ರಾಣೆಬೆನ್ನೂರು: ಸಮಾಜದಲ್ಲಿ ಜನ್ಮತಃ ಯಾರೂ ಮದ್ಯ ವ್ಯಸನಿಗಳಲ್ಲ. ಸಹವಾಸ ದೋಷ, ದುರ್ಜನರ ಸಂಘ ಹಾಗೂ ಜೀವನದಲ್ಲಿ ಬರುವ ಇತರೆ ಸಮಸ್ಯೆಗಳೇ ಕುಡಿತಕ್ಕೆ ಮೂಲ ಕಾರಣಗಳಾಗಿವೆ ಎಂದು ಲಿಂಗನಾಯಕನಹಳ್ಳಿ ಜಂಗಮ ಕ್ಷೇತ್ರದ ಮಠದ ಚನ್ನವೀರ ಸ್ವಾಮೀಜಿ ಹೇಳಿದರು.

ಇಲ್ಲಿನ ಸಿದ್ದೇಶ್ವರನಗರದ ಕಾಕಿ ಜನಸೇವಾ ಸಂಸ್ಥೆಯ ಗಣೇಶೋತ್ಸವ ಮಹಾಮಂಟಪದಲ್ಲಿ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ 2058 ನೇ ಮದ್ಯ ವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

‘ಇಂದಿನ ವ್ಯವಸ್ಥೆಯಲ್ಲಿ ಯುವ ಜನಾಂಗ ಕುಣಿತದ ಚಟಕ್ಕೆ ಬಲಿಯಾಗಿ ಮನೆ ಮಠ ಕಳೆದುಕೊಂಡು ಬೀದಿ ಪಾಲಾಗುತ್ತಿದ್ದಾರೆ. ಇದು ನಮ್ಮ ಸನಾತನ ಸಂಸ್ಕೃತಿಗೆ ಮಾರಕವಾಗಿದೆ. ಸರ್ಕಾರಗಳು ಇದರಿಂದಾಗುವ ಪರಿಣಾಮಗಳ ಕುರಿತು ಚಿಂತನೆ ನಡೆಸಬೇಕಾಗಿದೆ. ಕುಟುಂಬಗಳು ಮಹಿಳೆಯರಿಂದಲೇ ರಕ್ಷಣೆಯಾಗಬೇಕಾಗಿದೆ. ಹಾಗಾಗಿ ಮಹಿಳೆಯರು ವಿದ್ಯೆಗೆ ಮಹತ್ವ ನೀಡಬೇಕು. ಕ್ಷೇತ್ರದ ಧರ್ಮಾಧಿಕಾರಿಗಳು ಸಮುದಾಯದ ಒಂದು ಭಾಗವಾಗಿ ಅತ್ಯುತ್ತಮ ಪವಿತ್ರವಾದ ಕಾರ್ಯ ಮಾಡುತ್ತಿದ್ದಾರೆ’ ಎಂದರು.

ನಿವೃತ್ತ ಉಪನ್ಯಾಸಕ ಶಿವಾನಂದ ಬಾಗಾದಿ, ವೇದಿಕೆ ಅಧ್ಯಕ್ಷ ಬಸವರಾಜ ಹುಲ್ಲತ್ತಿ, ಶೇಖಣ್ಣ ಹೊಸಗೌಡ್ರ, ವೈದ್ಯ ಡಾ.ಬಸವರಾಜ ಕೇಲಗಾರ ಮಾತನಾಡಿದರು. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಾದೇಶಿಕ ವಿಭಾಗದ ಶಿವರಾಯ ಪ್ರಭು, ಶಶಿಕಲಾ ಗೌಡ ಶಿವಣ್ಣನವರ, ಪಾಂಡುರಂಗ ಪೂಜಾರ, ಜನಜಾಗೃತಿ ವೇದಿಕೆ ಅಧ್ಯಕ್ಷ ಬಸವರಾಜ ಹುಲ್ಲತ್ತಿ, ಮಂಜುನಾಥಸ್ವಾಮಿ ಮಣೆಗಾರ, ಧಾರವಾಡ ಪ್ರಾದೇಶಿಕ ನಿರ್ದೇಶಕ ಭಾಸ್ಕರ್, ಎನ್.ಶಿಭಿರಾಧಿಕಾರಿ ದಿವಾಕರ ಪೂಜಾರಿ, ಚಂದ್ರಶೇಖರ ಬಣಕಾರ, ನಿತ್ಯಾನಂದ ಕುಂದಾಪುರ, ಕೊಟ್ರೇಶಪ್ಪ ಎಮ್ಮಿ, ಪುಷ್ಪಾ ಬಾದಾಮಿ, ಚಂದ್ರಕಲಾ ಬಿಷ್ಟಣ್ಣನವರ, ಮಂಜುನಾಥಗೌಡ, ಉಮೇಶ್ ಹಡಪದ ಗೌರಮ್ಮ ಬೆಳ್ತಂಗಡಿಯ ನೇತ್ರಾವತಿ, ಸುರೇಶ ಜೋಗಪ್ಪನವರ, ಮಂಜುಳಾ ಶಿಕಾರಿಪುರ, ತಾರಾಮತಿ ಹಿರೇಮಠ, ಶಿವಕುಮಾರ ಹಿರೇಮಠ, ಎಸ್.ಬಿ. ಗೌಡರ, ಮಂಜುನಾಥ ಇದ್ದರು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಶಿಬಿರಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಿ ಗೌರವಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-22-478652165

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.