ.

ಅಲ್ಲಿನ ರೈತರು, ಹಾವೇರಿ ಮತ್ತು ರಾಣೆಬೆನ್ನೂರಿ ಬಂಕ್ಗಳಿಗೆ ತೆರಳಿ ಡೀಸೆಲ್ ಖರೀದಿಸಿದರು.

ಹಾವೇರಿಯ ಹಳೇ ಪಿ.ಬಿ.ರಸ್ತೆಯಲ್ಲಿರುವ ಇಂಡಿಯಲ್ ಆಯಿಲ್, ಹಿಂದೂಸ್ಥಾನ್ ಪೆಟ್ರೋಲಿಯಂ, ಜಿಯೊ ಹಾಗೂ ಸುತ್ತಮುತ್ತಲ ಬಂಕ್ಗಳಲ್ಲಿ ರೈತರು ಕ್ಯಾನ್ಗಳನ್ನು ಸರದಿಯಲ್ಲಿ

ನಿಂತಿದ್ದ ದೃಶ್ಯಗಳು ಕಂಡು ಬಂದವು. ನಿಗದಿತ ಪ್ರಮಾಣದಲ್ಲಿ ಡೀಸೆಲ್ ನೀಡಲು ಬಂಕ್ನವರು ನಿರಾಕರಿಸಿದರೆ, ರೈತರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡುತ್ತಾರೆ.

‘ಈ ಮೊದಲು ಕಂಪನಿಯವರು, ವಾರಕ್ಕೆ ಮೂರು ಡೀಸೆಲ್ ವಾಹನಗಳನ್ನು ಕಳುಹಿಸುತ್ತಿದ್ದರು. ಈಗ, ವಾರಕ್ಕೆ ಒಂದು ಕಳುಹಿಸುತ್ತಾರೆ. ಬೇಡಿಕೆಯಷ್ಟು ಡೀಸೆಲ್ ಬರುತ್ತಿಲ್ಲ. ಈಗ ಕೃಷಿ ಚಟುವಟಿಕೆಗೆ ಹೆಚ್ಚಿನ ಡೀಸೆಲ್ ಬೇಕು. ಒಂದೇ ದಿನದಲ್ಲೇ ಡೀಸೆಲ್ ಖಾಲಿ ಆಗುತ್ತಿದ್ದು, ಅನಿವಾರ್ಯವಾಗಿ ಬಂಕ್ ಬಂದ್ ಮಾಡಿದ್ದೇವೆ’ ಎಂದು ಗುತ್ತಲ ಪಟ್ಟಣದ ಬಂಕ್ ಮಾಲೀಕರೊಬ್ಬರು ಹೇಳಿದರು.

ಜಿಲ್ಲೆಯ ಹಲವು ಬಂಕ್ಗಳಲ್ಲಿ ಮೇ 21ರಿಂದಲೇ ಡೀಸೆಲ್ ಖಾಲಿ ಆಗಿದೆ. ಅಂದು ಡೀಸೆಲ್ ಖರೀದಿಸಿದ್ದ ರೈತರು, ಟ್ರ್ಯಾಕ್ಟರ್ ಬಳಸಿ ಬಿತ್ತನೆ ಶುರು ಮಾಡಿದ್ದರು. ಅದಾದ ಬಳಿಕ, ಡೀಸೆಲ್ ಸಿಕ್ಕಿಲ್ಲ. ಹೊಲದಲ್ಲೇ ಟ್ರ್ಯಾಕ್ಟರ್ ನಿಲ್ಲಿಸಿ, ಡೀಸೆಲ್ಗಾಗಿ ಅಲೆದಾಡುತ್ತಿದ್ದಾರೆ.

‘ನಮ್ಮೂರಿನಲ್ಲಿ ಮೇ 21ರಂದೇ ಡೀಸೆಲ್ ಖಾಲಿ ಆಗಿದೆ. ಹೊಲದಲ್ಲಿ ಟ್ರ್ಯಾಕ್ಟರ್ ನಿಲ್ಲಿಸಿದ್ದೇವೆ. ಊರೂರು ಅಲೆಯುತ್ತಿರುವೆ. ಇಂದು ಹಾವೇರಿಯಲ್ಲಿ ಡೀಸೆಲ್ ತರಲು ಬಂದಿರುವೆ. ಡೀಸೆಲ್ ಇಲ್ಲದಿದ್ದರೆ, ಬಿತ್ತನೆ ಆಗದು’ ಎಂದು ರಾಮಾಪುರದ ರೈತ ಬಸವಂತಪ್ಪ ತಿಳಿಸಿದರು.

ಬಿತ್ತನೆ ಬೀಜಕ್ಕಾಗಿ ಸರದಿ ನಿಂತು ಸಾಕಾಗಿದೆ. ಈಗ ಡೀಸೆಲ್ಗೂ ಸರದಿ ನಿಲ್ಲಬೇಕಿದೆ. ಈ ವರ್ಷ ಬಿತ್ತನೆ ವೇಳೆ ಸಾಕಷ್ಟು ಸಂಕಷ್ಟ ಎದುರಿಸುವಂತಾಗಿದೆ
ಗೂಡುಸಾಬ್ ಕೋಳೂರು, ರೈತ, ಕರ್ಜಗಿ

ಕೈಗಾರಿಕೆಗಳಿಗೆ ಡೀಸೆಲ್ ಮಾರಾಟ ಶಂಕೆ'

'ಜನರಿಗೆ ಪ್ರತಿ ಲೀಟರ್ಗೆ ₹ 95.53 ಆಸುಪಾಸಿನ ದರದಲ್ಲಿ ಡೀಸೆಲ್ ಮಾರಲಾಗುತ್ತದೆ. ಕೈಗಾರಿಕೆ ಉದ್ದೇಶಕ್ಕಾಗಿ ಪ್ರತಿ ಲೀಟರ್ ಡೀಸೆಲ್ಗೆ ₹155 ಬೆಲೆಯಿದೆ. ನೀಡದ ಕೈಗಾರಿಕೆಯವರು, ಸಾರ್ವಜನಿಕರ ಬಂಕ್ಗಳಲ್ಲಿಯೇ ಕಡಿಮೆ ಬೆಲೆಗೆ ಡೀಸೆಲ್ ಖರೀದಿಸುತ್ತಿದ್ದಾರೆ. ಅದಕ್ಕೆ ಜನರಿಗೆ ಡೀಸೆಲ್ ಸಿಗುತ್ತಿಲ್ಲ' ಎಂಬ ಕರ್ನಾಟಕ ಮಾಲೀಕರ ಸಂಘದ ಪದಾಧಿಕಾರಿಯೊಬ್ಬರು ಆರೋಪಿಸಿದರು.

'ಕೈಗಾರಿಕೆ ಹಾಗೂ ಕಂಪನಿ ನಡುವೆ ಡೀಸೆಲ್ ವಿನಿಮಯದ ಕರಾರು ಆಗುತ್ತದೆ. ಕಂಪನಿಯಿಂದಲೇ ಕೈಗಾರಿಕೆಯವರು ಡೀಸೆಲ್ ಖರೀದಿಸಬೇಕು. ಆದರೆ, ನಿಯಾ ಕಂಪನಿಯವರು ಪಾಲಿಸುತ್ತಿಲ್ಲ. ಬೇಕಾಬಿಟ್ಟಿಯಾಗಿ ಎಲ್ಲೆಂದರಲ್ಲಿ ಡೀಸೆಲ್ ಖರೀದಿಯಾಗುತ್ತಿದ್ದು, ಬಂಕ್ ಮಾಲೀಕರೂ ಶಾಮೀಲಾಗಿದ್ದಾರೆ. ಈ ಅಕ್ರಮವನ್ನು ಪ ಮಾತ್ರ, ಡೀಸೆಲ್ ಸಮಸ್ಯೆ ನಿವಾರಣೆ ಆಗುತ್ತದೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.