ಹಾವೇರಿ: ‘ತಾಲ್ಲೂಕಿನ ಹೊಸರಿತ್ತಿ ಗ್ರಾಮದಲ್ಲಿರುವ ರಾಷ್ಟ್ರೀಯ ಶಿಕ್ಷಣ ಸಮಿತಿಗೆ ಸೇರಿದ್ದ ಆಸ್ತಿಯನ್ನು, ಆಡಳಿತ ಮಂಡಳಿಯ ಕೆಲ ಪದಾಧಿಕಾರಿಗಳು ಹಾಗೂ ಅವರ ಕುಟುಂಬಸ್ಥರು ತಮ್ಮ ಹೆಸರಿಗೆ ನೋಂದಣಿ ಮಾಡಿಕೊಂಡು ಕಬಳಿಕೆ ಮಾಡಿದ್ದಾರೆ’ ಎಂದು ಆರೋಪಿಸಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರಿಗೆ ಕೆಲ ಗ್ರಾಮಸ್ಥರು ಶುಕ್ರವಾರ ದೂರು ಸಲ್ಲಿಸಿದ್ದಾರೆ.

ನಗರದ ಹೊರವಲಯದಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ನಿಯೋಗದ ಮೂಲಕ ಭೇಟಿ ನೀಡಿದ ಗ್ರಾಮಸ್ಥರು, ‘ಸಮಿತಿಯ ಆಸ್ತಿ ಕಬಳಿಸುವವರನ್ನು ಪತ್ತೆ ಮಾಡಿ, ಕಾನೂನು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

‘ಸ್ವಾತಂತ್ರ್ಯ ಹೋರಾಟಗಾರರೂ ಆಗಿರುವ ಕರ್ನಾಟಕ ಏಕೀಕರಣ ಚಳವಳಿಯ ನಾಯಕ ಗುದ್ಲೇಪ್ಪ ಹಳ್ಳಿಕೇರಿ ಅವರು 1965ರಲ್ಲಿ ಸಂಸ್ಥೆ ಸ್ಥಾಪಿಸಿದ್ದಾರೆ. ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಅವರ ಉದ್ದೇಶವಾಗಿತ್ತು. ಆದರೆ, ಇತ್ತೀಚೆಗೆ ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ಅವ್ಯವಹಾರಗಳು ಹೆಚ್ಚಾಗುತ್ತಿರುವ ಅನುಮಾನವಿದೆ. ಸ್ವಜನ ಪಕ್ಷಪಾತದ ಆರೋಪವೂ ಇದೆ’ ಎಂದು ದೂರಿದರು.

‘ಹೊಸರಿತ್ತಿ ಗ್ರಾಮದ ‘ಸರ್ವೆ ನಂಬರ್ 71/ಬಿ’ಯಲ್ಲಿ ಸಮಿತಿಯ ಆಸ್ತಿಯಿದೆ. ಪದವಿ ಕಾಲೇಜು ಕಟ್ಟಡ ನಿರ್ಮಾಣದ ನೆಪದಲ್ಲಿ ಕಡಿಮೆ ಬೆಲೆಗೆ ಆಡಳಿತ ಮಂಡಳಿಯ ಕೆಲ ಪದಾಧಿಕಾರಿಗಳು ಹಾಗೂ ಅವರ ಕುಟುಂಬಸ್ಥರು, ತಮ್ಮ ಹೆಸರಿಗೆ ಖರೀದಿಸಿಕೊಂಡಿದ್ದಾರೆ. ಮಾರುಕಟ್ಟೆಯಲ್ಲಿ ಕನಿಷ್ಠ ₹ 30 ಲಕ್ಷ ಬೆಲೆಯಿರುವ ಜಾಗವನ್ನು, ಕೇವಲ ₹ 2 ಲಕ್ಷಕ್ಕೆ ನೋಂದಣಿ ಮಾಡಿಕೊಳ್ಳಲಾಗಿದೆ’ ಎಂದು ಗ್ರಾಮಸ್ಥರು ಆರೋಪಿಸಿದರು.

‘ಆಸ್ತಿ ಕಬಳಿಕೆಯು ಕರ್ನಾಟಕ ಶಿಕ್ಷಣ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಸರ್ಕಾರದ ಅನುದಾನ ಪಡೆಯುವ ಸಂಸ್ಥೆಯ ಆಸ್ತಿಯನ್ನು ಮಾರಾಟ ಮಾಡುವಾಗ ನಿಯಮಗಳನ್ನು ಪಾಲಿಸಬೇಕು. ಆದರೆ, ಸಮಿತಿಯವರು ಯಾವುದೇ ನಿಯಮ ಪಾಲಿಸಿಲ್ಲ. ಬಹಿರಂಗ ಹರಾಜು ನಡೆಸದೇ ಆಸ್ತಿಯನ್ನು ಮಾರಾಟ ಮಾಡಿರುವುದು ನಿಯಮಬಾಹಿರ. ಆಸ್ತಿ ವರ್ಗಾವಣೆ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೇಳಿದರೂ ಕೊಟ್ಟಿಲ್ಲ. ತಪ್ಪಿತಸ್ಥರಾದ ಆಡಳಿತ ಮಂಡಳಿಯವರನ್ನು ವಜಾ ಮಾಡಬೇಕು. ಸರ್ಕಾರದಿಂದ ಆಡಳಿತಾಧಿಕಾರಿ ನೇಮಿಸಬೇಕು. ಅಕ್ರಮವಾಗಿ ಖರೀದಿಸಿದ ಆಸ್ತಿಗಳ ನೋಂದಣಿ ರದ್ದುಪಡಿಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು’ ಎಂದು ಒತ್ತಾಯಿಸಿದರು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ವಿಜಯ ಮಹಾಂತೇಶ, ‘ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು. ಗ್ರಾಮದ ಐ.ಜಿ. ಕೋರಿ, ಸಿ.ಕೆ. ಹಳ್ಳಿಕೇರಿ, ಎಂ.ಬಿ. ಮುಂಡರಗಿ, ನಿರಂಜನ ಪರಂಗಿ, ಸಿದ್ದಲಿಂಗಪ್ಪ ಕಲಕೋಟಿ, ಮುತ್ತಯ್ಯ ಕಿತ್ತೂರಮಠ, ಕೆ.ಸಿ. ಕೋರಿ, ಮಲ್ಲಣ್ಣ ಹಳ್ಳಿಕೇರಿ, ಸಿದ್ದಣ್ಣ ಹಳ್ಳಿಕೇರಿ, ರುದ್ರಪ್ಪ ಯತ್ನಳ್ಳಿ, ರವಿ ಚಂದ್ರಗಿರಿ, ಸಿದ್ದಲಿಂಗಪ್ಪ ರಾಚನಾಯ್ಕರ, ಗುದ್ಲೆಪ್ಪ ಸವಣೂರ, ಆನಂದ ಮುರಡೆಪ್ಪನವರ, ಶಂಭಣ್ಣ ಶಾಬಳದ, ಬಿ.ಎಸ್. ದೊಡ್ಡಮನಿ, ಎಸ್.ಜಿ. ದೀಪಾಳಿ, ರವಿ ಗಾಣಗೇರ ಹಾಗೂ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-22-2034576580

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.