ಹಾವೇರಿ: ಜಿಲ್ಲೆಯಲ್ಲಿ ರೈತರು ಬೆಳೆದಿರುವ ಫಸಲಿಗೆ ಕಳ್ಳರ ಕಾಟ ಶುರುವಾಗಿದೆ. ರಾಷ್ಟ್ರೀಯ, ರಾಜ್ಯ ಹೆದ್ದಾರಿ ಹಾಗೂ ಗ್ರಾಮದಲ್ಲಿರುವ ಬಯಲು ಪ್ರದೇಶಗಳಲ್ಲಿ ಕೆಲ ರೈತರು ಒಣಗಲು ಹಾಕುತ್ತಿರುವ ಬೆಳೆಗಳನ್ನು ಕಳ್ಳರು ಕದ್ದೊಯ್ಯುತ್ತಿದ್ದಾರೆ. ಕಳ್ಳರ ಪತ್ತೆಗಾಗಿ ರೈತರು, ಠಾಣೆ ಮೆಟ್ಟಿಲೇರುತ್ತಿದ್ದಾರೆ.

ಜಿಲ್ಲೆಯ ಹಾವೇರಿ, ರಾಣೆಬೆನ್ನೂರು, ಬ್ಯಾಡಗಿ, ಹಾನಗಲ್, ಬ್ಯಾಡಗಿ, ಶಿಗ್ಗಾವಿ, ಸವಣೂರು, ಹಿರೇಕೆರೂರು ಹಾಗೂ ರಟ್ಟೀಹಳ್ಳಿ ತಾಲ್ಲೂಕಿನಲ್ಲಿ ಮುಂಗಾರು ಬಿತ್ತನೆ ಮಾಡಿದ್ದ ಫಸಲು ರೈತರ ಕೈಗೆ ಬಂದಿದೆ. ತೇವಾಂಶ ಹೆಚ್ಚಿರುವ ಕಾರಣಕ್ಕೆ ರೈತರು ಬೆಳೆಗಳನ್ನು ಒಣಗಲು ಹಾಕುತ್ತಿದ್ದಾರೆ. ಇದೇ ಅವಕಾಶವನ್ನು ಬಳಸಿಕೊಂಡು ಕಳ್ಳರು, ತಮ್ಮ ಕೈ ಚಳಕ ತೋರಿಸುತ್ತಿದ್ದಾರೆ.

ಕಳ್ಳರ ಕಾಟದಿಂದ ಬೇಸತ್ತಿರುವ ರೈತರು, ರಾತ್ರಿಯಿಡೀ ಫಸಲು ಕಾಯುತ್ತಿದ್ದಾರೆ. ಒಂಟಿಯಾಗಿರುವ ರೈತರಿಗೆ, ಬಯಲಿನಲ್ಲಿರುವ ಫಸಲು ಕಾಯುವುದೇ ದೊಡ್ಡ ಸವಾಲಾಗಿದೆ.

ಗೋವಿನಜೋಳ, ಸೋಯಾಬೀನ್, ಶೇಂಗಾ ಹಾಗೂ ಹಲವು ಬೆಳೆಗಳನ್ನು ಒಣಗಲು ಹಾಕಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಮಳೆ ಸಹ ಜೋರಾಗಿ ಸುರಿಯುತ್ತಿದೆ. ಸಂಗ್ರಹಗೊಂಡ ಮಳೆ ನೀರು, ಬಯಲು ಪ್ರದೇಶಕ್ಕೆ ನುಗ್ಗಿ ಬೆಳೆಯನ್ನು ಮತ್ತಷ್ಟು ಒದ್ದೆ ಮಾಡುತ್ತಿದೆ.

ಜಿಲ್ಲೆಯಲ್ಲಿ ಬಿಸಿಲಿನ ಕಣ್ಣಾಮುಚ್ಚಾಲೆ ಆರಂಭವಾಗಿದೆ. ಬೆಳಿಗ್ಗೆ ಬಿಸಿಲು ಇದ್ದರೆ, ಮಧ್ಯಾಹ್ನ ಹಾಗೂ ಸಂಜೆ ಮೋಡ ಮುಸುಕಿದ ವಾತಾವರಣ ಕಾಣಿಸುತ್ತಿದೆ. ಇದರಿಂದಾಗಿ, ಫಸಲು ಒಣಗಿಸುವುದು ಹೇಗೆ ? ಎಂಬ ಚಿಂತೆ ರೈತರನ್ನು ಕಾಡುತ್ತಿದೆ.

ಇಂಥ ಸಂದರ್ಭದಲ್ಲಿಯೇ, ಕೃಷಿ ಫಸಲು ಕಳ್ಳತನ ಪ್ರಕರಣಗಳೂ ವರದಿಯಾಗುತ್ತಿವೆ. ಕೆಲ ರೈತರು, ಬೆಳೆ ಕಾಯಲು ಕೂಲಿ ಕಾರ್ಮಿಕರನ್ನು ನೇಮಿಸಿಕೊಳ್ಳುತ್ತಿದ್ದಾರೆ.

25 ಕ್ವಿಂಟಲ್ ಗೋವಿನಜೋಳ ಕಳವು: ಹಿರೇಕೆರೂರು ತಾಲ್ಲೂಕಿನ ಡಮ್ಮಳ್ಳಿ ಗ್ರಾಮದಲ್ಲಿ ಒಣಗಲು ಹಾಕಿದ್ದ 25 ಕ್ವಿಂಟಲ್ ಗೋವಿನಜೋಳವನ್ನು ಕಳ್ಳರು ಕದ್ದುಕೊಂಡು ಹೋಗಿದ್ದಾರೆ. ಈ ಬಗ್ಗೆ ರೈತ ತನುರಾಜ ಬಸಪ್ಪ ಪ್ಯಾಟಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

‘ಡಮ್ಮಳ್ಳಿ ಗ್ರಾಮದ ಕರೆ ಕಲ್ಯಾಣಿ ಬಸವಣ್ಣ ದೇವಸ್ಥಾನ ಎದುರಿನ ಸಿಮೆಂಟಿನ ಮೈದಾನದಲ್ಲಿ ಅಂದಾಜು 75 ಕ್ವಿಂಟಲ್ನಷ್ಟು ಗೋವಿನಜೋಳದ ಕಾಳುಗಳನ್ನು ಒಣಗಲು ಹಾಕಲಾಗಿತ್ತು. ಅಕ್ಟೋಬರ್ 10ರ ಸಂಜೆಯಿಂದ ಅಕ್ಟೋಬರ್ 11ರ ಬೆಳಿಗ್ಗಿನ ಅವಧಿಯಲ್ಲಿ ಕಳ್ಳರು, 25 ಕ್ವಿಂಟಲ್ನಷ್ಟು ಗೋವಿನಜೋಳ ಕದ್ದುಕೊಂಡು ಹೋಗಿದ್ದಾರೆ’ ಎಂದು ರೈತ ತನುರಾಜ ದೂರಿನಲ್ಲಿ ತಿಳಿಸಿದ್ದಾರೆ.

‘ಗೋವಿನಜೋಳದ ತೇವಾಂಶ ಹೆಚ್ಚಿದ್ದರೆ, ಮಾರುಕಟ್ಟೆಯಲ್ಲಿ ಕಡಿಮೆ ದರ ಸಿಗುತ್ತದೆ. ಹೀಗಾಗಿ, ತೇವಾಂಶ ಕಡಿಮೆ ಮಾಡಲು ಬಯಲಿನಲ್ಲಿ ಒಣಗಲು ಹಾಕಲಾಗಿತ್ತು. ಅಂದಾಜು ₹ 40 ಸಾವಿರ ಮೌಲ್ಯದ 25 ಕ್ವಿಂಟಲ್ನಷ್ಟು ಗೋವಿನಜೋಳ ಕಳುವಾಗಿದೆ’ ಎಂದು ಅವರು ಹೇಳಿದ್ದಾರೆ.

ದೂರು ಆಧರಿಸಿ ಎಫ್ಐಆರ್ ದಾಖಲಿಸಿಕೊಂಡಿರುವ ಹಿರೇಕೆರೂರು ಠಾಣೆ ಪೊಲೀಸರು, ಗೋವಿನ ಜೋಳ ಕದ್ದ ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ.

ಪೊಲೀಸರ ಗಸ್ತು ಅಗತ್ಯ: ‘ಹಲವು ರೈತರು, ತಮ್ಮ ಫಸಲು ಕಟಾವು ಮಾಡಿದ ನಂತರ ಕಾಳುಗಳನ್ನು ರಸ್ತೆ ಅಥವಾ ಬಯಲಿಗೆ ತಂದು ಸುರಿಯುತ್ತಿದ್ದಾರೆ. ಕಣದ ಕೊರತೆ ಇರುವುದರಿಂದ ಬಹುತೇಕ ರೈತರು, ಬಯಲಿನಲ್ಲಿಯೇ ಕಾಳುಗಳನ್ನು ಒಣಗಿಸುತ್ತಿದ್ದಾರೆ. ರೈತರು ಕಾಳು ಒಣಗಲು ಹಾಕಿರುವ ಸ್ಥಳಗಳು ಹಾಗೂ ಸುತ್ತಮುತ್ತ ಪೊಲೀಸರ ಗಸ್ತು ಹೆಚ್ಚಿಸಬೇಕು’ ಎಂದು ಸವಣೂರು ತಾಲ್ಲೂಕಿನ ರೈತ ಶಂಕರಪ್ಪ ಆಗ್ರಹಿಸಿದರು.

‘ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವಿಸ್ ರಸ್ತೆಯಲ್ಲಿ ಗೋವಿನಜೋಳ, ಶೇಂಗಾ, ಸೋಯಾಬೀನ್ ಬೆಳೆಯನ್ನು ಒಣಗಲು ಹಾಕಲಾಗಿದೆ. ರೈತರ ಮನೆಯಲ್ಲಿ ಹೆಚ್ಚು ಜನರಿದ್ದರೆ, ಸರದಿ ಪ್ರಕಾರ ಕಾವಲು ಕಾಯುತ್ತಿದ್ದಾರೆ. ಒಂಟಿ ರೈತ ಇದ್ದರೆ, ಕಾವಲು ಕಾಯಲು ಕಷ್ಟಪಡುತ್ತಿದ್ದಾರೆ’ ಎಂದು ವಸ್ತುಸ್ಥಿತಿ ಬಿಚ್ಚಿಟ್ಟರು.

ವರದಹಳ್ಳಿ ರೈತ ಮಂಜಣ್ಣ, ‘ಈ ವರ್ಷ ಕೃಷಿ ಉತ್ಪನ್ನದ ಪ್ರಮಾಣ ಕಡಿಮೆ ಇದೆ. ಜಮೀನಿನಲ್ಲಿ ಕಣ ಮಾಡಿದರೆ, ಹಣ ಸುಖಾಸುಮ್ಮನೇ ಖರ್ಚಾಗುತ್ತದೆ. ಅದೇ ಕಾರಣಕ್ಕೆ, ಸರ್ವೀಸ್ ರಸ್ತೆಗಳಲ್ಲಿ ಕಾಳುಗಳನ್ನು ಒಣಗಲು ಹಾಕಿದ್ದೇನೆ’ ಎಂದರು.

‘ಗೋವಿನಜೋಳ, ಶೇಂಗಾ ಬೆಳೆಗೆ ಕಳ್ಳರ ಕಾಟವಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುವ ಜನರು, ರಾತ್ರಿ ಸಂದರ್ಭದಲ್ಲಿ ವಾಹನ ನಿಲ್ಲಿಸಿ ಶೇಂಗಾವನ್ನು ಚೀಲದಲ್ಲಿ ತುಂಬಿಕೊಂಡು ಹೋಗುತ್ತಿದ್ದಾರೆ. ಇಂಥ ಜನರಿಂದ ಬೆಳೆ ಕಾಯುವುದು ದೊಡ್ಡ ಸವಾಲಾಗಿದೆ’ ಎಂದು ಹೇಳಿದರು.

ಎಚ್ಚರಿಕೆ ವಹಿಸಲು ಸೂಚನೆ

ರಾಷ್ಟ್ರೀಯ ರಾಜ್ಯ ಹೆದ್ದಾರಿ ಹಾಗೂ ಬಯಲು ಪ್ರದೇಶಗಳಲ್ಲಿ ಬೆಳೆಗಳನ್ನು ಒಣಗಲು ಹಾಕುತ್ತಿರುವ ರೈತರ ಬಗ್ಗೆ ಪೊಲೀಸರು ಮಾನವೀಯತೆ ತೋರುತ್ತಿದ್ದಾರೆ. ಬೆಳೆ ಒಣಗಲು ಹಾಕಿರುವ ಸ್ಥಳಕ್ಕೆ ಹೋಗುತ್ತಿರುವ ಪೊಲೀಸರು ಕಳ್ಳರು ಹಾಗೂ ಅಪಘಾತಗಳ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸುವಂತೆ ಸೂಚನೆ ನೀಡುತ್ತಿದ್ದಾರೆ. ‘ಹೆದ್ದಾರಿ ಹಾಗೂ ಬಯಲು ಪ್ರದೇಶಗಳಲ್ಲಿ ಬೆಳೆ ಒಣಗಲು ಹಾಕದಂತೆ ಕೆಲ ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ. ಆದರೆ ಹಲವು ಪೊಲೀಸರು ಮಾನವೀಯತೆ ದೃಷ್ಟಿಯಿಂದ ಬೆಳೆ ಒಣಗಿಸಲು ಅವಕಾಶ ಮಾಡಿಕೊಡುತ್ತಿದ್ದಾರೆ. ತ್ವರಿತವಾಗಿ ಬೆಳೆಗಳನ್ನು ಒಣಗಿಸಿಕೊಂಡು ಮನೆ ಸೇರುವಂತೆಯೂ ಕೋರುತ್ತಿದ್ದಾರೆ’ ಎಂದು ರಾಣೆಬೆನ್ನೂರು ತಾಲ್ಲೂಕಿನ ರೈತ ಶಂಭಣ್ಣ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.