ಹಾವೇರಿ: ಜಿಲ್ಲೆಯಾದ್ಯಂತ ಬಿತ್ತನೆ ಬೀಜ ವಿತರಣೆ ಚುರುಕುಗೊಂಡಿದ್ದು, ಪೊಲೀಸರ ಭದ್ರತೆ ಇರುವ ರೈತ ಸಂಪರ್ಕ ಕೇಂದ್ರಗಳ ಎದುರು ರೈತರು ಸರದಿಯಲ್ಲಿ ನಿಂತು ಶುಕ್ರವಾರ ಬೀಜ ಖರೀದಿಸಿದರು.

ಸವಣೂರಿನಲ್ಲಿ ಶಾಸಕ ಯಾಸೀರ ಅಹ್ಮದ್ ಖಾನ್ ಅವರ ಅಣ್ಣ ಮೊಹಮ್ಮದ್ ಮುಲ್ಲಾ ಅವರಿಗಾಗಿ ಕಾಯುತ್ತ ಬೀಜ ವಿತರಿಸಲು ತಡ ಮಾಡಿದ್ದಕ್ಕಾಗಿ ರೊಚ್ಚಿಗೆದ್ದ ರೈತರು, ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಮುಲ್ಲಾ ಅವರನ್ನು ತರಾಟೆಗೆ ತೆಗೆದುಕೊಂಡರು.

ಜಿಲ್ಲೆಯ 19 ರೈತ ಸಂಪರ್ಕ ಕೇಂದ್ರಗಳ ಪೈಕಿ ಹಲವು ಕಡೆಗಳಲ್ಲಿ ರಿಯಾಯಿತಿಯಲ್ಲಿ ಬೀಜ ವಿತರಣೆ ಆರಂಭವಾಗಿದೆ.

ಸವಣೂರು ರೈತ ಸಂಪರ್ಕ ಕೇಂದ್ರ ದಲ್ಲಿಯೂ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಬೀಜ ವಿತರಿಸುವುದಾಗಿ ಅಧಿಕಾರಿಗಳು ರೈತರಿಗೆ ತಿಳಿಸಿದ್ದರು.

ಅದನ್ನು ನಂಬಿ ರೈತರು, ನಸುಕಿನಲ್ಲಿಯೇ ಕೇಂದ್ರಕ್ಕೆ ಬಂದು ಸರದಿಯಲ್ಲಿ ನಿಂತುಕೊಂಡಿದ್ದರು.

ಬೆಳಿಗ್ಗೆ 10 ಗಂಟೆಯಾದರೂ ಬೀಜ ವಿತರಣೆ ಆರಂಭವಾಗಿರಲಿಲ್ಲ. ಅಸಮಾಧಾನಗೊಂಡಿದ್ದ ರೈತರು, ‘ಬೀಜ ಯಾವಾಗ ಕೊಡುತ್ತೀರಾ’ ಎಂದು ಪ್ರಶ್ನಿಸಿದರು. ‘ಶಾಸಕ ಬರುತ್ತಿ ದ್ದಾರೆ. ಅವರೇ ವಿತರಣೆಗೆ ಚಾಲನೆ ಕೊಡುತ್ತಾರೆ. ನಂತರ, ಬೀಜ ವಿತರಣೆ ಮಾಡಲಾಗುವುದು’ ಎಂದು ಉತ್ತರಿಸಿದ್ದರು.

ಮಧ್ಯಾಹ್ನ 12 ಗಂಟೆಯಾದರೂ ಶಾಸಕರು ಬರಲಿಲ್ಲ. ಅವರ ಬದಲು ಕೇಂದ್ರಕ್ಕೆ ಬಂದ ಅಣ್ಣ ಮೊಹಮ್ಮದ್ ಮುನ್ನಾ ಪಠಾಣ, ಬೀಜ ವಿತರಣೆಗೆ ಚಾಲನೆ ನೀಡಿದರು. ಅದನ್ನು ಕಂಡು ಗರಂ ಆದ ರೈತರು, ಅಧಿಕಾರಿಗಳು ಹಾಗೂ ಮುನ್ನಾ ವಿರುದ್ಧ ಘೋಷಣೆ ಕೂಗಿದರು. ಮುನ್ನಾ ಅವರನ್ನು ಕೇಂದ್ರದಿಂದ ಹೊರಗೆ ಹಾಕುವಂತೆ ಒತ್ತಾಯಿಸಿದರು.

ಮುನ್ನಾ ಪರ ಮಾತನಾಡಿದ ಅಧಿಕಾರಿಗಳು ಹಾಗೂ ಪೊಲೀಸರನ್ನೂ ರೈತರು ತರಾಟೆಗೆ ತೆಗೆದುಕೊಂಡರು. ನಂತರ, ಪೊಲೀಸರ ಭದ್ರತೆಯಲ್ಲಿ ಮುನ್ನಾ ಸ್ಥಳದಿಂದ ಹೊರಟುಹೋದರು. ಈ ವೇಳೆಯೂ ಅವರನ್ನು ತರಾಟೆಗೆ ತೆಗೆದುಕೊಂಡ ರೈತರು, ‘ತಮ್ಮ ಶಾಸಕನಾದರೆ, ಇಲ್ಲಿ ನಿನಗೇನು ಕೆಲಸ. ಪ್ರಚಾರ ಪಡೆಯಲು ಇದೇನು ಪಕ್ಷದ ವೇದಿಕೆಯಾ?’ ಎಂದು ಬಿಸಿ ಮುಟ್ಟಿಸಿದರು.

‘ರೈತರಿಗೆ ಬೀಜ ಕೊಡುವುದು ಕೃಷಿ ಇಲಾಖೆ ಜವಾಬ್ದಾರಿ. ಸರ್ಕಾರದ ಪ್ರತಿನಿಧಿಯಾಗಿ ಶಾಸಕರು ಬಂದು ಚಾಲನೆ ಕೊಡಬೇಕು. ಅದರ ಬದಲು ಶಾಸಕನ ಅಣ್ಣನಿಂದ ಚಾಲನೆ ಕೊಡಿಸುವುದು ಏಕೆ ? ಬೀಜದ ಹೆಸರಿನಲ್ಲಿ ಖಾಸಗಿಯವರಿಗೆ ಪ್ರಚಾರ ಕೊಡಿಸುವ ಅಧಿಕಾರಿಗಳು, ಗುಲಾಮರ ರೀತಿ ವರ್ತಿಸಬಾರದು. ರೈತರು ರೊಚ್ಚಿಗೆದ್ದರೆ, ಪರಿಸ್ಥಿತಿ ಸರಿ ಇರುವುದಿಲ್ಲ’ ಎಂದು ರೈತರು ಎಚ್ಚರಿಕೆ ನೀಡಿದರು. ಸ್ಥಳದಲ್ಲಿದ್ದ ತಹಶೀಲ್ದಾರ್ ರವಿ ಕೊರವರ ಅವರನ್ನೂ ರೈತರು ತರಾಟೆಗೆ ತೆಗೆದುಕೊಂಡರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-22-2069352442

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.