ಹಿರೇಕೆರೂರ: ‘ಬೆಳೆ ಹಾನಿಯಾದರೂ ಹಿರೇಕೆರೂರು ಹಾಗೂ ರಟ್ಟೀಹಳ್ಳಿ ತಾಲ್ಲೂಕಿನ ಹಲವು ರೈತರಿಗೆ, ವಿಮೆ ಹಣ ಬಂದಿಲ್ಲ’ ಎಂದು ಆರೋಪಿಸಿ ಗುರುವಾರ ದಿಢೀರ್ ಪ್ರತಿಭಟನೆ ನಡೆಸಿದ ರೈತರು, ಕಾರ್ಯಕ್ರಮ ನಡೆಸಲು ಬಂದಿದ್ದ ಕೃಷಿ ಇಲಾಖೆ ಅಧಿಕಾರಿಗಳಿಗೆ ಘೇರಾವ್ ಹಾಕಿದರು.

ತಾಲ್ಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ಗುರುವಾರ ‘ಅರಿವು ಕಾರ್ಯಕ್ರಮ’ ನಿಗದಿಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರೈತರು ಬಂದಿದ್ದರು. ಕಾರ್ಯಕ್ರಮಕ್ಕೂ ಮುನ್ನವೇ ಸ್ಥಳದಲ್ಲಿದ್ದ ರೈತರು, ಕೃಷಿ ಅಧಿಕಾರಿಗಳನ್ನು ತಡೆದು ತಮಗಾದ ಸಮಸ್ಯೆಗಳನ್ನು ಹೇಳಿಕೊಂಡು ಆಕ್ರೋಶ ವ್ಯಕ್ತಪಡಿಸಿದರು.

ರೈತ ಮುಖಂಡ ನವೀನ ಬಿ. ಹುಲ್ಲತ್ತಿ, ‘ಬೆಳೆ ವಿಮೆಯಲ್ಲಿ ರೈತರಿಗೆ ಸಾಕಷ್ಟು ಅನ್ಯಾಯವಾಗಿದೆ. ಶಾಸಕರು, ಲೋಕಸಭಾ ಸದಸ್ಯರು, ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ. ವಿಮೆ ಕಂಪನಿ ಜೊತೆಯಲ್ಲಿ ಶಾಮೀಲಾಗಿ ಮೌನವಾಗಿದ್ದಾರೆ’ ಎಂದು ಆರೋಪಿಸಿದರು.

‘ಒಂದು ತಿಂಗಳಿನಿಂದ ರೈತರಿಗೆ ಬೀಜ, ಗೊಬ್ಬರ ನೀಡುತ್ತಿಲ್ಲ. ಮುಂಗಾರು ಪ್ರವೇಶದ ನಂತರ ಬೀಜ, ಗೊಬ್ಬರ ಕೊಟ್ಟರೆ ರೈತರು ಬಿತ್ತನೆ ಮಾಡುವುದು ಹೇಗೆ ? ಎಫ್ಐಡಿ ಮೂಲಕ ಒಂದು ಎಕರೆಗೆ ಒಂದೇ ಚೀಲ ಗೊಬ್ಬರ ನೀಡಿದರೆ ಏನು ಪ್ರಯೋಜನ. ರೈತರ ಜೀವನದ ಜೊತೆ ಸರ್ಕಾರಗಳು ಆಟ ಆಡುತ್ತಿವೆ’ ಎಂದು ದೂರಿದರು.

‘ರೈತರಿಗೆ ಅನುಕೂಲ ಕಲ್ಪಿಸುವವರೆಗೂ ಹಾಗೂ ರೈತರ ಸಮಸ್ಯೆಗಳನ್ನು ಈಡೇರಿಸುವವರೆಗೂ ನಾವು ಹೋರಾಟ ಮಾಡುತ್ತೇವೆ. ಈಗ ಕೃಷಿ ಇಲಾಖೆ ಕಾರ್ಯಕ್ರಮ ತಡೆದು, ಅಧಿಕಾರಿಗಳಿಗೆ ಘೇರಾವ್ ಹಾಕಿದ್ದೇವೆ. ಮುಂದಿನ ದಿನಗಳಲ್ಲಿ ಯಾವುದೇ ಸರ್ಕಾರಿ ಕಾರ್ಯಕ್ರಮ ನಡೆದರೂ ಜನಪ್ರತಿನಿಧಿಗಳಿಗೆ ಘೇರಾವ್ ಹಾಕಿ ಪ್ರತಿಭಟನೆ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಸ್ಥಳಕ್ಕೆ ಬಂದಿದ್ದ ಹಿರೇಕೆರೂರು ಠಾಣೆ ಪೊಲೀಸರು, ರೈತರನ್ನು ಸಮಾಧಾನಪಡಿಸಿದರು. ನಂತರ, ಬೆಳೆ ವಿಮೆ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗೆ ರೈತರು ಮನವಿ ಸಲ್ಲಿಸಿದರು.

ಮುಖಂಡರಾದ ಚಂದ್ರಪ್ಪ ಬಂಗೇರ, ಸಚಿನ್ ಹುಲ್ಲತ್ತಿ, ಪವನ ಮಾಳಗಿ, ನಿಂಗಪ್ಪ ಕಾಳ್ವೆಹಳ್ಳಿ, ಶಂಕ್ರಪ್ಪ ಮಕ್ಕಳಿ, ಬೊಮ್ಮನಗೌಡ ಶಿತಿಕೊಂಡ, ಬಸನಗೌಡ ಬಂಗೇರ, ಬಾಬುಸಾಬ್ ಶೇಕಸನದಿ, ಶಂಕ್ರಪ್ಪ ಹುಲ್ಲತ್ತಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-22-1617217801

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.