ಹಾವೇರಿ: ಇಲ್ಲಿಯ ಕಾಗಿನೆಲೆ ರಸ್ತೆಯಲ್ಲಿರುವ ಕೆಳಸೇತುವೆ ಸಮೀಪದಲ್ಲಿ ಅಣ್ಣ–ತಮ್ಮ ಹಾಗೂ ಅವರ ಸ್ನೇಹಿತನ ಬಟ್ಟೆ ಬಿಚ್ಚಿಸಿ ವಿಡಿಯೊ ಚಿತ್ರೀಕರಿಸಿ ಬ್ಲ್ಯಾಕ್ಮೇಲ್ ಮಾಡಿ ಹಣ ಸುಲಿಗೆ ಮಾಡಲಾಗಿದ್ದು, ಕೃತ್ಯ ಎಸಗಿದ್ದ ಆರೋಪದಡಿ ಇಬ್ಬರನ್ನು ಹಾವೇರಿ ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ನಾಗೇಂದ್ರನಮಟ್ಟಿಯ ಸುದೀಪ ದೊಡ್ಡಮನಿ ಹಾಗೂ ಸುದೀಪ ದ್ಯಾಮಪ್ಪ ಕುಂಚಿಕೊರವರ ಬಂಧಿತರು. ಸವಣೂರು ತಾಲ್ಲೂಕಿನ ಕಡಕೋಳ ಗ್ರಾಮದ 25 ವರ್ಷದ ಯುವಕ ನೀಡಿದ್ದ ದೂರು ಆಧರಿಸಿ, ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಎ.ಸಿ. ನಿರ್ವಹಣೆ ಕೆಲಸ ಮಾಡುತ್ತಿದ್ದ ದೂರುದಾರ, ಬಂಕಾಪುರದಲ್ಲಿ ನೆಲೆಸಿದ್ದರು. ಮೇ 5ರಂದು ರಾತ್ರಿ ಅಣ್ಣ ಹಾಗೂ ಸ್ನೇಹಿತರ ಜೊತೆ ಹಾವೇರಿಗೆ ಬಂದಿದ್ದರು. ಕಾಗಿನೆಲೆ ರಸ್ತೆಯಲ್ಲಿರುವ ಕೆಳಸೇತುವೆ ಸಮೀಪದಲ್ಲಿರುವ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಊಟ ಮಾಡುತ್ತಿ್ದ್ದರು. ತಡರಾತ್ರಿ 2 ಗಂಟೆ ಸುಮಾರಿಗೆ ಆರೋಪಿಗಳು ಸ್ಥಳಕ್ಕೆ ಬಂದಿದ್ದರು’ ಎಂದು ತಿಳಿಸಿದರು.

‘ದೂರುದಾರ, ಅವರ ಅಣ್ಣ ಹಾಗೂ ಸ್ನೇಹಿತನ ಮೇಲೆ ಹಲ್ಲೆ ಮಾಡಿದ್ದ ಆರೋಪಿಗಳು, ಜೀವ ಬೆದರಿಕೆಯೊಡ್ಡಿ ಎಲ್ಲರ ಬಟ್ಟೆ ಬಿಚ್ಚಿಸಿದ್ದರು. ನಂತರ, ಮೊಬೈಲ್ನಲ್ಲಿ ವಿಡಿಯೊ ಚಿತ್ರೀಕರಣ ಮಾಡಿದ್ದರು. ಮೂವರ ಬಳಿಯಿದ್ದ ₹ 16,100 ಕಸಿದುಕೊಂಡಿದ್ದರು. ಇದಾದ ನಂತರ, ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾರೆ’ ಎಂದು ಹೇಳಿದರು.

‘ದೂರು ದಾಖಲಾಗುತ್ತಿದ್ದಂತೆ, ಪುರಾವೆಗಳನ್ನು ಆಧರಿಸಿ ಆರೋಪಿಗಳನ್ನು ಪತ್ತೆ ಮಾಡಲಾಗಿದೆ. ಆರೋಪಿಗಳು, ಮತ್ತಷ್ಟು ಪ್ರಕರಣಗಳಲ್ಲಿ ಭಾಗಿಯಾಗಿರುವ ಮಾಹಿತಿಯಿದೆ. ಒಬ್ಬ ಆರೋಪಿ ಮೇಲೆ ಈ ಹಿಂದೆ ಕೊಲೆ ಯತ್ನ ನಡೆದಿತ್ತು. ಚಿಕಿತ್ಸೆ ಪಡೆದುಕೊಂಡು ಚೇತರಿಸಿಕೊಂಡಿರುವ ಆತ, ಕೃತ್ಯ ಎಸಗಿದ್ದಾನೆ’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-22-1355200634

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.