ಹಾವೇರಿ: ‘ಡ್ರಗ್ಸ್ ಮುಕ್ತ ರಾಜ್ಯ’ ನಿರ್ಮಿ ಸಲು ಪಣ ತೊಟ್ಟಿರುವ ಪೊಲೀಸ್ ಇಲಾಖೆ, ಮಾದಕ ವ್ಯಸನಿಗಳ ಮೇಲೆ ನಿಗಾ ಇರಿಸಿ ಆಪ್ತ ಸಮಾಲೋಚನೆ ಮೂಲಕ ಚಿಕಿತ್ಸೆ ಕೊಡಿಸಲು ‘ಸನ್ಮಿತ್ರ’ ವ್ಯವಸ್ಥೆ ಜಾರಿಗೊಳಿಸಿದೆ. ಜಿಲ್ಲೆಯಲ್ಲಿಯೂ ಕಾರ್ಯಾಚರಣೆ ಆರಂಭಿಸಿರುವ ಪೊಲೀಸರು, ನಾಲ್ಕು ತಿಂಗಳ ಅವಧಿ ಯಲ್ಲಿ 39 ಮಾದಕ ವ್ಯಸನಿಗಳನ್ನು ಪತ್ತೆ ಮಾಡಿ ಅವರ ಚಲನವಲನಗಳ ಮೇಲೆ ನಿಗಾ ಇರಿಸಿದ್ದಾರೆ.

ಜಿಲ್ಲೆಯ ಹಾವೇರಿ, ರಾಣೆಬೆನ್ನೂರು, ಹಾನಗಲ್, ಹಿರೇಕೆರೂರು, ರಟ್ಟೀಹಳ್ಳಿ, ಬ್ಯಾಡಗಿ, ಶಿಗ್ಗಾವಿ ಹಾಗೂ ಸವಣೂರು ತಾಲ್ಲೂಕಿನಲ್ಲಿ ಮಾದಕ ವಸ್ತುಗಳ (ಡ್ರಗ್ಸ್) ಮಾರಾಟ ಹಾಗೂ ಸಾಗಣೆ ಮೇಲೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಜೊತೆಗೆ, ಮಾದಕ ದ್ರವ್ಯ ಬಳಸುವವರನ್ನೂ ಪತ್ತೆ ಮಾಡಿ ಎನ್ಡಿಪಿಎಸ್ ಕಾಯ್ದೆ–1985ರ ಕಲಂ 27 (ಬಿ) ಅನ್ವಯ ಎಫ್ಐಆರ್ ದಾಖಲಿಸಿಕೊಳ್ಳುತ್ತಿದ್ದಾರೆ.

ಮಾದಕ ದ್ರವ್ಯ ಬಳಸಿ ಸಿಕ್ಕಿ ಬೀಳುವವವರನ್ನು ಆಸ್ಪತ್ರೆಗಳಿಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ವೈದ್ಯರ ವರದಿ ಆಧರಿಸಿ, ಮಾದಕ ವ್ಯಸನಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ. ಜೊತೆಗೆ, ಕಾಯ್ದೆ ಅನ್ವಯ ಜಾಮೀನು ಮೇರೆಗೆ ಮಾದಕ ವ್ಯಸನಿಗಳನ್ನು ಬಿಟ್ಟು ಕಳುಹಿಸುತ್ತಿದ್ದಾರೆ.

ಮಾದಕ ವ್ಯಸನಿಯು ಠಾಣೆಯಿಂದ ಹೊರ ಹೋದ ಬಳಿಕವೂ ಪೊಲೀಸರು ಆತನ ಮೇಲೆ ನಿಗಾ ಇರಿಸುತ್ತಿದ್ದಾರೆ. ಆತನ ವಿಳಾಸ, ನಿತ್ಯದ ಕೆಲಸ, ಯಾರನ್ನು ಭೇಟಿಯಾಗುತ್ತಾನೆ, ದಿನಚರಿ... ಎಲ್ಲವನ್ನೂ ಪೊಲೀಸರು ದಾಖಲಿಸಿಕೊಳ್ಳುತ್ತಿದ್ದಾರೆ. ಪ್ರಕರಣ ದಾಖಲಾದ ಬಳಿಕವೂ ಪದೇ ಪದೇ ಮಾದಕ ದ್ರವ್ಯ ಬಳಸುತ್ತಿದ್ದರೆ, ಆತನನ್ನು ಆಸ್ಪತ್ರೆಗೆ ಸೇರಿಸಿ ವೈದ್ಯರ ಆಪ್ತ ಸಮಾಲೋಚನೆ ಮೂಲಕ ಸೂಕ್ತ ಚಿಕಿತ್ಸೆ ಕೊಡಿಸಲು ಮುಂದಾಗುತ್ತಿದ್ದಾರೆ.

ವ್ಯಸನಿಗೊಬ್ಬ ಪೊಲೀಸ್ ನಿಯೋಜನೆ: ‘ಜಿಲ್ಲೆಯಲ್ಲಿ ಮಾದಕ ದ್ರವ್ಯ ವ್ಯಸನಿಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಮಾದಕ ದ್ರವ್ಯ ಬಳಸಿ ಸಿಕ್ಕಿಬೀಳುವ ವ್ಯಸನಿಗಳ ಮೇಲೆ ಆರಂಭದಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ. ಅದಾದ ನಂತರ, ಅವರ ಮನ ಪರಿವರ್ತನೆ ಮಾಡಲು ಸನ್ಮಿತ್ರ ವ್ಯವಸ್ಥೆಯಡಿ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಜಿಲ್ಲಾ ಎಸ್.ಪಿ. ಯಶೋಧಾ ವಂಟಗೋಡಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಜ್ಯಮಟ್ಟದಲ್ಲಿ ಸನ್ಮಿತ್ರ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಜಿಲ್ಲೆಯಲ್ಲಿ ಪ್ರಸಕ್ತ ಜನವರಿಯಿಂದ ಏಪ್ರಿಲ್ವರೆಗೆ 39 ವ್ಯಸನಿಗಳು ಕಂಡುಬಂದಿದ್ದಾರೆ. ಅವರ ಚಲನವಲನ ಗಮನಿಸಲು 39 ಸನ್ಮಿತ್ರರನ್ನು (ಪೊಲೀಸ್ ಕಾನ್ಸ್ಟೆಬಲ್) ನಿಯೋಜಿ ಸಲಾಗಿದೆ. ವ್ಯಸನಿ ಯಾರು? ಎಂಬುದನ್ನು ಸನ್ಮಿತ್ರರಿಗೆ ಮಾತ್ರ ಗೊತ್ತಿ ರುತ್ತದೆ. ಸಾರ್ವಜನಿಕವಾಗಿ ಯಾರಿಗೂ ಗೊತ್ತಾಗುವುದಿಲ್ಲ. ವ್ಯಸನಿ ಪದೇ ಪದೇ ಡ್ರಗ್ಸ್ ಬಳಸುತ್ತಿದ್ದರೆ, ಸನ್ಮಿತ್ರರು ಕೂಡಲೇ ಎಚ್ಚೆತ್ತುಕೊಳ್ಳಲಿದ್ದಾರೆ. ಅಂಥ ವ್ಯಸನಿಯನ್ನು ಆಪ್ತ ಸಮಾಲೋಚನೆಗೆ ಒಳಪಡಿಸಲಿದ್ದಾರೆ. ವೈದ್ಯರು ನೀಡುವ ಸಲಹೆ ಮೇರೆಗೆ ಚಿಕಿತ್ಸೆಗೆ ವ್ಯವಸ್ಥೆ ಮಾಡಲಿದ್ದಾರೆ’ ಎಂದು ಹೇಳಿದರು.

‘ಯಾರನ್ನೂ ಒತ್ತಾಯದಿಂದ ಆಸ್ಪತ್ರೆಗೆ ಸೇರಿಸಲು ಆಗುವುದಿಲ್ಲ. ವ್ಯಸನ ಬಿಡಬೇಕೆಂದು ಅವರೇ ಮುಂದೆ ಬರಬೇಕು. ಕುಟುಂಬದವರೂ ಕರೆತರಬಹುದು. ಅಂಥವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ವ್ಯಸನಮುಕ್ತ ಮಾಡಲು ವ್ಯವಸ್ಥೆಯಿದೆ. 39 ಮಂದಿ ಪೈಕಿ ಸದ್ಯ ಯಾರೊಬ್ಬರೂ, ಚಿಕಿತ್ಸೆಗಾಗಿ ಬಂದಿಲ್ಲ’ ಎಂದು ತಿಳಿಸಿದರು.

10 ಹಾಸಿಗೆಗಳ ಪ್ರತ್ಯೇಕ ವ್ಯವಸ್ಥೆ: ಮಾದಕ ವ್ಯಸನಿಗಳನ್ನು ಪುನರ್ವಸತಿ ಮೂಲಕ ವ್ಯಸನಮುಕ್ತಗೊಳಿಸಲು ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿಯೂ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ (ಎಂಎಸ್ಜೆಇ) ಮೂಲಕ ಮಾದಕ ವ್ಯಸನಿಗಳ ಪುನರ್ವಸತಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರ (ಕೆಎಸ್ಎಂಎಸ್) ಹಾಗೂ ಪೊಲೀಸ್ ಇಲಾಖೆಯ ಸನ್ಮಿತ್ರರ ಮೂಲಕ ಈ ಕೇಂದ್ರ ಕೆಲಸ ಮಾಡುತ್ತಿದೆ.

ಹಾವೇರಿ ಜಿಲ್ಲಾಸ್ಪತ್ರೆಯಲ್ಲಿಯೂ 10 ಹಾಸಿಗೆಗಳ ವಿಶೇಷ ಘಟಕವನ್ನು, ಮಾದಕ ವ್ಯಸನಿಗಳ ಚಿಕಿತ್ಸೆಗಾಗಿ ಮೀಸಲಿಡಲಾಗಿದೆ. ನುರಿತ ತಜ್ಞ ವೈದ್ಯರು, ಮಾನಸಿಕ ರೋಗಗಳ ತಜ್ಞರು, ಆಪ್ತ ಸಮಾಲೋಚಕರು, ಸಾಮಾಜಿಕ ಕಾರ್ಯಕರ್ತರು, ಶುಶ್ರೂಷಕಿಯರು ಕೇಂದ್ರದಲ್ಲಿದ್ದಾರೆ. ನಿರ್ವಹಣೆ ಹೊಣೆಯನ್ನು ವೈದ್ಯಕೀಯ ಅಧೀಕ್ಷಕರಿಗೆ ವಹಿಸಲಾಗಿದೆ.

‘ಜಿಲ್ಲೆಯಲ್ಲಿ ಮಾದಕ ವ್ಯಸನಿಗಳಿಗೆ ಚಿಕಿತ್ಸೆ ಕೊಡಿಸಲು, ಜಿಲ್ಲಾಸ್ಪತ್ರೆಯಲ್ಲಿ 10 ಹಾಸಿಗೆಗಳ ವ್ಯವಸ್ಥೆ ಸಿದ್ಧವಿದೆ. ಎಂಥ ಸಂದರ್ಭದಲ್ಲಾದರೂ ಚಿಕಿತ್ಸೆ ನೀಡಲು ವೈದ್ಯರು ತಯಾರಿಯಲ್ಲಿ ದ್ದಾರೆ. ಯಾರಿಗಾದರೂ ಚಿಕಿತ್ಸೆಯ ಅಗತ್ಯ ವಿದ್ದರೆ, ಆಸ್ಪತ್ರೆಗೆ ಸೇರಿಸಲಾಗುವುದು’ ಎಂದು ಯಶೋಧಾ ವಂಟಗೋಡಿ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-22-1374249262

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.